Advertisements

ಬಿಗ್ ಬಾಸ್ ನಿಂದ ಆಚೆ ಬಂದ ನಿಧಿ ಸುಬ್ಬಯ್ಯ ಮದುವೆ ಮತ್ತು ಗಂಡನ ಬಗ್ಗೆ ಭಾವುಕರಾಗಿ ಹೇಳಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಿಧಿ ಸುಬ್ಬಯ್ಯ ಮೊದಲ ಬಾರಿಗೆ ವೈವಾಹಿಕ ಜೀವನದ  ಬಗ್ಗೆ ಮಾತನಾಡಿದ್ದಾರೆ.. ವೈವಾಹಿಕ ಜೀವನದಲ್ಲಿ ನಡೆದ ಏಳು ಬೀಳುಗಳನ್ನ ನೆನೆದು ನಿಧಿ ಸುಬ್ಬಯ್ಯ ಅವರು ಭಾವುಕರಾಗಿದ್ದಾರೆ. ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಕಲರ್ಸ್ ವಾಹಿನಿಯವರು ಬಿಗ್ ಬಾಸ್ ನ ಎಲ್ಲಾ ಸ್ಪರ್ದಿಗಳಿಗೂ ಪೇ’ಸ್ಬುಕ್ ಲೈ’ವ್ ಮಾಡಿಸಿದ್ದಾರೆ.. ನೆನ್ನೆ ತಾನೆ ವೈಷ್ಣವಿ, ಅರವಿಂದ್ ಮತ್ತು ದಿವ್ಯಾ ಉರುಡುಗ ಲೈವ್ ಮಾಡಿದ್ದರು.. ಇನ್ನೂ ನಿಧಿ ಸುಬ್ಬಯ್ಯ ಮೊದಲ ಬಾರಿಗೆ ಮಾತನಾಡಿದ್ದಾರೆ. ಮಾತನಾಡುವಾಗ ಬಿಗ್ ಬಾಸ್ ಮನೆಯ ಕೆಲವು ನೆನಪುಗಳನ್ನ ವೀಕ್ಷಕರ ಜೊತೆ ಹಂಚಿಕೊಂಡಿದ್ದಾರೆ.. ವೀಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ವೀಕ್ಷಕರೊಬ್ಬರು ಎಲ್ಲರೂ ತಮ್ಮ ತಮ್ಮ ಜೀವನದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ..

Advertisements

ಆದರೆ ನೀವು ಯಾಕೆ ಹೇಳಿಕೊಂಡಿಲ್ಲ. ನಿಮ್ಮ ಮದುವೆ ಬಗ್ಗೆ ಯಾಕೆ ಮಾತನಾಡಿಲ್ಲ ಅಂತ ಕೇಳಿದ್ದಾರೆ.. ಆಗ ನಿಧಿ ಅವರು ಭಾವುಕರಾಗಿ ನನಗೆ ಮದುವೆ ಆಗಿತ್ತು ಅದು ಮುಗಿದು ಹೋದ ಅಧ್ಯಾಯ. ನನಗು ಅವ್ರಿಗೂ ಆಗಿ ಬರಲಿಲ್ಲ.. ನಾನು ಅಲ್ಲಿಂದ ಹೊರಗೆ ಬಂದು ಈಗ ಅಮ್ಮನ ಜೊತೆಗೆ ಇದ್ದೀನಿ. ಆ ವಿಷಯವನ್ನ ಯಾರೊಂದಿಗೂ ಮಾತನಾಡುವುದಕ್ಕೆ ಇಷ್ಟವಿಲ್ಲ.. ಯಾಕೆಂದರೆ ಅದರಿಂದ ಕರುಣೆ ಗಿಟ್ಟಿಸಿಕೊಳ್ಳೊದು ನಮಗೆ ಇಷ್ಟವಿಲ್ಲಾ. ನಾನು ಆ ವಿಷಯವನ್ನ ಅಮ್ಮನ ಜೊತೆಗೂ ಚರ್ಚೆ ಮಾಡಲ್ಲ.. ಅದರ ಬಗ್ಗೆ ಏನು ಹೇಳೊದು ಎಂದು ಮೌನವಾದರು. ಇನ್ನೂ ಎಲ್ಲೆರಿಗೂ ಗೊತ್ತಿರುವಾಗೆ ನಿಧಿ ಸುಬ್ಬಯ್ಯ ಒಂದು ಕಾಲದಲ್ಲಿ ಕರ್ನಾಟಕದ ಮನೆ ಮಾತಾಗುವಂತೆ ಸುದ್ದಿಯಲ್ಲಿದ್ದರು.. ಅವರು ನಟಿಸಿದ ಹಲವು ಸಿನಿಮಾಗಳು ಜನರಿಗೆ ಇಷ್ಟವಾಗಿತ್ತು. ನಂತರ ಇದ್ದಕ್ಕಿದ್ದಂತೆ ನಿಧಿ ಅವರು ಕಣ್ಮ’ರೆಯಾದರು..

ಆ ಸಮಯದಲ್ಲಿ ನಿಧಿ ಅವರಿಗೆ ಮದುವೆಯಾಗಿತ್ತು.. ಆದರೆ ವೈವಾಹಿಕ ಜೀವನ ಸರಿ ಬರಲಿಲ್ಲ. ಗಂಡನಿಂದ ನಿಧಿ ಸುಬ್ಬಯ್ಯ ಅವರು ದೂರವಾದ್ರು.. ಇದೇ ವಿಷಯವನ್ನ ನೆನಪು ಮಾಡಿಕೊಂಡ ನಿಧಿ ನನಗೆ ಅವರ ಬಗ್ಗೆ ಮಾತನಾಡೋದು ಇಷ್ಟವಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅವರ ಅಮ್ಮನನ್ನ ನೋಡಿದಾಗ ಅವರ ಅಮ್ಮ ಬಿಗ್ ಬಾಸ್ ಮನೆಯಲ್ಲಿ ಯಾಕೆ ಒಂದೇ ಬಣ್ಣದ ಬಟ್ಟೆ ಹಾಕ್ತಿದ್ದೆ.. ನಿನ್ನತ್ರ ಬೇರೆ ಬಟ್ಟೆ ಇರಲಿಲ್ವಾ ಅಂತ ಬೈ’ದಿದಾರಂತೆ.

ಆದರೆ ನಮಗೆ ಬರೀ ಗ್ರೇ ಕಲರ್ ಬಟ್ಟೆಗಳು ಇಷ್ಟವಾಗೋದು ಅದಕ್ಕೆ ಅದೇ ಕಲರ್ ಬಣ್ಣದ ಬಟ್ಟೆಗಳನ್ನ ಹಾಕ್ತಿದ್ದೆ ಅಂತ ನಿಧಿ ಹೇಳಿದ್ದಾರೆ.. ಈಗ ಬಿಗ್ ಬಾಸ್ ಮುಗಿಸಿಕೊಂಡು ಮೈಸೂರಿಗೆ ಹೋಗಿರುವ ನಿಧಿ ಅವರು ಬೆಳಗ್ಗೆ ಎದ್ದು ಮನೆಯಲ್ಲಿ ಅವರ ಸ್ಪೀಕರ್ ನಲ್ಲಿ ಜೋರಾಗಿ ಹಾಡನ್ನ ಹಾಕಿಕೊಂಡು ಡ್ಯಾನ್ಸ್ ಮಾಡ್ತಾರಂತೆ, ಜೊತೆಗೆ ಮಂಜು ಅವರ ಹಾಸ್ಯದ ಮಾತುಗಳು.. ಅವರ ಕಾಮಿಡಿ ಇವರಿಗೆ ತುಂಬಾ ಇಷ್ಟವಾಗ್ತಿತ್ತಂತೆ. ಯಾಕೆಂದರೆ ನಗೋದು ಅಂದರೆ ನಿಧಿ ಅವರಿಗೆ ತುಂಬಾ ಇಷ್ಟವಂತೆ.. ಈಗಾಗಿ ಹಲವಾರು ಬಿಗ್ ಬಾಸ್ ಜರ್ನಿಯ ನೆನಪುಗಳನ್ನ ‌ನಿಧಿ ಮೆಲುಕು ಹಾಕುತ್ತಾ  ನಗೆಯಿಂದಲೇ ಮಾತನಾಡಿದ್ದಾರೆ. ಇನ್ನೂ ಈ ಬಗ್ಗೆ ನಿಮ್ಮ ಅನಿಸಿಕೆ ಏನು..