Advertisements

ರಾತ್ರಿ ಕಾರನ್ನು ಪಾರ್ಕ್ ಮಾಡಿ ಬೆಳಗ್ಗೆ ಎದ್ದು ನೋಡಿದ ದಂಪತಿಗೆ ಊಹೆಗೂ ಸಿಗದಷ್ಟು ವಿಚಿತ್ರ ಎದುರಾಗಿದೆ.. ಏನದು ನೋಡಿ.

Kannada Mahiti

ನಮಸ್ತೆ ಸ್ನೇಹಿತರೆ, ಉತ್ತರಗಳಿಲ್ಲದ ಅದೆಷ್ಟೋ ವಿಸ್ಮಯಗಳು ವಿಚಿತ್ರಗಳು ಈ ಪ್ರಪಂಚದಲ್ಲಿ ಅಡಗಿದೆ.. ಕೆಲವೊಮ್ಮೆ ಅವು ಊಹೆಗೂ ಸಿಗದಷ್ಟು ವಿಚಿತ್ರವಾಗಿರುತ್ತದೆ. ಪ್ರತಿಕ್ಷಣ ನೂರಾರು ಕನಸುಗಳನ್ನು ಕಾಣುವ ನಾವು ಜೀ’ವ ಹೋದ ತಕ್ಷಣ ಮಣ್ಣಲ್ಲಿ ಸೇರಿಬಿಡುತ್ತೇವೆ.. ನಮ್ಮ ಕನಸುಗಳು ಸಹ ಗಾಳಿಯಲ್ಲಿ ಹಾರಿ ಹೋಗುತ್ತವೆ. ಇದೆಷ್ಟು ವಿಚಿತ್ರ ಅಲ್ವಾ.. ಕೆಲವೊಮ್ಮೆ ಮುಂದೆ ನಡೆಯುವ ಘಟನೆ ಕನಸಲ್ಲಿ ಬರುತ್ತದೆ‌. ನಂತರ ಅದೇ ಘಟನೆ ನಡೆಯುತ್ತದೆ. ಇದು ಹೇಗೆ ಸಾಧ್ಯ ಅನ್ನೊದು ದೊಡ್ಡ ವಿಸ್ಮಯ ಅಲ್ಲವೇ..

Advertisements

ಇಂತಹದ್ದೇ ಒಂದು ಘಟನೆ ನಡೆದಿದೆ. ಇಂಗ್ಲೇಂಡ್ ದೇಶದ ಸ್ಕಾರ್ತೋ ನಗರದಲ್ಲಿ ಸ್ಮಿತ್ ದಂಪತಿ ವಾಸ ಮಾಡುತ್ತಿದ್ದಾರೆ.. ಈಗ ಚಳಿಗಾಲ ಹಾಗಿರೋದ್ರಿಂದ ದಟ್ಟ ಮಂಜಿನಿಂದ ಕೂಡಿದೆ. ಆದರೆ ಆ ಒಂದು ದಿನ ಸ್ಮಿತ್ ದಂಪತಿಗೆ ದೊಡ್ಡ ವಿಸ್ಮಯ ಒಂದು ಕಾಣಿಸಿತು.. ರಾತ್ರಿ ತಮ್ಮ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ಪಾರ್ಕ್ ಮಾಡಿದ ಸ್ಮಿತ್ ದಂಪತಿ ಬೆಳಗ್ಗೆ ಎದ್ದು ನೋಡಿದಾಗ ಶಾಕ್ ಆದ್ರೂ. ಕಾರಣ ಮನೆಯ ಮುಂದೆ ನಿಲ್ಲಿಸದ ಕಾರಿನ ಮೇಲೆ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದೆ..

ಆದರೆ ಇಲ್ಲಿ ವಿಚಿತ್ರ ಏನೆಂದರೆ ಅದು ನಾಲ್ಕು ಬೆರಳಿನ ಹೆಜ್ಜೆ ಗುರುತು. ಇದು ಮನುಷ್ಯರ ಹೆಜ್ಜೆಯ ಗುರುತು ಆಗಿರಲು ಸಾಧ್ಯವೇ ಇಲ್ಲ.. ಇನ್ನೂ ಯಾವುದಾದರೂ ಪ್ರಾಣಿಯ ಹೆಜ್ಜೆಯ ಗುರುತು ಹಾಗಿರಬಹುದು ಎಂದು ಸಿಸಿ ಟಿವಿ ಪರಿಶೀಲನೆ ಮಾಡಿದಾಗ ಯಾವುದೇ ಪ್ರಾಣಿ ಆ ರಾತ್ರಿ ಆಕಡೆ ಬಂದೇಯಿಲ್ಲ, ಹಾಗೆ ಚಳಿಯಲ್ಲಿ ಯಾರು ಬರಿಗಾಲಿನಲ್ಲಿ ನಡೆಯಲು ಸಾಧ್ಯವಿಲ್ಲ..

ಇಂತಹ ಹೆಜ್ಜೆಯ ಗುರುತನ್ನು ಇವರು ಇಂದೆಂದೂ ಕಂಡೇಯಿಲ್ಲ ಹಾಗಾಗಿ ತಲೆ ಕೆಡಿಸಿಕೊಂಡಿರುವ ದಂಪತಿ ಈ ಹೆಜ್ಜೆ ಯಾರದು ಇರಬಹುದು ಎಂದು ಪೊಟೊ ತೆಗೆದು ಇಂಟರ್ ನೆಟ್ ನಲ್ಲಿ ಶೇರ್ ಮಾಡಿದ್ದು ಹತ್ತಿರದ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.. ವಿಚಿತ್ರ ಮತ್ತು ಭಯವನ್ನು ಉಂಟುಮಾಡಿರುವ ಈ ನಾಲ್ಕು ಬೆರಳುಗಳ ಹೆಜ್ಜೆ ಗುರುತು ಯಾರದು ಎಂದು ಇಲ್ಲಿಯವರೆಗೂ ತಿಳಿಯಲು ಸಾಧ್ಯವಾಗಿಲ್ಲ.. ಇನ್ನೂ ಈ ಹೆಜ್ಜೆ ಯಾರದು ಇರಬಹುದು ಎಂದು ನಿಮ್ಮ ಅನಿಸಿಕೆ ತಿಳಿಸಿ‌.