Advertisements

ನಿಖಿಲ್ ಹುಟ್ಟುಹಬ್ಬಕ್ಕೆ ಪತ್ನಿ ರೇವತಿ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಇಂದು 31 ರ ವಸಂತಕ್ಕೆ ಕಾಲಿಟ್ಟಿದ್ದಾರೆ.. ಇನ್ನೂ ಈ ವಿಶೇಷವಾದ ದಿನ ಪತ್ನಿ ರೇವತಿಯವರು ನಿಖಿಲ್ ಗೆ ಕೊಟ್ಟ ಉಡುಗೊರೆ ಏನು ಎಂದು ನೋಡೊಣ ಬನ್ನಿ. ನಿಖಿಲ್ ಅವರು ತಮ್ಮ ಹುಟ್ಟು ಹಬ್ಬವನ್ನು ಇಡೀ ಕುಟುಂಬದೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.. ಮನೆಯಲ್ಲಿ ತಂದೆ ಕುಮಾರಸ್ವಾಮಿ ತಾಯಿ ಅನಿತಾ ಕುಮಾರಿ, ಮತ್ತು ಪತ್ನಿ ರೇವತಿ ಜೊತೆ ಕೇಕ್ ಕತ್ತರಿಸಿ ನಂತರ ಅಪ್ಪ ಅಮ್ಮನ ಕಾಲಿಗೆ ಬಿದ್ದು ಆಶಿರ್ವಾದವನ್ನು ಪಡೆದುಕೊಂಡಿದ್ದಾರೆ.. ಈ ಪ್ರಯುಕ್ತ ನಿಖಿಲ್ ಅವರ ಜೇಪಿ ನಗರದ ಎದುರು ನೂರಾರು ಅಭಿಮಾನಿಗಳು ಜಮಾಯಿಸಿ ನೂರು ಕೇಜಿ ಕೇಕ್ ಅನ್ನು ಕತ್ತರಿಸಿ ಸಂಭ್ರಮಿಸಿದ್ದಾರೆ.

Advertisements

ನಿಖಿಲ್ ಹುಟ್ಟು ಹಬ್ಬದ ಸಲುವಾಗಿ ಹಲವೆಡೆ ರ’ಕ್ತದಾನ ಶಿಬಿರ ಆರೋಗ್ಯ ತಪಾಸಣೆ ಶಿಬಿರ ಮತ್ತು ಮುಂತಾದ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸಲಾಗಿದೆ.. ಇನ್ನೂ ಅಭಿಮಾನಿಗಳಿಗೆ ನಿಖಿಲ್ ಸೈನ್ಯ ವತಿಯಿಂದ ಊಟದ ವ್ಯವಸ್ಥೆ ಮಾಡಿಸಲಾಗಿದೆ. ಅಷ್ಟೇ ಅಲ್ಲದೇ ನಿಖಿಲ್ ನಟನೆಯ ರೈಡರ್ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ.. ಇನ್ನೂ ನಿಖಿಲ್ ಅವರ ಹುಟ್ಟು ಹಬ್ಬಕ್ಕೆ ಪತ್ನಿ ರೇವತಿ ಅವರು ಬೆಲೆ ಬಾಳುವ ವಾಚ್ ವೊಂದನ್ನ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ನಿಖಿಲ್ ಕುಮಾರಸ್ವಾಮಿ ಅವರು ಸಹ ತನ್ನ ಹುಟ್ಟುಹಬ್ಬದ ಪೊಟೊವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದು ಈ ರೀತಿ ತಿಳಿಸಿದ್ದಾರೆ.. ನನ್ನ ಮೊದಲ ದೇವರುಗಳಾದ ಅಪ್ಪ, ಅಮ್ಮನ ಜೊತೆ ಪ್ರತಿ ವರ್ಷದಂತೆ ಈ ವರ್ಷವೂ ನನ್ನ ಹುಟ್ಟುಹಬ್ಬವನ್ನ ಆಚರಿಸಿಕೊಂಡೆ. ಮತ್ತೊಂದು ವಿಶೇಷ ಏನಂದ್ರೆ, ನನ್ನ ಸಂಗಾತಿಯೊಂದಿಗೆ ಇದು ನನ್ನ ಮೊದಲ ಹುಟ್ಟುಹಬ್ಬದ ಸಂಭ್ರಮ.  ನನ್ನ ಹುಟ್ಟಿದ ದಿನವನ್ನ ಹಬ್ಬವನ್ನಾಗಿಸಿದ ಎಲ್ಲಾ ಪ್ರೀತಿಯ ಅಭಿಮಾನಿಗಳಿಗು ಮತ್ತು ಕಾರ್ಯಕರ್ತ ಸ್ನೇಹಿತರಿಗೂ ಅನಂತ ಧನ್ಯವಾದಗಳು ಎಂದು ನಿಖಿಲ್ ಅವರು ತಮ್ಮ ಜಾಲತಾಣದ ಅಕೌಂಟ್ ನಲ್ಲಿ ಬರೆದು ಪೊಟೊವನ್ನು ಹಂಚಿಕೊಂಡಿದ್ದಾರೆ..