ನಮಸ್ತೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಸ್ಯಾಂಡಲ್ ವುಡ್ ನಟ ಹಾಗೂ ರಾಜಕೀಯದಲ್ಲೂ ಆಸಕ್ತರಾಗಿರುವ ಯುವರಾಜ ನಿಖಿಲ್ ಕರೋ’ನಾ ಬರುವುದಕ್ಕೂ ಮುಂಚೆ ಇವರ ಮದುವೆ ನಿಶ್ಚಯ ವಾಗಿತ್ತು. ಇನ್ನೂ ಇವರ ವಿವಾಹ ಅದ್ದೂರಿಯಾಗಿ ನಡೆಯಬೇಕಾದದ್ದು ಸರಳವಾಗಿ ನಡೆದಿದೆ. ಹೌದು ಕರೋ’ನಾ ಸಂಕಷ್ಟದಿಂದ ಲಾಕ್ ಡೌನ್ ಆದ ಕಾರಣ ತೋಟದ ಮನೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಲಾಕ್ ಡೌನ್ ಮುಗಿದ ನಂತರ ದಂಪತಿ ಜೊತೆ ಮಡಿಕೇರಿಯ ಪ್ರವಾಸಕ್ಕೆ ತೆರಳಿ ಮರಳಿ ತಮ್ಮ ಬಿಡದಿಯ ತೋಟದ ಮನೆಯಲ್ಲಿ ಉಳಿದುಕೊಂಡಿದ್ದರು.

ಇನ್ನೂ ಲಾಕ್ ಡೌನ್ ನಲ್ಲಿ ಏನೂ ಕೆಲಸಗಳಿಲ್ಲದ ಕಾರಣ ನಿಖಿಲ್ ವ್ಯವಸಾಯವನ್ನು ಮಾಡಬೇಕೆಂದು ನಿರ್ದರಿಸಿ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದರು. ಇನ್ನೂ ನಿಖಿಲ್ ಅವರು ಲಾಕ್ ಡೌನ್ ನಿಂದ ನಗರದಿಂದ ಹಳ್ಳಿಗಳಿಗೆ ಹಿಂತಿರುಗಿ ವ್ಯವಸಾಯವನ್ನು ಮಾಡುತ್ತಿರುವ ಎಲ್ಲಾ ರೈತ ಮಕ್ಕಳಿಗೆ ಯಶಸ್ವಿಯಾಗಲಿ ಎಂದಿದ್ದರು. ಇದರ ಜೊತೆಗೆ ತಾತನ ಕಾಯಕವನ್ನು ಮಾಡುತ್ತ ಮುಂದುವರೆಸಿದ್ದಾರೆ. ಪತ್ನಿ ರೇವತಿಯವರು ಸಹ ನಿಖಿಲ್ ಅವರ ಕಾಯಕ್ಕೆ ಕೈ ಜೊಡಿಸಿದ್ದರು.

ಇನ್ನೂ ನಿಖಿಲ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚಿಗೆ ತುಂಬಾ ಆಕ್ವಿವ್ ಆಗಿದ್ದು ಕಾಯಕಗಳ ಬಗ್ಗೆ ತಮ್ಮ ಪತ್ನಿಯೊಂದಗಿನ ಸಂತೋಷದ ಕ್ಷಣಗಳ ಬಗ್ಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ಇನ್ನೂ ಅಭಿಮಾನಿಗಳಿಗೂ ಸಹ ಹಬ್ಬದ ದಿನಗಳಂದು ಶುಭಾಶಯಗಳನ್ನು ತಿಳಿಸುತ್ತಾ ಇರುತ್ತಾರೆ. ಇನ್ನೂ ನಿನ್ನೆ ಪತ್ನಿ ರೇವತಿ ಜೊತೆಗೆ ನಿಖಿಲ್ ವಿಶೇಷ ಸ್ಥಳಕ್ಕೆ ಹೋಗಿದ್ದು ಅಲ್ಲಿನ ಸಂತಸದ ಕ್ಷಣಗಳನ್ನು ಅಂಚಿಕೊಂಡಿದ್ದಾರೆ.

ಹೌದು ಸ್ನೇಹಿತರೆ ಪತ್ನಿ ರೇವತಿಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಕರೆದೊಯ್ದು ನಾಡಿನ ಮೈಸೂರಿನ ದಸರ ಉತ್ಸವದ ಅಂಬಾರಿ ಹೊರುವ ಗಜ ಅರ್ಜುನನ್ನು ಬೇಟಿ ಮಾಡಿದ್ದಾರೆ. ಇಷ್ಟೊತ್ತಿಗೆ ದಸರಾದಲ್ಲಿ ಬಾಗಿಯಾಗುವ ಎಲ್ಲಾ ಅನೆಗಳು ಮೈಸೂರಿಗೆ ಬರಬೇಕಿತ್ತು ಆದರೆ ಈಗ ಕೊರೊ’ನಾ ಇರುವ ಕಾರಣ ಮೈಸೂರಿನ ದಸರಾ ಉತ್ಸವದ ಬಗ್ಗೆ ಇನ್ನೂ ಯಾವುದೇ ನಿರ್ಣಯಗಳನ್ನು ತೆಗೆದುಕೊಂಡಿಲ್ಲ.

ಇನ್ನೂ ಅಭಯಾರಣ್ಯಕ್ಕೆ ಬೇಟಿಕೊಟ್ಟು ಅರ್ಜುನನ ಜೊತೆ ತೆಗೆಸಿಕೊಂಡ ಫೊಟೊಗಳನ್ನು ನಿಖಿಲ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಹೊರುವ ಗಜನಾಯಕ ಅರ್ಜುನ ಹಾಗೂ ದುರ್ಗಾಪರಮೇಶ್ವರಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಫೊಟೊಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಈ ಪೊಟೊಗಳು ತುಂಬಾ ವೈರಲ್ ಆಗಿದೆ.