Advertisements

ಅಭಿಮಾನಿಗಳಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡ ನಿಖಿಲ್ ರೇವತಿ.

Cinema

ನಮಸ್ತೆ ಸ್ನೇಹಿತರೆ ಸ್ಯಾಂಡಲ್ ವುಡ್‌ ನ ಯುವರಾಜ ಹಾಗೂ ರಾಜಕೀಯದಲ್ಲಿ ಆಸಕ್ತಿಯನ್ನು ಹೊಂದಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ಅವರಿಂದ ಈಗ ವಿಶೇಷ ಸುದ್ದಿಯೊಂದು ಹೊರಬಂದಿದೆ. ಹೌದು ಸ್ನೇಹಿತರೆ ನಿಖಿಲ್ ಹಾಗೂ ರೇವತಿಯ ಮದುವೆ ಅದ್ದೂರಿಯಾಗಿ ನಡೆಯಬೇಕಾದದ್ದು ಕರೋನ ಇದ್ದ ಕಾರಣ ಸರಳವಾಗಿ ತೋಟದ ಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಂತರ ದಂಪತಿಗಳು ಲಾಕ್ ಡೌನ್ ಇದ್ದ ಕಾರಣ ತಮ್ಮ ಬಿಡದಿಯ ತೋಟದಲ್ಲೇ ವಾಸವಾಗಿದ್ದರು.

Advertisements

ನಿಖಿಲ್ ಅವರು ಕೂಡ ಒಬ್ಬ ರೈತನ ಮಗನಾಗಿದ್ದು ಲಾಕ್ ಡೌನ್ ಸಮಯದಲ್ಲಿ ತಮ್ಮ ಪತ್ನಿಯ ಜೊತೆಗೆ ಜಮೀನಿನ ವ್ಯವಸಾಯ ನಡೆಸಬೇಕೆಂದು ನಿರ್ಧರಿಸಿ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದರು. ಇನ್ನೂ ಇದೆ ರೀತಿ ನಗರದಿಂದ ಹಳ್ಳಿಗಳಿಗೆ ಹಿಂತಿರುಗಿ ವ್ಯವಸಾಯದಲ್ಲಿ ತೊಡಗಿರುವ ಎಲ್ಲಾ ರೈತ ಮಕ್ಕಳಿಗೂ ಯಶಸ್ಸು ಸಿಗಲಿ ಎಂದು ತಿಳಿಸಿದ್ದರು. ಇನ್ನೂ ಮೊನ್ನೆಯಷ್ಟೇ ನಾಗರಹೊಳೆ ಅಭಯಾರಣ್ಯಕ್ಕೆ ಬೇಟಿ ನೀಡಿದ ನಿಖಿಲ್ ಅವರು ದಂಪತಿಯೊಂದಿಗೆ ಮೈಸೂರ ದಸರಾ ಅಂಬಾರಿ ಹೊರುವ ಗಜರಾಜ ಅರ್ಜುನ ನನ್ನು ಬೇಟಿ ಮಾಡಿದ್ದಾರೆ.

ಇನ್ನೂ ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ನಿಖಿಲ್ ಹಾಗೂ ರೇವತಿಯ ವೃತ್ತಿ ಜೀವನದ ವಿಚಾರವಾಗಿ ಸಿಹಿ ಸುದ್ದಿ ನೀಡಿದ್ದಾರೆ. ಇತ್ತ ನಿಖಿಲ್ ಅವರು ಹೊಸ ಸಿನಿಮಾ ಟೈಟಲ್ ಲಾಂಚ್ ಹಾಗುತ್ತಿದ್ದು ಆಕಡೆ ರೇವತಿಯವರು ತಮ್ಮ ವೃತ್ತಿಯಲ್ಲಿ ತೊಡಗಿಕೊಳ್ಳಲಿದ್ದಾರೆ. ಹೌದು ನಿಖಿಲ್ ಅವರ ನಾಲ್ಕನೇ ಸಿನಿಮಾದ ಮೋಷನ್ ಪೋಸ್ಟರ್ ಹಾಗೂ ಟೈಟಲ್ ಲಾಂಚ್ ಮಾಡುತ್ತಿದ್ದು ಇದೇ ಶುಕ್ರವಾರ 11 ನೇ ದಿನಾಂಕದಂದು ಮುಹೂರ್ತ ನಿಗಧಿಯಾಗಿದೆ.

ಜಾಗ್ವಾರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಿಖಿಲ್ ಯುವರಾಜನೆಂದು ಬಿರುದನ್ನು ಪಡೆದರು. ನಂತರ ಎರಡನೇ ಚಿತ್ರ ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ನಿಖಿಲ್ ಹಾಗೂ ರಚಿತಾ ರಾಮ್ ಅವರ ಜೋಡಿ ತೆರೆಯ ಮೇಲೆ ಒಂದಾಗಿತ್ತು. ಇನ್ನೂ ಮೂರನೇ ಸಿನಿಮಾ ಕುರುಕ್ಷೇತ್ರ ದಲ್ಲಿ ನಿಖಿಲ್ ಅವರು ಅಭಿಮನ್ಯು ಆಗಿ ಚಕ್ರವ್ಯೂಹವನ್ನು ಬೇದಿಸಿದ್ದರು. ಇನ್ನೂ ಈಗ ನಾಲ್ಕನೆ ಸಿನಿಮಾಗೆ ಸಕಲ ಸಿದ್ದತೆಗಳು ನಡೆದಿದ್ದು ಇದೇ ಶುಕ್ರವಾರದಂದು ಸಿನಿಮಾ ಟೈಟಲ್ ಹೊರ ಬೀಳಲಿದೆ. ಅದೇ ರೀತಿ ಮುಂದಿನ ಇನ್ನೂ ಎರಡು ಸಿನಿಮಾಗಳು ನಿಖಿಲ್ ಅವರ ಕೈಯಲ್ಲಿದೆ. ಒಟ್ಟಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಯುವರಾಜ ಬ್ಯುಸಿಯಾಗಿದ್ದಾರೆ ಎನ್ನಬಹುದು.

ಇನ್ನೂ ರೇವತಿಯವರು ಕೂಡ ಒಬ್ಬ ಆರ್ಕಿಟೆಕ್ಚರ್ ಆಗಿದ್ದು ತಮ್ಮದೇ ಆದ ವೃತ್ತಿ ಬದುಕನ್ನು ಆರಂಭಿಸುತ್ತಿದ್ದಾರೆ. ಹೌದು ಮೊದಲಿಗೆ ತಮ್ಮದೆ ಸ್ವಂತ ಮನೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಬಿಡದಿ ತೋಟದ ಪಾರ್ಮ್ ಹೌಸ್ ನಿರ್ಮಾಣ ಮಾಡಲು ರೇವತಿಯವರು ಸಂಪೂರ್ಣ ಪ್ಲಾನ್ ಹಾಗೂ ಜವಾಬ್ದಾರಿ ಹೊತ್ತಿದ್ದಾರೆ ಎನ್ನಾಲಾಗಿದೆ. ಇನ್ನೂ ಈ ಪಾರ್ಮ್ ಹೌಸ್ ಪರಿಸರ ಸ್ನೇಹಿಯಾಗಿರಲಿದೆ. ಪಾರ್ಮ್ ಹೌಸ್ ನಿರ್ಮಾಣ ಮಾಡಲು ಗಣೇಶ ಹಬ್ಬದಂದೇ ಗುದ್ದಲಿ ಪೂಜೆ ನಡೆದಿದ್ದು ಮುಂದಿನ ವರ್ಷದ ಹೊಳಗೆ ರೇವತಿಯವರು ಮೊದಲ ಮನೆಯನ್ನು ನಿರ್ಮಾಣ ಮಾಡಲಿದ್ದಾರೆ.