Advertisements

ಪತ್ನಿಯ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ ಸ್ಯಾಂಡಲ್ವುಡ್ ಯುವರಾಜ..

Cinema

ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಲಾಕ್ ಡೌನ್ ನಿಂದ ಚಿತ್ರೀಕರಣ ನಿಂತುಹೋಗಿದ್ದ ಕಾರಣ ಕುಟುಂಬದೊಂದಿಗೆ ತಮ್ಮ ಎಲ್ಲಾ ಸಮಯವನ್ನ ಕಳೆಯುತ್ತಿದ್ದಾರೆ. ಪ್ರೀತಿಯ ಮಡದಿಯ ಜೊತೆ ತೋಟದ ಮನೆ ಸುತ್ತಾಟ ಸೇರಿದಂತೆ ತಮ್ಮ ಸುತ್ತಲಿನ ಸ್ಥಳಗಳಿಗೆ ಒಟ್ಟಿಗೆ ಭೇಟಿ ಕೊಡುತ್ತಾ ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನ ಹಂಚಿಕೊಂಡು ಸಂತಸಪಟ್ಟಿದ್ದಾರೆ. ಇನ್ನು ಇಂದು ನಿಖಿಲ್ ಪತ್ನಿ ರೇವತಿಯವರ ಹುಟ್ಟುಹಬ್ಬ.

Advertisements

ತಮ್ಮ ಪ್ರೀತಿಯ ಮಡದಿಯ ಹುಟ್ಟುಹಬ್ಬವನ್ನ ಬಹಳ ವಿಶೇಷವಾಗಿ, ತುಂಬಾ ಸರಳವಾಗಿ ಆಚರಣೆ ಮಾಡಿಕೊಂಡಿದ್ದಾರೆ ನಟ ನಿಖಿಲ್ ಕುಮಾರಸ್ವಾಮಿ. ಇನ್ನು ನಿಖಿಲ್ ರೇವತಿಯಷ್ಟೇ ಈ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಇನ್ನು ಪ್ರೀತಿಯ ಮಡದಿ ರೇವತಿ ಕೇಕ್ ಕಟ್ ಮಾಡುತ್ತಿರುವ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಆ ಪೋಟೋಗೆ ಹುಟ್ಟು ಹಬ್ಬದ ಶುಭಾಶಯಗಳು ಚಿನ್ನ ಎಂಬ ಕ್ಯಾಪ್ಶನ್ ಕೊಟ್ಟಿದ್ದು ಎಮೋಜಿಯನ್ನ ಹಾಕಿಕೊಂಡಿದ್ದಾರೆ.

ಇನ್ನು ಈ ಹುಟ್ಟುಹಬ್ಬದ ವಿಶೇಷ ಎಂದ್ರೆ ದಂಪತಿಗಳಿಬ್ಬರು ಮ್ಯಾಚಿಂಗ್ ಡ್ರೆಸ್ ನ್ನ ತೊಟ್ಟಿದ್ದಾರೆ. ಇನ್ನು ರೇವತಿಯವರು ಮ್ಯಾಂಗೋ ಚೀಸ್ ಕೇಕ್ ಕತ್ತರಿಸುತ್ತಿದ್ದಾರೆ. ಇನ್ನು ಈ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೂಡಲೇ ಸಾವಿರಾರು ಲೈಕ್ಸ್ ಜೊತೆಗೆ ಕಾಮೆಂಟ್ಸ್ ಬಂದಿದ್ದು, ನಿಖಿಲ್ ಅಭಿಮಾನಿಗಳು ಹ್ಯಾಪಿ ಬರ್ತಡೇ ಮೇಡಂ ಎಂದು ರೇವತಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನ ಹೇಳಿದ್ದಾರೆ.