Advertisements

ರೈಡರ್​ ಯಾವ ರೀತಿ ಸೌಂಡ್​ ಮಾಡಲಿದ್ದಾನೆ ಗೊತ್ತೇ! ಕೊನೆಗೂ ಮೂವಿ ರಿಲೀಸ್..

Cinema

ಸ್ಯಾಂಡಲ್​ವುಡ್ ಯುವರಾಜ ನಿಖಿಲ್ ಕುಮಾರ್ ಒಂದು ಬಿಗ್ ಅನೌನ್ಸಮೆಂಟ್ ಮಾಡ್ತಾರೆ ಅನ್ನೋ ವಿಚಾರ ಕಳೆದ ಒಂದಷ್ಟು ದಿನದಿಂದ ಚಾಲ್ತಿಯಲ್ಲಿತ್ತು.. ಅದೇನ್ ಇರಬಹುದು ನಿಖಿಲ್ ಅನೌನ್ಸ್​​​ ಮಾಡ್ತಿರೋ ಹೊಸ ಬಿಗ್ ಅನೌನ್ಸ್​​ಮೆಂಟ್ ಅಂತ ಕಾತುರತೆಯಿಂದ ಕಾದಿದ್ದ ಸಿನಿ ಪ್ರೇಮಿಗಳಿಗೆ ಸಿಹಿಯಾದ ಉತ್ತರ ಸಿಕ್ಕಿದೆ.. ರೈಡರ್​’ ಸ್ಯಾಂಡಲ್​ವುಡ್​ನ ಯುವರಾಜ ನಿಖಿಲ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ.. ನಿಖಿಲ್​ ಅವರು ‘‘ಸೀತಾ ರಾಮ ಕಲ್ಯಾಣ’’ ಚಿತ್ರದ ನಂತ್ರ ‘ರೈಡರ್​‘ ಅವತಾರದಲ್ಲಿ ಕಾಣಿಸಿದ್ದು, ಚಿತ್ರದ ಟ್ರೈಲರ್ ​ಹಾಡುಗಳು ಈಗಾಗಲೇ ಸಖತ್​ ಸೌಂಡ್​ ಮಾಡ್ತಿವೆ.. ಶೂಟಿಂಗ್​ ಮುಗಿಸಿದ ಮೇಲೆ ಚಿತ್ರಪ್ರೇಮಿಗಳಿಗೆ ಸರ್ಪ್ರೈಸ್​ ಮೇಲೆ ಸರ್ಪ್ರೈಸ್​ ಕೊಡ್ತಿದ್ದ ‘ರೈಡರ್​’ ಬಳಗ ಈಗ ಬಿಗ್​ ಅನೌನ್ಸ್​ ಮೆಂಟ್​ ಮೂಲಕ ನಿಖಿಲ್​ ಅಭಿಮಾನಿಗಳ ಕಾತುರ ಹೆಚ್ಚಿಸಿದ್ದಾರೆ..

[widget id=”custom_html-3″]

Advertisements

ನಿಖಿಲ್​ ಅಭಿಮಾನಿಗಳ ಕುತೂಹಲವನ್ನ ಈಗ ರೈಡರ್​ ಚಿತ್ರತಂಡ ತಣಿಸಿದ್ದು, ರೈಡರ್​ ಚಿತ್ರದ ರಿಲೀಸ್​ ಡೆಟ್​ ಅನೌನ್ಸ್ ಆಗಿದೆ.. ಯೆಸ್​.. ನಿಖಿಲ್​ ಅಭಿನಯದ 4ನೇ ಚಿತ್ರ ‘ರೈಡರ್​’ ಆಗಮನಕ್ಕೆ ಮುಹೂರ್ತ ಫಿಕ್ಸ್​ ಆಗಿದ್ದು, ಡಿಸೆಂಬರ್​24ಕ್ಕೆ ನಿಖಿಲ್​ ಕುಮಾರ್​ ‘ರೈಡರ್​’ ಅವತಾರದಲ್ಲಿ ಕನ್ನಡ ಮತ್ತು ತೆಲುಗು ಅಭಿಮಾನಿಗಳಿಗೆ ದರ್ಶನ ಕೊಡಲಿದ್ದಾರೆ.. ಹೌದು..ರೈಡರ್​ ಸಿನಿಮಾ ಡಿ.. 24ಕ್ಕೆ ಕನ್ನಡ ಮತ್ತು ತೆಲುಗು 2 ಭಾಷೆಯಲ್ಲಿ ಅದ್ದೂರಿಯಾಗಿ ರಿಲೀಸ್​ ಆಗಲಿದೆ.. ಈಗಾಗಲೇ ಎಲ್ಲಾ ಕೆಲಸ ಮುಗಿಸಿರುವ ರೈಡರ್​ ಚಿತ್ರತಂಡ ಸೈಲೆಂಟ್​ ಆಗಿ ಚಿತ್ರದ ಪ್ರಮೋಶನ್​ ಕೆಲಸದಲ್ಲಿ ಬ್ಯುಸಿಯಾಗಿದೆ..

[widget id=”custom_html-3″]

ರೈಡರ್​ ಚಿತ್ರವನ್ನು ಟಾಲಿವುಡ್​ ಡೈರೆಕ್ಟರ್​ ವಿಜಯ್​ ಕುಮಾರ್​ ಕೊಂಡ ಡೈರಕ್ಷನ್​ ಮಾಡಿದ್ದು,ನಿಖಿಲ್​ಗೆ ಜೋಡಿಯಾಗಿ ಕಾಶ್ಮೀರಾ ಪರದೇಶಿ ಸ್ಕ್ರೀನ್​ ಶೇರ್​ ಮಾಡಿದ್ದಾರೆ.. ಡಿಸೆಂಬರ್ 24 ಅಥವಾ ಡಿಸೆಂಬರ್ ಕಡೆಯವ ವಾರ ಸಿನಿಮಾ ಮಂದಿಗೆ ಸಖತ್ ಲಕ್ಕಿ ಡೇಟ್.. ಈ ಡೇಟ್ ನಿಖಿಲ್ ಕುಮಾರ್ ಅವರಿಗೆ ಸಿಕ್ಕಿರೋದು ಅಭಿಮಾನಿಗಳಿಗೆ ಸಂತಸದ ವಿಚಾರ..ಡಿಸೆಂಬರ್​ನಲ್ಲಿ ಸಾಲು ಸಾಲು ಚಿತ್ರಗಳು ರಿಲೀಸ್​ ಆಗ್ತಿದ್ದು,, ಈಗ ಅವುಗಳ ಸಾಲಿಗೆ ‘ರೈಡರ್​’ ಎಂಟ್ರಿ ಕೊಟ್ಟಿದ್ದಾನೆ.. ಅಲ್ಲದೆ ಡಿಸೆಂಬರ್​ನಲ್ಲಿ ಟಾಲಿವುಡ್​, ಬಾಲಿವುಡ್​ ಚಿತ್ರಗಳು ಥಿಯೇಟರ್​ಗೆ ದಾಂಗುಡಿ ಇಡಲಿದ್ದು, ಇವುಗಳ ಮಧ್ಯೆ ‘ರೈಡರ್​’ ಯಾವ ರೀತಿ ಸೌಂಡ್​ ಮಾಡಲಿದ್ದಾನೆ ಕಾದು ನೋಡಬೇಕು..

[widget id=”custom_html-3″]