Advertisements

ಲಾಕ್ ಡೌನ್ ವೇಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಖ್ಯಾತ ನಟ

Cinema

ಹ್ಯಾಪಿ ಡೇಸ್ ಸೇರಿದಂತೆ ಕಾರ್ತಿಕೇಯ, ಕಿರಿಕ್ ಪಾರ್ಟಿ ಚಿತ್ರದಂತಹ ಹಲವಾರು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ಟಾಲಿವುಡ್ ಖ್ಯಾತ ನಟ ನಿಖಿಲ್ ಸಿದ್ದಾರ್ಥ್ ಲಾಕ್ ಡೌನ್ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರದಂದು ಹೈದರಾಬಾದ್ ನಲ್ಲಿ ಸಪ್ತಪದಿ ತುಳಿದಿರುವ ನಿಖಿಲ್, ವೃತ್ತಿಯಲ್ಲಿ ವೈದ್ಯೆಯಾಗಿರುವ ಪಲ್ಲವಿ ವರ್ಮಾ ಎಂಬುವವರನ್ನ ಮದುವೆ ಮಾಡಿಕೊಂಡಿದ್ದಾರೆ.

Advertisements

ಲಾಕ್ ಡೌನ್ ಇರುವ ಕಾರಣ ಸರಳವಾಗಿ ನಡೆದ ಈ ಮದುವೆಯಲ್ಲಿ ಆಪ್ತರು, ಕುಟುಂಬವರ್ಗದವರು ಸೇರಿದಂತೆ ಕೇವಲ ೩೦ ಮಂದಿಯಷ್ಟೇ ಭಾಗವಹಿಸಿದ್ದಾರೆ. ಇನ್ನು ಈ ಮದುವೆಯಲ್ಲಿ ವರ ನಿಖಿಲ್ ಸಿದ್ದಾರ್ಥ್ ಗೋಲ್ಡನ್ ಹಾಗೂ ಕೆಂಪು ಬಣ್ಣದ ಶೇರ್ವಾನಿಯಲಿ ಕಾಣಿಸಿಕೊಂಡರೆ, ನವ ವಧು ಪಲ್ಲವಿ ವರ್ಮಾ ಕೆಂಪು ಬಣ್ಣದ ಕಾಂಜೀವರಂ ಸೀರಿಯಲ್ಲಿ ಮಿಂಚಿದ್ದಾರೆ.

ಇನ್ನು ಏಪ್ರಿಲ್ ೧೬ಕ್ಕೆ ನಿಗದಿಯಾಗಿದ್ದ ಈ ಮದುವೆ ಲಾಕ್ ಡೌನ್ ಕಾರಣದಿಂದಾಗಿ ದಿನಾಂಕವನ್ನ ಮುಂದಕ್ಕೆ ಹಾಕಲಾಗಿತ್ತು. ಇನ್ನು ನಟ ನಿಖಿಲ್ ಮದುವೆಗೆ ಮುಂಚೆ ಹಾಗೂ ಮದುವೆಯ ಫೋಟೋ, ವಿಡಿಯೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ನವವಧು ವರರಿಗೆ ಶುಭಹಾರೈಸಿದ್ದಾರೆ. ಇನ್ನು ಫೋಟೋಗಳಲ್ಲಿ ಲಾಕ್ ಡೌನ್ ನಿಯಮದಂತೆ ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸಿದ್ದಾರೆ.