Advertisements

ನೀರಿಗಾಗಿ ಭಾವಿ ತೋಡುತ್ತಿದ್ದ ರೈತನಿಗೆ 6 ಎಕರೆ ಜಮೀನಿನಲ್ಲಿ ಏನ್ ಸಿಕ್ಕಿದೆ ಗೊತ್ತಾ? ಇಡೀ ದೇಶವೇ ಶಾಕ್..

Kannada Mahiti

ಕೊರೊನಾ ಸಾಂಕ್ರಾಮಿಕ ರೋಗವನ್ನು ದೇಶಕ್ಕೆ ಪಸರಿಸಿದ ಕುಖ್ಯಾತಿಯನ್ನು ಪಡೆದುಕೊಂಡಿರುವ ಚೀನಾದಲ್ಲಿ ನಡೆದ ಈ ಒಂದು ಘ’ಟ’ನೆ ಬಗ್ಗೆ ಕೇಳಿದ್ರೆ ನಿಜಕ್ಕೂ ಹುಬ್ಬೇರಿಸದೇ ಇರಲಾರಿರಿ ಅಂತ ಅನಿಸುತ್ತೆ. ಆ ದಿನ ಒಬ್ಬ ರೈತ ತನ್ನ ಹೊಲದಲ್ಲಿ ಬಾವಿ ತೋಡುತ್ತಿದ್ದ. ಏಕಾಂಗಿಯಾಗಿ ಬಾವಿ ತೋಡುತ್ತಲೇಯಿದ್ದ. ಸುಮಾರು ಆಳಕ್ಕೆ ಹೋದ ಮೇಲೆ ಆತನಿಗೆ ಓರ್ವ ಸೈನಿಕನ ಪ್ರತಿಮೆ ದೊರೆಯುತ್ತೆ. ಫುಲ್ ಖುಷಿಯಾಗಿ ತನ್ನ ಜಾಗದಲ್ಲಿ ನಿಧಿಯಿದೆ ಅಂತ ಭಾವಿಸಿ ಮತ್ತಷ್ಟು ಆಳಕ್ಕೆ ಬಾವಿ ತೋಡಲಿಕ್ಕೆ ಶುರು ಮಾಡುತ್ತಾನೆ. ಆಗ ಆತನಿಗೆ ಮತ್ತೊಂದು ರೂಪದ ಸೈನಿಕನ ಪ್ರತಿಮೆಗಳೇ ದೊರೆಯುತ್ತವೆ.

[widget id=”custom_html-3″]

Advertisements

ಇದನ್ನು ನೋಡಿ ತಬ್ಬಿಬ್ಬಾಗಿ ಇಲ್ಲಿ ನಿಧಿಯಲ್ಲ ಬೇರೆನೋಯಿದೆ ಅಂತ ಭಾವಿಸಿ ತಕ್ಷಣ ಗಾ’ಬ’ರಿಗೊಂಡು ಈ ವಿಚಾರವನ್ನು ಸರ್ಕಾರಕ್ಕೆ ಮುಟ್ಟಿಸುತ್ತಾನೆ. ತಕ್ಷಣ ಚೀನಾ ಸರ್ಕಾರ ಈ ಸೋಜಿಗದ ಸಂಗತಿಯನ್ನು ನೋಡಲು ಪುರಾತತ್ವ ಇಲಾಖೆಯನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿತು. ಸ್ಥಳದಲ್ಲಿ ಮತ್ತಷ್ಟು ಆಳಕ್ಕೆ ಹೋದಂತೆ ಅವರಿಗೆ ಇನ್ನಷ್ಟು ಸೈನಿಕರ ಪ್ರತಿಮೆಗಳು ದೊರೆತವು. ಜೊತೆಗೆ ಒಂದಷ್ಟು ಋಥಗಳ ಪ್ರತಿಮೆ ಹಾಗೇ ಅಕ್ಷಪಹಿಣಿ ಸೈನ್ಯದ ಪ್ರತಿಮೆಗಳು ಲಭ್ಯವಾದವು. ಇನ್ನೊಂದು ಕು’ತೂ’ಹಲಕಾರಿ ವಿಚಾರ ಅಂದ್ರೆ ಪ್ರತಿಯೊಂದು ಪ್ರತಿಮೆಗಳು ಕೂಡ ಇನ್ನೊಂದು ಮುಖವನ್ನು ಹೋಲುತ್ತಿದ್ದವು.

[widget id=”custom_html-3″]

ಒಂದೊಂದು ಪ್ರತಿಮೆ ಸಹ ಬೇರೆ ಬೇರೆ ರೂಪ ಹೊಂದಿತ್ತು. ಹೀಗೆ ಸುಮಾರು ಒಂದುವರೆ ವರ್ಷಗಳ ಕಾಲ ಭೂಮಿಯಿಂದ ಪ್ರತಿಮೆಗಳನ್ನು ತೆಗೆಯುವ ಕೆಲಸ ಮಾಡಲಾಯಿತು. ಫಲವಾಗಿ 8 ಸಾವಿರ ಸೈನಿಕರ ಪ್ರತಿಮೆ ಹಾಗೂ 120 ರಥಗಳ ಪ್ರತಿಮೆ ಲಭ್ಯವಾದವು. ಎಲ್ಲಾ ಪ್ರತಿಮೆಗಳು ಸಹ ಕ್ರಿಸ್ತ ಪೂರ್ವ 240ನೇ ಇಸವಿಯದ್ದು ಎಂಬ ವಿಚಾರ ಲಭ್ಯವಾಯಿತು. ಬಳಿಕ ಸಾಕಷ್ಟು ರಿಸರ್ಚ್ ಮಾಡಿದ ಬಳಿಕ ಅರ್ಥವಾದ ವಿಚಾರ ಏನಂದ್ರೆ ಈ ಎಲ್ಲ ಪ್ರತಿಮೆಗಳನ್ನು ನಿರ್ಮಿಸಿದ್ದು ಬೇರೆ ಯಾರು ಅಲ್ಲ, ಚೀನಾ ದೇಶದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಭಾಜನನಾಗಿದ್ದ ಕಿನ್ ಷಿ ಹುವಾಂಗ್ ಈ ಪ್ರತಿಮೆಗಳನ್ನು ನಿರ್ಮಿಸಿದ್ದ ಎಂಬ ಬಗ್ಗೆ ಮಾಹಿತಿ ದೊರೆಯುತ್ತದೆ.

[widget id=”custom_html-3″]

ಅಷ್ಟಕ್ಕೂ ಈ ಚಕ್ರವರ್ತಿ ಯಾಕೆ ಈ ರೀತಿ ಮಾಡಿದ ಅಂತ ನೋಡಿದಾಗ ಆತನಿಗೆ ಪುನರ್‌ಜನ್ಮಗಳ ಬಗ್ಗೆ ಅಗಾಧವಾದ ನಂಬಿಕೆಯಿತ್ತಂತೆ. ಈ ಆಳವಾದ ನಂಬಿಕೆಯೇ ಕಿನ್ ಷಿ ಹುವಾಂಗ್ ತನ್ನ ಆಡಳಿತಾವಧಿಯ ಸೈನಿಕರ ರಥಗಳ ಪ್ರತಿಮೆ ಮಾಡಲು ಕಾರಣ ಅಂತ ಹೇಳಲಾಗ್ತಿದೆ. ಮತ್ತೆ ತಾನೂ ಇನ್ನೊಂದು ಜನ್ಮ ಎತ್ತಿ ಬಂದಾಗ ತನ್ನ ಆಡಳಿತಾವಧಿ ಹೇಗಿತ್ತು? ಯಾವ ಯಾವ ಸೈನಿಕರು ರಥಗಳಿತ್ತು ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಸಲುವಾಗಿ ಕಿನ್ ಷಿ ಹುವಾಂಗ್ ಈ ರೀತಿಯಾಗಿ ಸೈನಿಕರ ಪ್ರತಿಮೆಗಳನ್ನು ಮಾಡಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಲಭ್ಯವಾಗಿದೆ..