Advertisements

ಕಾರ್ಮಿಕರ ವಿಚಾರದಲ್ಲಿ, ನಿರ್ಮಲಾ ಸೀತಾರಾಮನ್ ರವರು ಇದಕ್ಕೆ ಪರ್ಮಿಷನ್ ಕೊಟ್ಟರೆ ನಾನು ಸಿದ್ದ ಎಂದು ಸವಾಲ್ ಹಾಕಿದ ರಾಹುಲ್ ಗಾಂಧಿ ?

News

ಕರೋನಾ ಕಾರಣ ಲಾಕ್ ಡೌನ್ ಆಗಿರುವ ಕಾರಣ ದೇಶದಾದ್ಯಂತ ಇರುವ ವಲಸೆ ಕಾರ್ಮಿಕರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಸಾವಿರಾರು ಕಾರ್ಮಿಕರು ಕೆಲಸ ಇಲ್ಲದೆ ಅವರವರ ಊರುಗಳಿಗೆ ಕಾಲ್ನಡಿಗೆಯಲ್ಲೇ ನಡೆದುಕೊಂಡು ಹೋಗುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಸಂಸದರಾಗಿರುವ ರಾಹುಲ್ ಗಾಂಧಿ ಅವರು ದೆಹಲಿಯ ಸೇತುವೆಯೊಂದರ ಬಳಿ ತಮ್ಮ ಊರುಗಳಿಗೆ ನಡೆದುಕೊಂಡೇ ಹೋಗುತ್ತಿದ್ದ ಕಾರ್ಮಿಕರ ಬಳಿ ರಸ್ತೆ ಪಕ್ಕದಲ್ಲೇ ಕುಳಿತು ಅವರ ಕಷ್ಟಗಳ ಕುರಿತು ಮಾತನಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಇನ್ನು ಇದನ್ನ ಗಮನಿಸಿದ್ದ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ರವರು ರಾಹುಲ್ ಗಾಂಧಿಯವರು ನಾಟಕ ಆಡುತ್ತಿದ್ದು, ಕಾರ್ಮಿಕರ ಬಳಿ ಕುಳಿತು ಫೋಟೋಗಳಿಗೆ ಪೋಸ್ ಕೊಡುವ ಬದಲು, ಅವರ ಮಕ್ಕಳನ್ನ ಎತ್ತಿಕೊಂಡು ಸೂಟ್ಕೇಸ್ ಹಿಡಿದುಕೊಂಡು ಅವರ ಜೊತೆಯೇ ನಡೆದುಕೊಂಡೇ ಹೋಗಬಹುದಿತ್ತು ಎಂದು ಹೇಳಿದ್ದರು.

ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ಅವರು, ನಿರ್ಮಲಾ ಸೀತಾ ರಾಮನ್ ರವರು ನನಗೆ ಪರ್ಮಿಷನ್ ಕೊಟ್ಟರೆ ಉತ್ತರಪ್ರದೇಶಕ್ಕೆ ನಾನು ನಡೆದುಕೊಂಡೇ ಕಾಲ್ನಡಿಗೆಯಲ್ಲೇ ಹೋಗಲು ಸಿದ್ದ ಎಂದು ಸವಾಲು ಹಾಕಿದ್ದಾರೆ. ಇನ್ನು ಸಾವಿರಾರು ವಲಸೆ ಕಾರ್ಮಿಕರು ಕೆಲಸವಿಲ್ಲದೇ ತಮ್ಮ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವಾಗ ಅವರ ಈ ಸ್ಥಿತಿಗೆ ನಾಟಕ ಎನ್ನುತ್ತಿದ್ದೀರಾ ಎಂದು ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದಾರೆ ಎಂದು ಹೇಳಲಾಗಿದೆ.