Advertisements

ಕುಣಿಯುವಾಗ ಯಡವಟ್ಟು ನಿವೇದಿತಾ ಗೌಡ .. ಇದೆಲ್ಲ ಬೇಕಿತ್ತಾ! ವೀಡಿಯೊ ನೋಡಿ

Cinema

ಇತ್ತೀಚೆಗೆ ರಾ ರಾ ರಕ್ಕಮ್ಮ ಹಾಡನ್ನು ಬಿಡುಗಡೆ ಮಾಡಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ ವಿಕ್ರಾಂತ್ ರೋಣ ಚಿತ್ರತಂಡ. ಹಾಡಿಗೆ ನೀಡಿರುವ ಸಂಗೀತ ಹಾಡಿನ ಸಾಹಿತ್ಯ ಅದರಲ್ಲಿ ಕಿಚ್ಚ ಸುದೀಪ್ ಅವರು ಮತ್ತು ಶ್ರೀಲಂಕಾ ಬ್ಯೂಟಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಟೆಪ್ ಹಾಕಿರುವ ರೀತಿಗೆ ವೀಕ್ಷಕರು ಫಿದಾ ಆಗಿದ್ದು ಹಾಡನ್ನು ಪದೇ ಪದೇ ಕೇಳಿ ಗುನುಗುತ್ತಿದ್ದಾರೆ. ಹೌದು ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು ದಿನಗಳನ್ನು ಎಣಿಸುತ್ತಿದ್ದಾರೆ ಕಿಚ್ಚನ ಅಭಿಮಾನಿಗಳು. ಹೌದು 10 ಭಾಷೆಗಳಲ್ಲಿ ಬಿಡುಗಡೆ ಆಗುವ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ದಿನ ಚಿತ್ರಮಂದಿರದಲ್ಲಿ ಹಬ್ಬ ಮಾಡುವುದಂತೂ ಖಂಡಿತ.

Advertisements

ನ್ನು ರಾ ರಾ ರಕ್ಕಮ್ಮ ಹಾಡು ಎಲ್ಲರಿಗೂ ಒಂದು ರೀತಿಯ ಅಡಿಕ್ಷನ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆಯುತ್ತಿದೆ. ಇನ್ನು ರಾ ರಾ ರಕ್ಕಮ್ಮ ಹಾಡಿನ ಹವಾ ಹೇಗಿದೆ ಅಂದರೆ ಸಾಕಷ್ಟು ಸೆಲೆಬ್ರಿಟಿಗಳಿಗೂ ಸಹ ಈ ಹಾಡು ತುಂಬಾ ಇಷ್ಟವಾಗಿದ್ದು ಎಲ್ಲರು ರಕ್ಕಮ್ಮ ಹಾಡಿಗೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಿ ಸೊಂಟ ಬಳುಕಿಸಿದ್ದಾರೆ. ಹೌದು ಸ್ವತಃ ಸುದೀಪ್ ಅವರು ಸಹ ಮೊದಲ ಬಾರಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿ, ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಇಂದಲೇ ಫೇಮಸ್ ಆಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಸಹ ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ.

ಹೌದು ನಿವೇದಿತಾ ಮತ್ತು ಚಂದನ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಜೋಡಿಯಾಗಿದ್ದು ಟ್ರೆಂಡ್ ಆಗುವ ಹಾಡುಗಳಿಗೆ ಆಗಾಗ ಸ್ಟೆಪ್ ಹಾಕುತ್ತಾರೆ. ವಿವಿಧವಾದ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಸದ್ಯ ಇದೀಗ ವೈರಲ್ ಆಗಿರುವ ರಾ ರಾ ರಕ್ಕಮ್ಮ ಹಾಡಿಗೆ ಚಂದನ್ ನಿವೇದಿತಾ ಜೋಡಿ ಭರ್ಜರಿಯಾಗಿ ಸ್ಟೆಪ್ ಹಾಕಿದ್ದು ಕಪ್ಪು ಬಣ್ಣದ ಡ್ರೆಸ್ ನಲ್ಲಿ ನಿವೇದಿತಾ ಕಪ್ಪು ಮತ್ತು ಕೆಂಪು ಬಣ್ಣ ಧರಿಸಿರುವ ಚಂದನ್ ಶೆಟ್ಟಿ ಇಬ್ಬರು ಸಹ ಸ್ಟೈಲಿಶ್ ಆಗಿ ಸ್ಟೆಪ್ಸ್ ಹಾಕಿದ್ದು ಇವರಿಬ್ಬರ ರೀಲ್ಸ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಮೆಂಟ್ಸ್ ಬರೆಯುತ್ತಿದ್ದಾರೆ.

ಈ ಹಿಂದೆ ಕೂಡ ರೀಲ್ಸ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು ನಿವೇದಿತಾ ಗೌಡ. ಹೌದು ತಾವು ಅಪ್ಲೋಡ್ ಮಾಡುವ ಫೋಟೋಗಳಿಂದಲೂ ಸಹ ಆಗಾಗ ಟ್ರೋಲ್ ಆಗುತ್ತಾರೆ. ಸದ್ಯ ಇದೀಗ ರಾ ರಾ ರಕ್ಕಮ್ಮ ಹಾಡಿಗೆ ಸ್ಟೆಪ್ ಹಾಕಿ ಕೂಡ ಟ್ರೋಲ್ ಆಗಿದ್ದು ನೆಟ್ಟಿಗರು ಈ ವಿಡಿಯೋ ನೋಡಿ ಈ ಹಾಡು ನಿನಗೆ ಯಾಕಮ್ಮ ಬೇಕು ಎನ್ನುತ್ತಿದ್ದಾರೆ. ಆದರೆ ವಿಡಿಯೋ ವೈರಲ್ ಆಗಿರುವುದಂತೂ ಸತ್ಯ. ಹೌದು ಇನ್ನು ಈ ಹಾಡಿನಲ್ಲಿ ಸ್ಟೆಪ್ ಹಾಕಿರುವ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಕಿಚ್ಚ ಸುದೀಪ್ ಅವರು ಕನ್ನಡ ಕಲಿಸಿದ್ದು ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಪಟ್ಟಿದ್ದಾರೆ ಜಾಕ್ವೆಲಿನ್. ಇನ್ನು ವಿಕ್ರಾಂತ್ ರೋಣ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಹೆಸರು ಮಾಡಲಿ ಎಂದು ನಾವೆಲ್ಲರು ಹಾರೈಸೋಣ.