Advertisements

ನಾನು ಫೈನ್ ಕಟ್ಟಿದ್ದೇನೆ..ನಾಳೆ ಬೆಳಿಗ್ಗೆವರೆಗೂ ಮಾಸ್ಕ್ ಹಾಕೋದೇ ಇಲ್ಲ ಎಂದ ವ್ಯಕ್ತಿಯ ಮಾತು ಕೇಳಿ ಶಾಕ್ ಆದ ಮಾರ್ಷಲ್ಸ್ !

News

ಸೋಂಕು ಹೆಚ್ಚಾಗುತ್ತಿರುವ ಹಿನ್ನಲ್ಲೆಯಲ್ಲಿ ಸರ್ಕಾರ ಮಾಸ್ಕ್ ಹಾಗೂ ಸೋಷಿಯಲ್ ಡಿಸ್ಟೆನ್ಸ್ ನ್ನ ಖಡ್ಡಾಯ ಮಾಡಿದೆ.ಮಾಸ್ಕ್ ಹಾಕದೆ ನಿಯಮಗಳನ್ನ ಉಲ್ಲಂಘನೆ ಮಾಡಿದವರಿಗೆ ರಸ್ತೆ ಮಧ್ಯದಲ್ಲೇ ದಂಡ ಹಾಕಲಾಗುತ್ತಿದೆ. ಇದಕ್ಕಾಗಿ ಮಾರ್ಷಲ್ ಹಾಗೂ ಪೊಲೀಸರು ರಸ್ತೆಗಿಳಿದಿದ್ದು ಮಾಸ್ಕ್ ಹಾಕದೆ ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ಬಿಸಿ ಮುಟ್ಟಿಸುತ್ತಿದೆ. ಇನ್ನು ಸರ್ಕಾರ ಮೊದಲಿಗೆ ಒಂದು ಸಾವಿರ ರೂಪಾಯಿಗಳನ್ನ ದಂಡವಾಗಿ ವಿಧಿಸಿತ್ತು. ಆದರೆ ಇಷ್ಟೊಂದು ಹಣ ದಂಡ ಕಟ್ಟಲಿಕ್ಕೆ ಆಗದವರು ಪೋಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಇನ್ನು ಇದೆ ವೇಳೆ ಮಾಸ್ಕ್ ಹಾಕದೆ ದಂಡ ಕಟ್ಟಿದ ವ್ಯಕ್ತಿಯೊಬ್ಬ ನಾನು ಫೈನ್ ಕಟ್ಟಿದ್ದೇನೆ, ಹಾಗಾಗಿ ಇನ್ನು ಒಂದು ದಿನ ನಾನು ಮಾಸ್ಕ್ ಹಾಕದೆ ಇಲ್ಲ ಎಂದಿದ್ದ ಇದನ್ನ ಕೇಳಿ ಸ್ವತಃ ಮಾರ್ಷಲ್ ಗಳೇ ಶಾಕ್ ಆಗಿದ್ದಾರೆ.

Advertisements

ಹೌದು, ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ನಲ್ಲಿ ಈ ಘಟನೆ ಸಂಭವಿಸಿದ್ದು ಮಾಸ್ಕ್ ಹಾಕದೆ ವ್ಯಕ್ತಿಯೊಬ್ಬ ಮಾರ್ಷಲ್ ಗಳಿಗೆ ಸಿಕ್ಕಿಬಿದ್ದಿದ್ದು ಒಂದು ಸಾವಿರ ದಂಡ ಕಟ್ಟಿದ್ದಾನೆ. ಇನ್ನು ತಾನು ದಂಡ ಕಟ್ಟಿದಂತೆ ಮಾರ್ಷಲ್ ಗಳ ಜೊತೆ ವಾಗ್ವಾದಕ್ಕಿಳಿದ ಆ ವ್ಯಕ್ತಿ ನಾನು ಮಾಡೋದೇ ಕೂಲಿ ಕೆಲಸ. ಅದರಿಂದ ನಾನು ಸಂಪಾದನೆ ಮಾಡೋದು ಮುನ್ನೂರು ರೂಪಾಯಿ ಮಾತ್ರ. ಈಗ ನೀವು ೧ ಸಾವಿರ ಫೈನ್ ಕಟಿಸಿಕೊಂಡಿದ್ದೀರಿ. ನನ್ನ ಬಳಿ ಮಾಸ್ಕ್ ಇಲ್ಲ. ಇನ್ನು ನಾನು ದಂಡ ಕಟ್ಟಿರುವ ಕಾರಣ ಒಂದು ದಿನ (೨೪ ಗಂಟೆಗಳ ಕಾಲ) ಇದಕ್ಕೆ ವ್ಯಾಲಿಡಿಟಿ ಇದೆ. ಹಾಗಾಗಿ ನಾನು ನಾಳೆ ಬೆಳಿಗ್ಗೆ ಹನ್ನೊಂನು ಗಂಟೆಯವರೆಗೆ ಮಾಸ್ಕ್ ಹಾಕೋದೇ ಇಲ್ಲ ಎಂದು ಮಾರ್ಷಲ್ ಗಳ ಜೊತೆ ವಾಗ್ವಾದಕ್ಕಿಳಿದಿದ್ದಾನೆ.

ಇನ್ನು ಆತ ಮಾಸ್ಕ್ ಹಾಕಿದ್ರೆ ಏನಾಗುತ್ತೆ ಎಂಬ ಕಾರಣವನ್ನು ಕೊಟ್ಟಿದ್ದಾನೆ. ಅದೇನೇದರೆ ಮಾಸ್ಕ್ ಹಾಕಿದ್ರೆ ಉಸಿರಾಟ ಮಾಡೋದಕ್ಕೆ ತುಂಬಾ ಕಷ್ಟ ಆಗುತ್ತೆ. ನಾನು ಸಾ’ಯೋ ಪರಿಸ್ಥಿತಿ ಬರುತ್ತೆ. ಇನ್ನು ಮಾರ್ಷಲ್ ಗಳು ಮಾಸ್ಕ್ ಹಾಕಿ ಅಂತ ಎಷ್ಟೇ ಬುದ್ದಿ ಹೇಳಿದರೂ ನಾನು ೨೪ ಗಂಟೆಗಳ ಕಾಲ ಮಾಸ್ಕ್ ಹಾಕೋದೇ ಇಲ್ಲ..ದಂಡ ಕಟ್ಟಿದ್ದೀನಿ ಎಂದು ಅವರ ಜೊತೆ ವಾಗ್ವಾದ ಮಾಡಿದ್ದಾನೆ. ಒಟ್ಟಿನಲ್ಲಿ ಮಾರ್ಷಲ್ ಗಳಂತೂ ಆತನ ಮನವೊಲಿಸಲು ಹೋಗಿ ಸೂಸ್ಟಾಗಿದ್ದು ಸುಳ್ಳಲ್ಲ..