Advertisements

ಒಲವಿನ ಉಡುಗೊರೆ ಚಿತ್ರದ ನಟಿ ಈಗ ಹೇಗಿದ್ದಾರೆ ಗೊತ್ತಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ..

Cinema

ನಮಸ್ತೆ ಸ್ನೇಹಿತರೆ, ತಮ್ಮ ಮುಗ್ದ ನೋಟ, ನೈಜ ಅಭಿನಯದಿಂದ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದ್ದ ನಟಿ ಮಂಜುಳ ಶರ್ಮಾ ಅವರು, ತಮಿಳಿನ ಮಂಜುಳ ಶರ್ಮಾ 80ರ ದಶಕದಲ್ಲಿ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ನಟಿಯಾಗಿದ್ದರು. ಹೆಚ್ಚಾಗಿ ಸಾಂಸಾರಿಕ ಚಿತ್ರಗಳಲ್ಲಿ ನಟಿಸುತ್ತಿದ್ದ ಮಂಜುಳ ಶರ್ಮಾ ಅಂದಿನ ಹೆಣ್ಣು ಮಕ್ಕಳ ಪೇವರೇಟ್ ನಾಯಕಿಯಾಗಿದ್ದರು.. ತಮಿಳು, ತೆಲುಗು ಮಲಯಾಳಂ ಹಾಗು ಕನ್ನಡ ಸೇರಿದಂತೆ ನೂರಕ್ಕು ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಹಾಗೂ ಪೋಷಕ ನಟಿಯಾಗಿ ನಟಿಸಿದ್ದಾರೆ.

Advertisements

ಕನ್ನಡದಲ್ಲಿ ಮಂಜುಳಾ ಶರ್ಮಾ ಅವರು 1983 ರಲ್ಲಿ ತೆರೆಕಂಡ ಮು’ತ್ತೈದೆ ಭಾಗ್ಯ ಚಿತ್ರದಲ್ಲಿ ಸಣ್ಣ ಪಾತ್ರ ಒಂದರಲ್ಲಿ ನಟಿಸುವ ನೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು.. ನಂತರ ಹೊಸ ಇತಿಹಾಸ ಎಂಬ ಚಿತ್ರದಲ್ಲಿ ನಟಿಸಿದರು. ಇದಾದ ನಂತರ ಇವರು ನಟಿಸಿದ ಕನ್ನಡ ಚಿತ್ರ ಒಲವಿನ ಉಡುಗೊರೆ, ರೆಬಲ್ ಸ್ಟಾರ್ ಅಂಬರೀಶ್ ಅವರು ನಾಯಕರಾಗಿ ಡಿ.ರಾಜೇಂದ್ರ ಬಾಬು ನಿರ್ದೇಶಕರಾಗಿ ಮೂಡಿಬಂದ ಒಲವಿನ ಉಡುಗೊರೆ ಚಿತ್ರ ತುಂಬಾ ಯಶಸ್ಸು ಕಂಡಿತು.. ಈ ಚಿತ್ರದಲ್ಲಿ ಮಂಜುಳಾ ಶರ್ಮಾ ಅವರು ನಾಯಕಿಯಾಗಿ ನಟಿಸಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದರು.

ನಂತರ 1988 ರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ನಮ್ಮೂರ ರಾಜ ಚಿತ್ರಕ್ಕೆ ನಾಯಕಿಯಾದರು.. ನಂತರ ಪದ್ಮವ್ಯೂ’ಹ, ಒಂದಾಗಿ ಬಾಳೋಣ, ನಮ್ಮ ಭೂಮಿ, ಪೋಲಿ ಕಿಟ್ಟಿ, ಸಮರ ಸಿಂಹ, ರಾಷ್ಟ್ರಗೀತೆ, ಜೈ’ಲರ್ ಜಗನ್ನಾಥ್ ಈಗೆ ಕನ್ನಡದ 10 ಚಿತ್ರಗಳಲ್ಲಿ ಮಂಜುಳ ಶರ್ಮಾ ನಟಿಸಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್, ಸಾಹಸಸಿಂಹ ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಚರಣ್ ರಾಜ್, ಕಾಶಿನಾಥ್, ಸಾ’ಯಿಕುಮಾರ್ ಈ ಎಲ್ಲಾ ನಾಯಕ ನಟರ ಜೊತೆ ಮಂಜುಳಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ..

ಹಾಗು ತಮಿಳು, ತೆಲುಗು, ಮಲಯಾಳಂ ನ ಬಹುತೇಕ ಎಲ್ಲಾ ಟಾಪ್ ನಟರ ಜೊತೆ ನಟಿಸಿರುವ ಮಂಜುಳಾ ಶರ್ಮಾ ಅವರು ಕಾಲಾಂತರದಲ್ಲಿ ಪೋಷಕರ ಪಾತ್ರಗಳಲ್ಲಿ ನಟಿಸಿದರು. 2008 ರಲ್ಲಿ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಪರುಗು ಸಿನಿಮಾದಲ್ಲಿ ಮಂಜುಳಾ ಶರ್ಮಾ ಅವರು ಪೋಷಕ ನಟಿಯಾಗಿ ನಟಿಸಿದ ಕೊನೆಯ ಚಿತ್ರ.. ಇದಾದ ನಂತರ ಮಂಜುಳಾ ಶರ್ಮಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ.