Advertisements

1970ರಲ್ಲಿ ಧರ್ಮಸ್ಥಳ ಹೇಗಿತ್ತು ನೋಡಿ..

Temples

ಪ್ರಿಯ ಓದುಗರೆ ಭೂಮಿ ಮೇಲಿನ ಕೈಲಾಸ ಹಾಗೂ ಸಾಕ್ಷಾತ್ ದೇವತೆಗಳು ನೆಲೆಸಿರುವ ನಾಡು ನಮ್ಮ ಭಾರತ. ಇಲ್ಲಿ ಅನೇಕ ಪುಣ್ಯ ಕ್ಷೇತ್ರಗಳಿವೆ ಹನ್ನೆರಡು ಜ್ಯೋತಿರ್ಲಿಂಗ ಗಳನ್ನು ಒಳಗೊಂಡ ಪುಣ್ಯ ಭೂಮಿ ನಮ್ಮ ದೇಶ. ಹನ್ನೆರಡು ಜ್ಯೋತಿರ್ಲಿಂಗಗಳು ಇರುವ ಕ್ಷೇತ್ರಗಳಲ್ಲಿ ಧರ್ಮಸ್ಥಳ ಕೂಡ ಒಂದು. ಈ ಕ್ಷೇತ್ರ ಹೇಗೆ ಬೆಳೆದು ಬಂತು ಅಂತ ಒಮ್ಮೆ ನೋಡೋಣ ಬನ್ನಿ.
ಸಾಕ್ಷಾತ್ ಶಿವನೇ ಇಲ್ಲಿ ಭಕ್ತನೊಬ್ಬನ ಭಕ್ತಿಗೆ ಮೆಚ್ಚಿ ನೆಲೆಸಿರುವಂತಹ ಪುಣ್ಯ ಕ್ಷೇತ್ರ ಧರ್ಮಸ್ಥಳ. ಇದನ್ನು “ಭೂಲೋಕದ ಕೈಲಾಸ” ಎಂತಲೂ ಕರೆಯುತ್ತಾರೆ. ನೇತ್ರಾವತಿ ನದಿಯ ತೀರದಲ್ಲಿ ನೆಲೆನಿಂತ ಶ್ರೀ ಮಂಜುನಾಥ ಸ್ವಾಮಿಯು ಸುತ್ತಲಿನ ಹಚ್ಚ ಹಸಿರಿನಿಂದಲೇ ಕಂಗೊಳಿಸುತ್ತಿದ್ದಾನೆ. ಎತ್ತ ನೋಡಿದತ್ತ ಅಡಕೆ, ತೆಂಗು, ಮಸಾಲೆ ಪದಾರ್ಥಗಳ ಗಮಗಮ. ಈ ಪ್ರದೇಶದಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಇನ್ನು ಈ ದೇವಸ್ಥಾನದ ಬಗ್ಗೆ ತಿಳಿಯೋಣ. ಕರ್ನಾಟಕ ರಾಜ್ಯದ ಮಂಗಳೂರು ಜಿಲ್ಲೆಯಿಂದ 60 ಕಿಲೋಮೀಟರ್ ದೂರದಲ್ಲಿರುವ ಕ್ಷೇತ್ರ ಧರ್ಮಸ್ಥಳ..

Advertisements

ಇದು ಸರ್ವಧರ್ಮಗಳ ಸಮನ್ವಯ ನಾಡು. ಶೈವ ದೇವರಾದ ಮಂಜುನಾಥನನ್ನು ಪೂಜೆ ಗೈಯುತ್ತಿರುವವರು ವೈಷ್ಣವರು. ದೇಗುಲದ ಧರ್ಮಾಧಿಕಾರಿಗಳು ಜೈನಧರ್ಮದ ವೀರೇಂದ್ರ ಹೆಗಡೆ ಹಾಗೂ ಕುಟುಂಬ. ಹೀಗೆ ಮೂರು ಧರ್ಮಗಳನ್ನು ಒಳಗೊಂಡ ಪುಣ್ಯಕ್ಷೇತ್ರವೇ ಧರ್ಮಸ್ಥಳ. ಇಲ್ಲಿ ನಿತ್ಯವೂ ದಾಸೋಹ ಇದೆ ಇದು ಜ್ಞಾನಪೀಠಗಳ ನಾಡು, ಸಾಹಿತ್ಯ ಸರಸ್ವತಿಯ ನೆಲೆಬೀಡು ಆಗಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಜೊತೆಗೆ ಗೊಮ್ಮಟೇಶ್ವರ ನಿಂದಲೂ ಹೆಸರಾಗಿದೆ.ಹೌದು ಎರಡು 210 ಟನ್, 39 ಅಡಿ ಎತ್ತರ ಇರುವ ಗೊಮ್ಮಟೇಶ್ವರ ಮೂರ್ತಿಯನ್ನು ಇಲ್ಲಿಯ ಎತ್ತರದ ಬೆಟ್ಟದ ರತ್ನಾಗಿರಿ ಮೇಲೆ 1982ರಲ್ಲಿ ವೀರೇಂದ್ರ ಹೆಗಡೆಯವರ ಕಾಲದಲ್ಲಿ ಸ್ಥಾಪಿಸಲಾಗಿದೆ. 1970 ರಲ್ಲಿ ಕರ್ನಾಟಕದಲ್ಲಿ ಸುವ್ಯವಸ್ಥಿತದಿಂದ ಕೂಡಿದ ಏಕೈಕ ಪುಣ್ಯಕ್ಷೇತ್ರ ವೆಂದರೆ ಅದು ಧರ್ಮಸ್ಥಳ ವಾಗಿತ್ತು. ಆಗಲು ದಿನನಿತ್ಯ ಅನ್ನದಾಸೋಹದ ವ್ಯವಸ್ಥೆಯಿತ್ತು. ಪ್ರವಾಸಿಗರಿಗೆ ಇರಲು ಸುಸಜ್ಜಿತ ವಸತಿಗೃಹಗಳನ್ನು ಒಳಗೊಂಡ ಕ್ಷೇತ್ರವಾಗಿತ್ತು. ಸಾರ್ವಜನಿಕರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಆಗಲೇ ಈ ಕ್ಷೇತ್ರ ಹೆಸರುವಾಸಿಯಾಗಿತ್ತು.

ಈ ಕ್ಷೇತ್ರದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಏರಿಸಲು ಅಲ್ಲಿಯ ಧರ್ಮಾಧಿಕಾರಿ ನಿಶ್ಚಯಿಸಿದರು. ಅದರಂತೆ ಕಾರ್ಕಳದಲ್ಲಿ 170 ಟನ್ ತೂಕದ ಬೃಹತ್ ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿಸಲಿ ಇಂದಿನ ವೀರೇಂದ್ರ ಹೆಗಡೆ ತಂದೆ ಹಾಗೂ ತಾತ ಮಂಜಯ್ಯ ಮತ್ತು ರತ್ನವರ್ಮ ಅವರ ಪತ್ನಿಯರ ರತ್ನಮ್ಮರು ತೀರ್ಮಾನಿಸಿದರು.1967ರ ವಿಜಯ ದಶಮಿಯಂದು ಈ ಮೂರ್ತಿಯನ್ನು ಕೆತ್ತಲು ಪ್ರಾರಂಭಿಸಿದರು. ಈ ಮೂರ್ತಿ 6 ಅಡಿ ಅಗಲ ಮುಖ, 1 ಅಡಿ ಕುತ್ತಿಗೆ, 22.3 ತೋಳು, 19.5 ಸೊಂಟದ ಸುತ್ತಳತೆ, 13 ಬೆನ್ನು, 13.5 ಭುಜ, 1.4 ಪಾದ, 1 ಅಡಿ ಹೆಬ್ಬರಳು, 3.5 ಕಿವಿ, 1.1 ಅಡಿ ಮೂಗು ಅಳತೆಯ ಒಟ್ಟು 52 ಅಡಿ ಎತ್ತರದ ಗೊಮ್ಮಟೇಶ್ವರನನ್ನು ರೆಂಜಾಳ ಗೋಪಾಲ ಶೈನೈಯವರಿಂದ ಹಾಗೂ ತಂಡದಿಂದ ಕೆತ್ತಿಸಲಾಯಿತು. ಇದನ್ನು 1973 ಫೆ.18 ರಂದು ಧರ್ಮಸ್ಥಳಕ್ಕೆ ತಂದರು.

ಆದರೆ ಬೆಟ್ಟದ ಮೇಲೆ ಸುವ್ಯವಸ್ಥಿತವಾಗಿ ಸ್ಥಾಪಿಸಿದ್ದು ಮಾತ್ರ ವರ್ಷಗಳನಂತರ.ಅಂದ್ರೆ ರತ್ನಗಿರಿ ಬೆಟ್ಟದ ಮೇಲೆ 1982 ರಲ್ಲಿ ವ್ಯವಸ್ಥಿತವಾಗಿ ಹಾಗೂ ಶಾಸ್ತ್ರೋಕ್ತವಾಗಿ ಎದ್ದುನಿಂತ ಗೊಮ್ಮಟೇಶ್ವರ ನಿಗೆ ಮೊದಲ ಮಸ್ತಾಭಿಷೇಕ ನೆರವೇರಿತು. ಧರ್ಮಸ್ಥಳದ ಜೊತೆಗೆ ಗೊಮ್ಮಟೇಶ್ವರನ ಮೂರ್ತಿ ನೋಡಲು ಪ್ರವಾಸಿಗರ ದಂಡು ಹರಿದುಬರತೊಡಗಿತು. ರಾಜರ ಆಳ್ವಿಕೆಯ ಬಗ್ಗೆ ಇನ್ನಷ್ಟು ಹೆಚ್ಚಿಗೆ ತಿಳಿಯಲು ನೀವು ಮಂಜೂಷ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಬೇಕು. ಅಲ್ಲಿ ಮಹಾರಾಜರು ಬಳಸಿದ ಆಗಿನ ಕಾಲದ ಗಾಡಿಗಳು, ಕಾರುಗಳು, ವಸ್ತುಗಳನ್ನು ನೋಡಬಹುದು. ಮೈಸೂರಿನ ಅದೆಷ್ಟು ಲೋಹದ ವಸ್ತುಗಳನ್ನು ಇಲ್ಲಿ ಕಾಣಬಹುದು. ದಕ್ಷಿಣ ಭಾರತದ ಪ್ರಸಿದ್ಧ ವಸ್ತು ಸಂಗ್ರಹಾಲಯಗಳಲ್ಲಿ ಇದು ಕೂಡ ಒಂದಾಗಿದೆ. ನೀವು ಮೈಸೂರು ಅಥವಾ ಮಂಗಳೂರಿಗೆ ಬಂದರೆ ತಪ್ಪದೇ ಈ ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ..