Advertisements

ಓಂ ಸಿನಿಮಾದಲ್ಲಿ ನಟಿಸಲು ಜೈಲಿನಿಂದ ನಿಜವಾದ ರೌಡಿಗಳನ್ನ ಬೇಲ್ ಕೊಟ್ಟು ಕರೆತಂದಿದ್ರಾ ! ಚಿತ್ರಕ್ಕೆ ಮೊದಲು ಆಯ್ಕೆ ಆದದ್ದು ಶಿವಣ್ಣ ಅಲ್ಲ.?

Cinema

ಸ್ನೇಹಿತರೆ 1995 ಮೇ 19ರಂದು ಗಾಂಧಿನಗರದಲ್ಲಿ ಒಂದು ಹೊಚ್ಚ ಹೊಸ ಸಿನಿಮಾ ರಿಲೀಸ್ ಆಗಿತ್ತು. ಬಿಡುಗಡೆಗೆ ಮುಂಚೆಯೇ ಹಲವಾರು ಅಂಶಗಳ ಮೂಲಕ ಸುದಿಯಾಗಿದ್ದ ಈ ಚಿತ್ರಕ್ಕೆ ಈಗ 25 ವರ್ಷ. ಸೆನ್ಸಾರ್ ಮಂಡಳಿಯಿಂದ ಬಾರಿ ಚರ್ಚೆಗೆ ಒಳಗಾಗಿದ್ದ ಈ ಚಿತ್ರ, ಕಡೆಗೂ ಸರ್ಟಿಫಿಕೇಟ್ ಪಡೆದು ಬಿಡುಗಡೆಯಾಗಿತ್ತು. ಇನ್ನು ನಿರ್ದೇಶಕ, ನಿರ್ಮಾಪಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಮೊದಲ ದಿನದ ಷೋ ಬಗ್ಗೆ ಜನ ಹೇಗೆ ರೆಸ್ಪಾನ್ಸ್ ಮಾಡುತ್ತಾರೆ ಎಂಬ ಕುತೂಹಲವಿತ್ತು.

Advertisements

ಆದರೆ ಕನ್ನಡ ಚಿತ್ರರಂಗದಲ್ಲಿ ಈ ಚಿತ್ರ ಒಂದು ಮೈಲುಗಲ್ಲಾಗಲಿದೆ ಎಂದು ಯಾರೂ ಕೂಡ ಯೋಚನೆ ಮಾಡಿರಲಿಲ್ಲ. ಅಂತಹ ಪವಾಡ ಅಂದು ನಡೆದೇ ಬಿಟ್ಟಿತು. ಚಿತ್ರತಂಡ ಸೇರಿದಂತೆ ಪ್ರೇಕ್ಷಕರು ಕೂಡ ನಿರೀಕ್ಷೆ ಮಾಡದಂತಹ ರಿವ್ಯೂವ್ ಗಳನ್ನ ಈ ಚಿತ್ರ ಪಡೆಯಿತು. ಆ ದಿನಕ್ಕೆ ಕನ್ನಡ ಚಿತ್ರರಂಗದ ಆವರೆಗಿನ ಎಲ್ಲಾ ದಾಖಲೆಗಳನ್ನ ಮುರಿದು ಆ ಚಿತ್ರ ಯಶಸ್ಸಿನ ಉತ್ತುಂಗಕ್ಕೆ ಏರಿತ್ತು. ಆ ಸಿನಿಮಾದ ಹೆಸರೇ ‘ಓಂ’. ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಚಿತ್ರ ತನ್ನ ಅದ್ಭುತ ಕಥಾಹಂದರದಿಂದ ಜನಮಾನಸ ಗೆದ್ದು, ಸಂಖ್ಯೆವಿಲ್ಲದಷ್ಟು ಬಿರುದುಬಾವಲಿಗಳನ್ನ ಪಡೆದಿದ್ದು ಇಂದಿಗೆ ಇತಿಹಾಸ.

ಈ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿದ್ದರೂ ಇವತ್ತಿಗೂ ಕೂಡ ಇದರ ಕ್ರೇಜ್ ಕಡಿಮೆ ಆಗಿಲ್ಲ. ಬರೋಬ್ಬರಿ 632 ಬಾರಿ ಮರು ಬಿಡುಗಡೆಯಾಗಿರುವ ಕನ್ನಡದ ಮೊಟ್ಟ ಮೊದಲ ಚಿತ್ರ. ಈ ಚಿತ್ರ ಪ್ರತೀ ಸಲ ಬಿಡುಗಡೆಯಾದಾಗಲೂ ಸಹ ನೋಡುಗರ ಮನಸ್ಸಿನಲ್ಲಿ ಅದೇ ಹೊಸ ಛಾಪನ್ನ ಮೂಡಿಸುವ, ಈ ಸಿನಿಮಾದಲ್ಲಿ ಅಡಗಿರುವ ಆ ಮಾಯೆಯಾದರೂ ಏನು? ಇವತ್ತಿಗೆ 25 ವರ್ಷಗಳನ್ನ ಕಂಡಿರುವ ಈ ಚಿತ್ರದ ಮೇಕಿಂಗ್ ಹಾಗೂ ಈ ಚಿತ್ರದ ಕೆಲವೊಂದು ಸ್ವಾರಸ್ಯಕರ ವಿಚಾರಗಳನ್ನ ಈ ವಿಡಿಯೋದಲ್ಲಿ ತಿಳಿಯೋಣ ಬನ್ನಿ..