Advertisements

ಕೇವಲ ಒಂದು ದಿನಕ್ಕೆ ಜಿಲ್ಲಾಧಿಕಾರಿಯಾದ 16 ವರ್ಷದ ಬಾಲಕಿ ಮಾಡಿದ ಮೊಟ್ಟ ಮೊದಲ ಕೆಲಸ ಏನು ಗೊತ್ತಾ ?

Inspire

ಸ್ನೇಹಿತರೇ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಬೇಕೆಂಬುದು ಬಹುತೇಕರ ಕನಸಾಗಿದೆ. ಆದರೆ ಅನೇಕರಿಗೆ ಇದು ಕನಸಾಗೇ ಉಳಿದುಬಿಡುತ್ತದೆ. ಆದರೆ ಇದೆಲ್ಲದರ ನಡುವೆ ಚಿಕ್ಕ ವಯಸ್ಸಿಗೆ ಜಿಲ್ಲಾಧಿಕಾರಿಯಾದವರ ಬಗ್ಗೆ ಸುದ್ದಿಗಳನ್ನ ನಾವು ನೋಡಿರುತ್ತೇವೆ. ಅದರಂತಯೇ ಈಗ ಹದಿನಾರು ವರ್ಷದ ಬಾಲಕಿಯೊಬ್ಬಳು ಆಂಧ್ರದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾಳೆ. ಆದರೆ ಈ ಬಾಲಕಿ ಜಿಲ್ಲಾಧಿಕಾರಿಯಾಗಿದ್ದು ಕೇವಲ ಒಂದು ದಿನಕ್ಕೆ ಮಾತ್ರ. ಹೌದು, ರೈತನ ಮಗಳಾಗಿರುವ ಶ್ರಾವಣಿ ಎನ್ನುವ ಈ ಬಾಲಕಿ ಆಂಧ್ರದ ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಒಂದು ದಿನದ ಮಟ್ಟಿಗೆ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

Advertisements

ಅಕ್ಟೋಬರ್ ಹನ್ನೊಂದರಂದು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಬಾಲಕಿ ಶ್ರಾವಣಿಯವರ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಅನಂತಪುರ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳ ಮುಖ್ಯಸ್ಥೆಯಾಗಿ ಒಂದು ದಿನ ಕೆಲಸ ಮಾಡುವ ಅವಕಾಶ ೧೬ ವರ್ಷದ ಶ್ರಾವಣಿಗೆ ಸಿಕ್ಕಿದೆ. ಕೇವಲ ಒಂದು ದಿನಕ್ಕೆ ಕಲೆಕ್ಟರ್ ಆಗಿದ್ದ ಶ್ರಾವಣಿ ಮಾಡಿರುವ ಮೊದಲ ಕೆಲಸ ಕೇಳಿದ್ರೆ ನೀವು ಗ್ರೇಟ್ ಅಂತೀರಾ..ಹೌದು, ಶ್ರಾವಣಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಮೇಲೆ ಮೊಟ್ಟ ಮೊದಲಿಗೆ ಸಂತ್ರಸ್ತ ಬಾಲಕಿಯೊಬ್ಬಳಿಗೆ ಕಾಯ್ದೆಯೊಂದರ ಅಡಿಯಲ್ಲಿ ೨೫ ಸಾವಿರ ರೂಪಾಯಿ ಮಂಜೂರು ಮಾಡುವುದರ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.

ಇನ್ನು ಮಹಿಳೆಯರ ಸಮಸ್ಯೆಗಳನ್ನ ಬಗೆಹರಿಸುವತ್ತ ಗಮನ ಹರಿಸಿದ ಬಾಲಕಿ ಶ್ರಾವಣಿ ರಾತ್ರಿ ೮ರಿಂದ ಬೆಳಿಗ್ಗೆ ೮ರವರೆಗೆ ಮಹಿಳಾ ಅಧಿಕಾರಿಗಳು, ಅಧಿಕಾರಿಗಳ ಕರೆಗಳನ್ನ ಸ್ವೀಕರಿಸುವುದರಿಂದ ವಿನಾಯತಿ ಕೊಡುವ ಆದೇಶದ ಪ್ರತಿಗೂ ಕೂಡ ಸಹಿ ಹಾಕುವ ಕೆಲಸ ಮಾಡಿದ್ದಾರೆ. ಇನ್ನು ಈ ಕೆಲಸಗಳ ಬಳಿಕ ನಗರ ವೀಕ್ಷಣೆಗೆ ಹೊರಟ ಜಿಲ್ಲಾಧಿಕಾರಿ ಬಾಲಕಿ ಶ್ರಾವಣಿ ನೀರು ನಿಂತ ಕಾರಣದಿಂದಾಗಿ ಹಾಳಾಗಿರುವ ರಸ್ತೆಗಳನ್ನ ಕಂಡು ಈ ಕೂಡಲೇ ಆ ರಸ್ತೆಗಳನ್ನ ರಿಪೇರಿ ಮಾಡುವ ಆದೇಶ ನೀಡಿದ್ದಾರೆ. ಇನ್ನು ಅನಂತಪುರದ ಜಿಲ್ಲಾಧಿಕಾರಿ ಗಂಧಮ್ ಚಂದ್ರುಡು ಅವರು ತುಂಬಾ ಹಿಂದುಳಿದ ಹೆಣ್ಣು ಮಕ್ಕಳನ್ನ ಶಿಕ್ಷಣಕ್ಕಾಗಿ ಉತ್ತೇಜಿಸಿ ಅವರಿಗೆ ಆತ್ಮವಿಶ್ವಾಸ ಮೂಡಿಸುವುದಕ್ಕಾಗಿ ಒಂದು ದಿನದ ಮಟ್ಟಿಗೆ ಬಾಲಕಿ ಶ್ರಾವಣಿಯನ್ನ ಜಿಲ್ಲಾಧಿಕಾರಿಯಾಗಿ ನೇಮಿಸಿದ್ದರು.