Advertisements

ಬೆಂಗಳೂರಿನ ಶಾಲಾ ಶಿಕ್ಷಕ ಇಂದು 7 ಸಾವಿರ ಕೋಟಿ ಒಡೆಯನಾಗಲು ಕಾರಣ ಆ ಒಂದು ಘಟನೆ.. ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ.. ನಮ್ಮ ದೇಶದಲ್ಲಿ ಲಕ್ಷಾಂತರ ಶಿಕ್ಷಕರಿದ್ದಾರೆ. ಆದರೆ ಹೆಚ್ಚು ಜನ ತಮ್ಮ ಜೀವನಕ್ಕೆ ಬೇಲಿಯಾಕಿಕೊಂಡು ಅದರ ಒಳಗಡೆ ಜೀವನ ನಡೆಸುತ್ತಿದ್ದಾರೆ. ಆ ಬೇಲಿಯನ್ನು ಒದ್ದು ಆಚೆ ಬಂದ ಬೈಜು ರವಿಂದ್ರನ್ ಇಂದು ಕೋಟಿ ಕೋಟಿ ಒಡೆಯಾರಾಗಿ ಹೊರ ಹೊಮ್ಮಿದ್ದಾರೆ.. ಅಂದರೆ 7 ಸಾವಿರ ಕೋಟಿಯ ಒಡೆಯರಾಗಿದ್ದಾರೆ. ಕೇವಲ 7 ವರ್ಷದಲ್ಲಿ ತಮ್ಮ ಕಂಪನಿಯ ಮೌಲ್ಯವನ್ನು 40 ಸಾವಿರ ಕೋಟಿ ಮಾಡಿರುವ ಬೈಜು ರವೀಂದ್ರನ್ ಭಾರತದ ಹೊಸ ಬಿಲಿಯನರ್ ಆಗಿದ್ದಾರೆ.. ಆ ಒಂದು ಕ್ಷಣ, ಒಂದ ಘಟನೆ ಅವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.. ಅದು ಏನು ಎಂದು ನೋಡೋಣ. ಬೈಜು ರವೀಂದ್ರನ್ ಹುಟ್ಟಿದ್ದು ಕೇರಳದ ತ್ರಿಶೂಲ್ ಜಿಲ್ಲೆಯಲ್ಲಿ ಆದ್ರೂ ಅವರ ಕರ್ಮ ಭೂಮಿ ಬೆಂಗಳೂರು..

[widget id=”custom_html-3″]

Advertisements

ಇವರ ತಂದೆ ಫಿಸಿಕ್ಸ್ ಟೀಚರ್ ಆದರೆ ತಾಯಿ ಮ್ಯಾತಮೆಟಿಕ್ಸ್ ಟೀಚರ್ ಆಗಿದ್ದರು. ಇಂಜನಿಯರಿಂಗ್ ಮುಗಿಸಿದ ಬೈಜು ರವೀಂದ್ರನ್ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.. ಸಮಯ ಸಿಕ್ಕಾಗಿ ತಮ್ಮ ಸ್ನೇಹಿತರಿಗೆ ದೇಶದ ಉನ್ನತ ಇಂಜನಿಯರಿಂಗ್ ಮತ್ತು ಮ್ಯಾನೆಜ್‌ಮೆಂಟ್‌ ಶಾಲೆಗಳ ಇಂಟ್ರೆಸ್ ಎಕ್ಸಾಮ್ ಗಳ ಪ್ರಿಪೇಷನ್ ಗೆ ಸಹಾಯ ಮಾಡುತ್ತಿದ್ದರು. ಇವರು ತುಂಬಾ ಸುಲಭವಾದ ವಿಧಾನದಲ್ಲಿ ಹೇಳಿಕೊಡುತ್ತಿದ್ದರಿಂದ ಅದು ಎಲ್ಲರಿಗೂ ಚೆನ್ನಾಗಿ ಅರ್ಥ ಆಗುತ್ತಿತ್ತು.. ಬೈಜು ರವೀಂದ್ರನ್ ಹೇಳಿಕೊಡುತ್ತಿದ್ದ ಇಷ್ಟ ಆಗಿ ಹೆಚ್ಚು ಜನ ತಮಗೂ ಹೇಳಿಕೊಡಿ ಎಂದು ಇವರ ಬಳಿ ಬರಲು ಆರಂಭಿಸಿದರು‌.

[widget id=”custom_html-3″]

ಆಗ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಬೈಜು ರವೀಂದ್ರನ್ ಎಷ್ಟು ಪೇಮಸ್ ಆಗಿಬಿಟ್ಟರು ಅಂದರೆ ದೊಡ್ಡ ದೊಡ್ಡ ಸ್ಟೇಡಿಯಂಗಳಲ್ಲಿ ಸಾವಿರಾರು ಮಕ್ಕಳಿಗೆ ಒಂದೇ ಬಾರಿ ಟೀಚಿಂಗ್ ಮಾಡುತ್ತಿದ್ದರು.‌. ಆಗ ಬೈಜು ರವೀಂದ್ರನ್ ಅವರಿಗೆ ಒಂದು ಆಲೋಚನೆ ತಲೆಯಲ್ಲಿ ಹುಟ್ಟಿತು. ಅದರ ಪ್ರಕಾರ 2011 ರಲ್ಲಿ ಥಿಂಕ್ ಅಂಡ್ ಲರ್ನ್ ಎನ್ನುವ ಕಂಪನಿಯನ್ನು ಬೆಂಗಳೂರಿನಲ್ಲಿ ಆರಂಭಿಸಿದರು. ಆನ್ಲೈನ್ ಮೂಲಕ ಹೈಸ್ಕೂಲ್ ಪಿಯುಸಿ ಹಾಗು ಎಂಟ್ರೇನ್ಸ್ ಎಕ್ಸಾಮ್ ಬರೆಯುವವರಿಗೆ ಟೀಚಿಂಗ್ ಮಾಡುತ್ತಿದ್ದರು. 2015 ರಲ್ಲಿ ಬೈಜುಸ್ ಅನ್ನೋ ಕಲಿಕ ಆ್ಯಪ್ ಅನ್ನು ಅಭಿವೃದ್ಧಿ ಮಾಡಿ ಮಾರುಕಟ್ಟೆಗೆ ಬಿಟ್ಟರು ಬೈಜು ರವೀಂದ್ರನ್.. ಕೇವಲ ಮೂರು ತಿಂಗಳಲ್ಲಿ 20 ಲಕ್ಷ ಜನ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡರು. ಈಗ ಬೈಜುಸ್ ಆ್ಯಪ್ ಅನ್ನು ಬಳಸುವವರ ಸಂಖ್ಯೆ 1 ಕೋಟಿ 50 ಲಕ್ಷ..

[widget id=”custom_html-3″]

ಅದರಲ್ಲಿ 90 ಲಕ್ಷ ವಿದ್ಯಾರ್ಥಿಗಳು ಹಣ ಪಾವತಿಸಿ ಕಲಿಯುವವರೇ ಇದ್ದಾರೆ. ಈಗಾಗಲೇ ಅರಬ್ ದೇಶಗಳಿಗೆ ವಿಸ್ತರಿಸುವ ಬೈಜುಸ್ ಆ್ಯಪ್ ಇನ್ನು ಎರಡು ವರ್ಷದಲ್ಲಿ ಅಮೇರಿಕಾ ಮತ್ತು ಯುರೋಪಿಯನ್ ದೇಶಗಳಿಗೆ ವಿಸ್ತರಿಸಲಿದೆ. ಅಷ್ಟೆ ಅಲ್ಲದೇ ಚೈನಾ ಕಂಪನಿಯ ಓಪೋಗೆ ಬಾಯ್ ಬಾಯ್ ಹೇಳಿರುವ ಬಿಸಿಸಿಐ ಟೀಮ್ ಇಂಡಿಯಾ ಕ್ರಿಕೇಟ್ ಆಟಗಾರರ ಜರ್ಸಿ ಮೇಲೆ ಬೈಜುಸ್ ಲೋಗೊ ಆಕಿದ್ದಾರೆ.‌. ಈಗ ಬೈಜುಸ್ ಕಂಪನಿಯ ಒಟ್ಟು ಮೌಲ್ಯ ಸುಮಾರು 40 ಸಾವಿರ ಕೋಟಿ‌. ಕಂಪನಿಯಲ್ಲಿ 21 ಪರ್ಸೆಂಟ್ ಶೇರ್ ಹೊಂದಿರುವ 37 ವರ್ಷದ ಬೈಜು ರವೀಂದ್ರನ್ ಸುಮಾರು 7 ಸಾವಿರ ಕೋಟಿಯ ಒಡೆಯರಾಗಿದ್ದಾರೆ. ಟ್ಯೂಷನ್ ನಿಂದ ಬರುತ್ತಿದ್ದ ಹಣಕ್ಕೆ ಬೈಜು ರವೀಂದ್ರನ್ ಸಂತೃಪ್ತಿ ಪಟ್ಟಿದ್ದರೆ ಬೈಜುಸ್ ನಂಬರ್ ಇನ್ ಕಲಿಕಾ ಆ್ಯಪ್ ಹುಟ್ಟುತ್ತಿರಲಿಲ್ಲಾ..