Advertisements

ತನ್ನ ಕೋರ್ಸ್ ಮುಗಿದಿದೆ ಅಂಥ ಸುಳ್ಳು ಹೇಳಿ ಲಾಯರ್ ಕೆಲಸ ಮಾಡ್ತಿದ್ದ ಮಹಿಳೆ.. ನಂತರ ಈ ಮಹಿಳೆ ಬಂಡವಾಳ ಬಯಲಾಗಿದ್ದು ಹೇಗೆ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಕೆಲವರು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಅಂದುಕೊಂಡಿರ್ತಾರೆ.. ಆದರೆ ಸತ್ಯ ಬೂದಿ ಮುಚ್ಚಿದ ಕೆಂಡದಂತೆ. ಒಂದಲ್ಲ ಒಂದು ದಿನ ಹೊರಗೆ ಬರುತ್ತೆ ಅನ್ನೋದು ಇದಕ್ಕೆ ನೋಡಿ.. ಹೌದು ಕಾನೂನು ವಿದ್ಯಾರ್ಥಿನಿ ಅಂಥ ಹೇಳಿಕೊಂಡು ಸೆರ್ಸಿ ಗ್ರೇಸಿಯರ್ ಎಂಬ ಮಹಿಳೆ ಇಂಟರ್ ಶಿಪ್ ಗೆ ಬಂದು ತನ್ನ ಕೋರ್ಸ್ ಮುಗಿದಿದೆ ಅಂಥ ಸುಳ್ಳು ದಾಖಲೆಗಳನ್ನು ಕೊಟ್ಟು ವಕೀಲ್ ವೃತ್ತಿಯನ್ನ ಮುಂದುವರೆಸುತ್ತಾಳೆ.

[widget id=”custom_html-3″]

Advertisements

ಸಾಕಷ್ಟು ಮೊಕದ್ದಮೆಗಳ ವಕಾಲತ್ತು ಕೂಡ ವಹಿಸ್ತಾಳೆ.. ಸಾಲದಕ್ಕೆ ವಕೀಲರ ಸಂಘದ ಚುನಾವಣೆಯಲ್ಲಿ ಭಾಗವಹಿಸಿ ಸಂಘದ ಲೈಬ್ರೇರಿಯನ್ ಆಗಿ ಆಯ್ಕೆಯಾಗಿ ತನ್ನದೇನು ತಪ್ಪೇ ಇಲ್ವೇನೋ ತಾನು ನಿಜವಾಗಿಯೂ ವಕೀಲಳೇ ಎಂಬಂತೆ ಇರ್ತಾಳೆ. ಆದರೆ ಸಂಘಕ್ಕೆ ಬಂದ ಒಂದೇ ಒಂದು ಅನಾಮಧೇಯ ಪತ್ರ ಇದೀಗ ಸೆರ್ಸಿ ಎಂಬ ಮಹಿಳೆಯ ಬಂಡವಾಳವನ್ನೇ ಬಯಲು ಮಾಡಿದ್ದು ಸತ್ಯಾ ಸತ್ಯತೆ ತಿಳಿದ ಸಂಘದವರು ಪೋಲಿಸರಿಗೆ ದೂರನ್ನು ಕೊಟ್ಟಿದ್ದಾರೆ..

[widget id=”custom_html-3″]

ಆದರೆ ತನ್ನ ಮೇಲೆ ಜಾಮೀನು ರಹಿತ ದಾಖಲಾಗಿರೋದನ್ನ ತಿಳಿದ ಕೂಡ್ಲೇ ನ್ಯಾಯಾಲಯದಿಂದ್ಲೇ ಎಸ್ಕೇಪ್ ಆಗಿದ್ದು ಇದೀಗ ಸಿರ್ಸಿ ಎಂಬ ಮಹಿಳೆಗಾಗಿ ಪೋಲಿಸರು ಹುಡುಕಾಡುತ್ತಿದ್ದಾರೆ. ಇದಕ್ಕೆ ಅಲ್ವಾ ಹೇಳೋದು ಮಾಡಿದ್ದುಣ್ಣೋ ಮಹಾರಾಯ ಅಂಥ.. ಈ ಬಗ್ಗೆ ನಿವೇನ್ ಹೇಳ್ತೀರಾ..