Advertisements

ಒಂದೇ ಮರದಲ್ಲಿ 18 ವೆರೈಟಿ ಹಣ್ಣನ್ನು ಬೆಳೆಯುತ್ತಿರುವ ಈ ರೈತನ ಟೆಕ್ನಿಕ್ ಕಂಡು ಅಧಿಕಾರಿಗಳು ಶಾ’ಕ್! ವಿಧೇಶದಿಂದ ಕಾಲ್ಸ್..

Kannada Mahiti

ನಮಸ್ತೆ ಸ್ನೇಹಿತರೆ, ಆಂಧ್ರಪ್ರದೇಶ ರಾಜ್ಯದ ಕೃಷ್ಣ ಜಿಲ್ಲೆಯ ಇವರ ಹೆಸರು ರಾಮ್ ಗೋಪಾಲ್ ಕೃಷ್ಣ.. ಇವರಿಗೆ ಏಳು ಎಕರೆಯ ಮಾವಿನ ತೋಟ ಇದ್ದು ಇದೇ ಇವರ ಜೀವನದ ಆಧಾರ. ಆದರೆ ಪ್ರತೀ ವರ್ಷ ಮರಗಳಿಗೆ ಸುಮಾರು ಒಂದೂವರೆ ಲಕ್ಷ ರಾ’ಸಾಯನಿಕ ಗೊಬ್ಬರ ಹಾಕುತ್ತಿದ್ದ ಇವರಿಗೆ ಮಾವನ್ನು ಮಾರಿದ ಮೇಲೆ ಸಿಗುತ್ತಿದ್ದ ಹಣ ಎರಡು ಲಕ್ಷ.. ಕಡಿಮೆ ಅಂದ್ರೂ ವರ್ಷಕ್ಕೆ 30 ರಿಂದ 50 ಸಾವಿರ ಉಳಿತಾಯ ಮಾಡಬಹುದು. ಈ ಹಣ ಜೀವನ ನಡೆಸಲು ಸಾದ್ಯವೇ.. ಮಾವು ನಮ್ಮ ಜೀವನ ರೂಪಿಸಲ್ಲ ಎಂದು ಹೇಳಿ ಮರಗಳನ್ನು ಕಡಿದು ಹಾಕಿ ಬೇರೆ ಬೆಳೆ ಹಾಕೋಣ ಎಂದು ಮನೆಯವರು ಹೇಳಿದರು. ಆದರೆ ಗೋಪಾಲ್ ಅವರಿಗೆ ಮನಸ್ಸು ಬರಲಿಲಲ್ಲ..

Advertisements

5 ವರ್ಷ ಕಷ್ಟಪಟ್ಟು ಬೆಳೆಸಿದ ಮರಗಳನ್ನು ಕಡಿಯುವುದು ಹೇಗೆ ಎಂದು ಭಾವಿಸಿ, ಏನಾದರೂ ಮಾಡಬೇಕಲ್ಲ ಎಂದು ಆಲೋಚಿಸಿದರು. ಕೃಷಿ ಹಾಗು ಆರ್ಟಿಕಲ್ಚರ್ ಆಪಿಸ್ ಗೆ ಹೋಗಿ ಒಂದಷ್ಟು ಮಾಹಿತಿ ಪಡೆದ ಗೋಪಾಲ್ ಎರಡು ನಿರ್ದಾರಗಳನ್ನು ಮಾಡಿದರು. ಒಂದೇ ಮರದಲ್ಲಿ ಹಲವು ತಳಿಯ ಮಾವನ್ನು ಬೆಳೆಯುವುದು, ಹಾಗೂ ಸಂಪೂರ್ಣವಾಗಿ ರಾ’ಸಾಯನಿಕ ಗೊಬ್ಬರ ನಿಲ್ಲಿಸಿ ಸಗಣಿಯಿಂದ ತಯಾರಿಸಿದ ಗೊಬ್ಬರ ಹಾಕುವುದು. ಅದರ ಪ್ರಕಾರ ಪ್ರಾಯೋಗಿಕವಾಗಿ 18 ತಳಿಯ ಮಾವಿನ ಕೊಂಬೆಗಳನ್ನು ತಂದು ಒಂದೇ ಕೊಂಬೆಗೆ ಜೋಡಿಸಿ ಪೋಷಣೆ ಮಾಡಿದರು.. ಕೊನೆಗೆ ಎಲ್ಲಾ ಕೊಂಬೆಗಳಿಂದ ಚಿಗುರು ಹೊಡೆದವು ಆ ಗಿಡಗಳನ್ನು ಜಮೀನಿನಲ್ಲಿ ನೆಟ್ಟಿ ಬರೀ ಸ್ವಾಭಾವಿಕ ಗೊಬ್ಬರ ಹಾಕಿ ಬೆಳೆಸಿದರು..

ಗೋಪಾಲ್ ಪ್ಲಾನ್ ಸಕ್ಸಸ್ ಆಯಿತು. ಒಂದೇ ಮರ 18 ತಳಿಯ ಮಾವಿನ ಹಣ್ಣನ್ನು ಬಿಡುತ್ತಿದೆ.. ಇದೇ ವಿಧಾನ ಬಳಸಿ ಹಲವು ಮರಗಳನ್ನು ಬೆಳೆಸುತ್ತಿದ್ದಾರೆ ಗೋಪಾಲ್. ಈಗಾಗಲೇ ಇರುವ ಮಾವಿನ ಮರಗಳಿಗೆ ಬರೀ ಸಗಣಿಯಿಂದ ತಯಾರಿಸಿದ ಗೊಬ್ಬರ ಹಾಕಿದ ಗೋಪಾಲ್ ಗೆ ಇನ್ನೊಂದು ಆಶ್ಚರ್ಯ.. ಆ ಮರಗಳು ಎತೆಚ್ಚವಾಗಿ ಮಾವಿನ ಹಣ್ಣನ್ನು ಕೊಡುತ್ತಿವೆ. ಅಷ್ಟೇ ಅಲ್ಲದೇ ಪ್ರತೀ ವರ್ಷ ಮಾವು ಬರುತ್ತಿದೆ.. ಇದರ ಮಧ್ಯೆ ಗೋಪಾಲ್ ಒಂದು ಐಡಿಯಾ ಮಾಡಿದ್ದಾರೆ ಅದು ಏನು ಗೊತ್ತಾ? ಮಾವು ಇನ್ನೇನು ಎರಡು ತಿಂಗಳಲ್ಲಿ ಬರುತ್ತೆ ಅನ್ನುವಾಗ ಸಗಣಿ ಹಾಗು ದನ ಕರುಗಳ ಮೂ’ತ್ರ ಮಿಕ್ಸ್ ಮಾಡಿ ಪಾಣಕದಂತೆ ಜೀವಾಮೃತ ಮಾಡಿಕೊಂಡು ಮರಗಳಿಗೆ ವಾರಕ್ಕೊಮ್ಮೆ ಉಣಿಸುತ್ತಿದ್ದಾರೆ ಗೋಪಾಲ್..

ಇದರಿಂದ ಮಾವು ತುಂಬಾ ಟೇಸ್ಟಿಯಾಗಿ ಪುಷ್ಟಿಯಾಗಿ ಬರಲು ಸಾಧ್ಯವಾಗುತ್ತಿದೆ.. ವರ್ಷಕ್ಕೆ 30 ರಿಂದ 50 ಸಾವಿರ ದುಡಿಯುತ್ತಿದ್ದ ಗೋಪಾಲ್ ಈಗ ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷದವರೆಗೂ ಲಾಭ ಗಳಿಸುತ್ತಿದ್ದಾರೆ. ಒಂದೇ ಮರದಲ್ಲಿ 18 ತಳಿಯ ಮಾವನ್ನು ಬೆಳೆಯುತ್ತಿದ್ದ ಗೋಪಾಲ್ ಟೆಕ್ನಿಕ್ ನೋಡಿ ತಿಳಿದುಕೊಳ್ಳಲು ಪ್ರತಿದಿನ ನೂರಾರು ರೈತರು ಬರುತ್ತಾರೆ.. ಒಂದೇ ಒಂದು ಪ್ರಯತ್ನ ಆಲೋಚನೆ ಈ ದಿನ ಗೋಪಾಲ್ ಅವರನ್ನು ಉತ್ತಮ ರೈತರನ್ನಾಗಿ ಮಾಡಿದೆ. ಅಷ್ಟೇ ಅಲ್ಲದೇ ಗೋಪಾಲ್ ಅವರ ಮಾವಿನ‌ ಹಣ್ಣಿಗೆ ವಿದೇಶಗಳಿಂದ ಆರ್ಡರ್ಸ್ ಬರುತ್ತಿವೆ.. ಒಂದು ಐಡಿಯಾ ಮೂಲಕ ತಮ್ಮ ಬಡತನವನ್ನು ತಾವೇ ನಿವಾರಿಸಿಕೊಂಡ ಗೋಪಾಲ್ ಅವರ ಬಗ್ಗೆ ನೀವೇನು ಹೇಳಲು ಇಷ್ಟ ಪಡುತ್ತೀರಾ.