Advertisements

2 ತಲೆ 3 ಕಣ್ಣುಗಳಿರುವ ಕರು ಜನನ.. ಕರುವನ್ನು ನೋಡಲು ಮುಗಿಬಿದ್ದ ಜನ! ಹೇಗಿದೆ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ನಮ್ಮ ಸುತ್ತ ಮುತ್ತ ನಡೆಯುವ ಕೆಲವು ಘಟನೆಗಳನ್ನ ನಮಗೆ ನಂಬಲು ಕಷ್ಟವಾಗುತ್ತದೆ.. ಈ ರೀತಿಯ ವಿಸ್ಮಯಗಳನ್ನ ನಂಬಲು ಕಷ್ಟವಾದ್ರು ನಂಬಲೇ ಬೇಕು.. ಓರಿಸ್ಸಾದ ನಮ್ರಂಕ್ ಪುರದಲ್ಲಿ ಎರಡು ತಲೆ ಮೂರು ಕಣ್ಣುಗಳು ಇರುವ ಕರುವೊಂದು ಜನಿಸಿದೆ. ನವರಾತ್ರಿ ಸಂದರ್ಭದಲ್ಲಿ ಜನಿಸಿದ ಈ ಕರು.. ಈ ವಿಶಿಷ್ಟವಾದ ಕರುವನ್ನ ನೋಡಲು ವಿವಿದ ಕಡೆಗಳಿಂದ ಜನರು ಬರುತ್ತಿದ್ದಾರೆ. ನಮ್ರಂಕ್ ಪುರದ ಗಣಿರಮ್ ಎಂಬ ರೈತನ ಕೊಟ್ಟೆಗೆಯಲ್ಲಿ ಇರುವ ಈ ಹಸುವಿಗೆ ಈ ಅಪರೂಪದ ಮತ್ತು ವಿಶೇಷವಾದ ಕರು ಹುಟ್ಟಿದೆ..

Advertisements

ಎರಡು ತಲೆ ಮೂರು ಕಣ್ಣಿಗಳಿರುವ ಈ ಕರುವನ್ನ ನೋಡಿದ ಹಸುವಿನ ಮಾಲೀಕ ಕೂಡ ಅಚ್ಚರಿ ಪಟ್ಟಿದ್ದಾರೆ. ಬಳಿಕ ಈ ವಿಷಯವನ್ನು ಊರಿನವರಿಗೆ ತಿಳಿಸಿದ್ದಾರೆ.. ಕರು ಆರೋಗ್ಯವಾಗಿದ್ದು ಅದರ ತಾಯಿ ಕೂಡ ಆರೋಗ್ಯವಾಗಿದೆ.. ಕೆಲವರು ಊರಿನ ಜನ ಬಂದು ಈ ಕರುವಿಗೆ ಪೂಜೆ ಸಲ್ಲಿಸಿದ್ದಾರೆ‌. 2 ವರ್ಷ ಹಿಂದೆ ಗಣಿರಾಮ್ ಈ ಹಸುವನ್ನು ಖರೀದಿ ಮಾಡಿದ್ರು.. ಈ ಹಸು ಇತ್ತೀಚೆಗೆ ಗ’ರ್ಬ ದರಿಸಿತ್ತು..

ನವರಾತ್ರಿ ದಿನವೇ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು ಎರಡು ತಲೆಯ ಈ ಕರು ಎಲ್ಲರ ಗಮನ ಸೆಳೆದಿದೆ. ಮುಕ್ಕಣ್ಣಿನಂತಿರುವ ಈ ಕರುವಿಗೆ ಎರಡು ತಲೆಗಳು ಇರೋದ್ರಿಂದ ಹಾಲು ಕುಡಿಯಲು ಕಷ್ಟವಾಗುತ್ತಿದೆ ಹಸುವಿನ ಕೆ’ಚ್ಚ’ಲಿನಿಂದ ಹಾಲನ್ನು ಕುಡಿಯೋದು ಹಸುವಿಗೆ ಕಷ್ಟವಾದ್ದರಿಂದ, ಹೊರಗಿನಿಂದ ಪ್ಯಾಕೇಟ್ ಹಾಲನ್ನು ಖರೀದಿಸಿ ನೀಡಲಾಗ್ತಿದೆ‌ಯಂತೆ..