Advertisements

ಕಾಮಿಡಿ ಕಿಂಗ್ ಈ ಕುಳ್ಳ ಯಾರು ಗೊತ್ತಾ ? ಈ ಹುಡುಗನ 1 ವರ್ಷದ ಸಂಪಾದನೆ ಕೇಳಿದ್ರೆ ಬೆರಗಾಗುತ್ತೀರಿ !

Cinema Inspire

ನಮಸ್ತೇ ಸ್ನೇಹಿತರೇ, ಯಶಸ್ಸು ಅಷ್ಟೊಂದು ಸುಲಭವಾಗಿ ಒಲಿಯುವುದಿಲ್ಲ. ಆದರೆ ಯಶಸ್ಸು ಯಾರಪ್ಪನ ಮನೆಯ ಸ್ವತ್ತು ಅಂತೂ ಅಲ್ವೇ ಅಲ್ಲ. ನಿರಂತರವಾಗಿ ಪ್ರಯತ್ನ ಹಾಗೂ ಶ್ರಮ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಅಪರೂಪದ ಕಲಾವಿದನ ಜೀವನವೇ ಒಂದು ನೈಜ ನಿದರ್ಶನವಾಗಿದೆ. ಸಾಮಾಜಿಕ ತಾಣಗಳಲ್ಲಿ ಈ ಹುಡುಗನ ಕಾಮಿಡಿ ವಿಡಿಯೋಗಳನ್ನ ನೀವು ನೋಡಿರುತ್ತೀರಾ..ಪಾವ್ ಪಾವ್ ಎಂದೇ ಖ್ಯಾತರಾದ ನೈಜೀರಿಯಾ ಮೂಲದ ಈ ಹುಡುಗನ ಹೆಸರು ಒಸಿಟಾ ಎಹಿಮ್ ಎಂದು. ೨೦೧೨ರಿಂದಲೇ ತನ್ನ ನಟನೆಯಿಂದ ಗುರುತಿಸಿಕೊಂಡಿದ್ದರೂ ಕೂಡ ೨೦೧೯ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟ್ರೊಲ್ ಹಾಗೂ ಮಿಮ್ಸ್ ಗಳ ಮೂಲಕ ನಮಗೆ ಪರಿಚಿತರಾಗಿದ್ದಾರೆ.

ನೈಜೀರಿಯಾದ ಖ್ಯಾತ ನಟರಲ್ಲಿ ಒಬ್ಬನಾಗಿರುವವ ಈ ನಟನ ಆದಾಯ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗೋದು ಗ್ಯಾರಂಟಿ. ಹೌದು, ಈ ನಟನ ಈಗಿನ ಆದಾಯ ಬರೋಬ್ಬರಿ 36 ಲಕ್ಷ ಡಾಲರ್. ಅಂದರೆ ನಮ್ಮ ಭಾರತೀಯ ರೂಪಾಯಿಯಲ್ಲಿ ಲೆಕ್ಕ ಹಾಕಿದಾಗ 26 ಕೋಟಿಗಿಂತಲೂ ಹೆಚ್ಚು. ಆಫ್ರಿಕಾದಾದ್ಯಂತ ಲಕ್ಷಾಂತರ ಅಭಿಮಾನಿ ಬಳಗವನ್ನ ಹೊಂದಿರುವ ಈ ನಟ ೨೦೧೬ ರಿಂದ ಸೋಷಿಯಲ್ ಮೀಡಿಯಾಗಳ ಮೂಲಕ ಭಾರತೀಯರಿಗೆ ತುಂಬಾ ಪರಿಚಿತನಾಗಿದ್ದಾನೆ. ಆದರೆ ಅದೆಷ್ಟೋ ಜನರಿಗೆ ಈ ನಟನ ಬಗ್ಗೆ ಸರಿಯಾದ ಮಾಹಿತಿ ಗೊತ್ತಿಲ್ಲ..

Advertisements

ಹೌದು, ಈ ಅಪರೂಪದ ಕಲಾವಿದ ಒಸಿಟಾ ಎಹಿಮ್ ಜನಿಸಿದ್ದು ಫೆಬ್ರುವರಿ ೨೦, ೧೯೮೨ರಂದು. ಇನ್ನು ಚಿಕ್ಕ ಹುಡುಗನಂತೆ ಕಾಣುವ ಈ ಕಲಾವಿದನಿಗೆ ಈಗ ೩೮ ವರ್ಷ ಎಂದರೆ ನೀವು ನಂಬೋದಿಲ್ಲ. ಹೌದು, ಹುಟ್ಟಿನಿಂದಲೇ ಕುಬ್ಜತೆಗೆ ಒಳಗಾಗಿದ್ದ ಒಸಿಟಾ ಎಹಿಮ್ ನ ದೇಹದ ಬೆಳವಣಿಗೆ ಆಗಲಿಲ್ಲ. ಅವರಿಗೆ ವಯಸಾಗುತಾ ಹೋದರು ಸಹ ಅವರ ದೇಹ ಪುಟ್ಟ ಬಾಲಕನಂತಯೇ ಇದೆ. ಆದರೆ ಇದ್ಯಾವುದು ಈ ನಟನ ಆತ್ಮಸ್ಥೈರ್ಯವನ್ನ ಕುಗ್ಗಿಸಲು ಸಾಧ್ಯವಾಗಲಿಲ್ಲ. ಚಿಕ್ಕಂದಿನಿಂದಲೇ ಓದಿನಲ್ಲಿ ತುಂಬಾ ಜಾಣನಾಗಿದ್ದ ಈ ನಟ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಕೂಡ ಪಡೆದಿದ್ದಾನೆ. ಮೊದಲೇ ಕಿತ್ತು ತಿನ್ನುವ ಬಡತನದಲ್ಲೇ ಹುಟ್ಟಿ ಬೆಳೆದ ಈ ನಟನಿಗೆ ಆತನ ಕುಬ್ಜತೆ ಆತನನ್ನ ಗೇಲಿ ಗೀಡು ಮಾಡುವಂತೆ ಮಾಡಿತ್ತು. ಆದರೆ ಇದ್ಯಾವುದನ್ನ ತಲೆಗೆ ಹಾಕಿಕೊಳ್ಳದ ಒಸಿಟಾ ಎಹಿಮ್ ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ಹಠತೊಟ್ಟು ಅವರ ಕೆಲಸದ ಕಡೆ ಗಮನ ಹರಿಸಿದ್ದ.

ಇದೆ ಕಾರಣದಿಂದಲೇ ಸಣ್ಣ ಸಣ್ಣ ಕಾಮಿಡಿ ನಟನೆಯ ಪಾತ್ರಗಳಿಂದ ಶುರುವಾಗಿ ಇಲ್ಲಿಯವರೆಗೆ ೨೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಈ ನಟ ನಟಿಸಿದ್ದಾನೆ. ಬಡತನದ ಬೇಗೆಯಿಂದ ಬೆಳೆದು ಬಂದ ಒಸಿಟಾ ಎಹಿಮ್ ಇಂದು ನಟ ಮಾತ್ರವಲ್ಲದೆ ನಿರ್ಮಾಪಕ ಕೂಡ ಆಗಿದ್ದಾನೆ. ತನ್ನ ಕುಬ್ಜತೆಯನ್ನು ಮೀರಿ, ತನ್ನ ದೇಹದ ದೌರ್ಬಲ್ಯವನ್ನೇ ಬಳಸಿಕೊಂಡು ೨೦೦೧ರಲ್ಲಿ ಸಿನಿಮಾ ಜಗತ್ತಿಗೆ ಕಾಲಿಡುತ್ತಾನೆ. ಇನ್ನು ೨೦೦೩ರಲ್ಲಿ ನಟಿಸಿದ್ದ ಚಿತ್ರವೊಂದರಲ್ಲಿ ಪಾವ್ ಪಾವ್ ಎನ್ನುವ ಹಾಸ್ಯಭರಿತ ಪಾತ್ರದ ಮೂಲಕ ತುಂಬಾ ಫೇಮಸ್ ಆದ್ರು. ಇನ್ನು ಇದೆ ಚಿತ್ರದಲ್ಲಿ ಒಸಿಟಾ ಎಹಿಮ್ ಜೊತೆ ನಟಿಸಿದ್ದ ಅದ್ಭುತ ಕಲಾವಿದ ಚಿನೇಡು ಡಿಕೇಡಿಸ್ ಸಹ ತುಂಬಾ ಫೇಮಸ್ ಆದರು.

ಮುಂದೆ ಅತೀ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಇವರಿಬ್ಬರ ಜೋಡಿ ಜನರನ್ನ ಮನರಂಜಿಸುವ ಮೂಲಕ ನೈಜೀರಿಯಾದ ಯಶಸ್ವಿ ಸಿನಿ ಜೋಡಿ ಎಂದೇ ಹೆಸರಾಯಿತು. ಚಿನೇಡು ಡಿಕೇಡಿಸ್ ಕೂಡ ಒಸಿಟಾ ಎಹಿಮ್ ನಂತೆ ಕುಬ್ಜ ಕಲಾವಿದ. ಒಸಿಟಾ ಎಹಿಮ್ ತನ್ನ ನೈಜವಾದ ಮನರಂಜನೆಯ ನಟನೆಗಾಗಿ ಆಫ್ರಿಕನ್ ಮೂವಿ ಅವಾರ್ಡ್ಸ್ ನಲ್ಲಿ ಜೀವಮಾನದ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ದಿನ ಗೂಲಿ ನೌಕರನಾಗಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದ ಒಸಿಟಾ ಎಹಿಮ್ ನ ಇಂದಿನ ಒಟ್ಟು ಆದಾಯ ಮೂರೂ ವರೆ ಬಿಲಿಯನ್ ಗಿಂತ ಹೆಚ್ಚು ಇದ್ದು ನೈಜೀರಿಯಾದ ಪ್ರಭಾವಿ ವ್ಯಕ್ತಿ ಹಾಗೂ ಶ್ರೀಮಂತ ನಟರಲ್ಲಿ ಒಬ್ಬರು. ಇನ್ನು ನೈಜೀರಿಯಾದ ಸಿನಿಮಾ ವ್ಯಾಪ್ತಿಯನ್ನ ಹೆಚ್ಚಿಸಿದ ಕೀರ್ತಿ ಇವರದಾಗಿದ್ದು ಇವರ ಈ ಕೊಡುಗೆಗಾಗಿ ೨೦೧೧ರಲ್ಲಿ ನೈಜೀರಿಯಾ ಸರ್ಕಾರದಿಂದ ಪ್ರತಿಷ್ಠಿತ ಫೆಡರಲ್ ರಿಪಬ್ಲಿಕ್ ನ ಗೌರವ ಸದಸ್ಯತ್ವದ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. ತನ್ನದೇ ಟ್ರಸ್ಟ್ ಒಂದನ್ನ ಸ್ಥಾಪನೆ ಮಾಡಿರುವ ಈತ ಸಮಾಜ ಮುಖಿ ಕಾರ್ಯಗಳಲ್ಲೂ ಕೂಡ ತೊಡಗಿಕೊಂಡಿದ್ದಾನೆ.

ಅಷ್ಟೇ ಅಲ್ಲದೆ ಮೋಟಿವೇಶನಲ್ ಭಾಷಣಕಾರನಾಗಿರುವ ಒಸಿಟಾ ತಮಗಿರುವ ದೌರ್ಬಲ್ಯಗಳನ್ನೇ ಉತ್ತಮವಾಗಿ ಬಳಸಿಕೊಂಡು ಹೇಗೆ ಬೆಳೆಯಬೇಕು, ನಮ್ಮ ದೈಹಿಕ ನ್ಯೂನತೆಯ ಬಗ್ಗೆ ಎಂದಿಗೂ ಬೇಸರಿಸಿಕೊಳ್ಳಬಾರದು ಎಂದು ಆತ ಪಬ್ಲಿಕ್ ಸೆಮಿನಾರ್ ಗಳಲ್ಲಿ ಹೇಳುತ್ತಾನೆ. ಇನ್ನು ಒಸಿಟಾ ಮದುವೆ ಕೂಡ ಆಗಿದ್ದು ಒಂದು ಮಗುವಿನ ತಂದೆಯೂ ಕೂಡ. ಒಸಿಟಾ ಅವರ ಜೀವನದ ಈ ಕತೆ ಕೋಟ್ಯಂತರ ಜನರಿಗೆ ಮಾದರಿ ಎಂದರೆ ತಪ್ಪಾಗೋದಿಲ್ಲ.