Advertisements

ಮನೆಕೆಲಸದವನ ಕಾಲಿಗೆ ಬಿದ್ದ ಮಾಲೀಕ ಮಹಿಳೆ! ಇಲ್ಲಿ ನಡೆದಿದ್ದು ಏನ್ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಏನೆ ಹಾಗಲಿ ಒಬ್ಬ ಮನುಷ್ಯನನ್ನು ನೋಡಿ ಅವರನ್ನ ಚೀಪಾಗಿ ನೊಡೋದು ತಪ್ಪು ಅಂತ ಹೇಳ್ತಾರೆ.. ಆ ರೀತಿ ನೋಡಿದವರು ಈಗ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳುವ ಹಾಗೆ ಮಾಡಿದೆ ಈ ಒಂದು ಘಟನೆ.   ಒಬ್ಬ ಲಾಯರ್ ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡು ಸುಬ್ರಮಣಿ ಎಂಬ ವ್ಯಕ್ತಿ ಇರ್ತಾನೆ. ಈತನ ವಯಸ್ಸು 48.. ಇನ್ನೂ ಲಾಯರ್ ಮಹಿಳೆ ಆಫೀಸ್ ಗೆ ಹೋಗಿ ಮನೆಗೆ ವಾಪಸ್ ಆದಾಗ ತನ್ನ ಕೈಯಲ್ಲಿದ್ದ ಡೈಮಂಡ್ ರಿಂಗ್ ಕಾಣೆಯಾಗಿರುವದನ್ನ ನೊಡಿ ಶಾ’ಕ್ ಆಗುತ್ತಾರೆ..

Advertisements

ಬೆಲೆ ಬಾಳುವ ಡೈಮಂಡ್ ರಿಂಗ್ ಕಳೆದುಕೊಂಡು ದುಃಖದಲ್ಲಿದ್ದ ಈ ಮಹಿಳೆ ಅವರ ಮನೆಯಲ್ಲಿ ಕೆಲಸ ಮಾಡುವವರ ಮೇಲೆ ಸಂದೇಹ ಪಟ್ಟಿದ್ದಾರೆ. ಸಂಜೆಯ ಸಮಯದಲ್ಲಿ ಸುಬ್ರಮಣಿ ಮಾತ್ರ ಮನೆಯಲ್ಲಿ ಇದ್ದ ಕಾರಣ ಅವರ ಮೇಲೆಯೇ ಹೆಚ್ಚಾಗಿ ಸಂದೇಹ ಪಟ್ಟಿದ್ದಾರೆ ಜೊತೆಗೆ ವಿಚಾರಣೆ ಕೂಡ ಮಾಡಿದ್ದಾರೆ. ಇನ್ನೂ ತೋಟಗಾರ ಎಷ್ಟು ನಿಜ ಹೇಳಿದರು ಆ ಮಹಿಳೆ ಆತನ ಮೇಲೆ ಸಂದೇಹ ಪಟ್ಟು ಕೆಲಸದಿಂದ ತೆಗೆದುಹಾಕಿದ್ದಾರೆ.. ಇದರಿಂದ ನ್ಯಾಯವಾಗಿ ಕೆಲಸ ಮಾಡುತ್ತಿದ್ದ ತನ್ನ ಮೇಲೆಯೇ ಸಂದೇಹ ಪಟ್ಟಿದ್ದಾರೆ ಎಂದು ಸುಬ್ರಮಣಿ ತುಂಬಾ ಬೇಸರವಾಗುತ್ತಾರೆ..

ಇನ್ನೂ  ರಾತ್ರಿಯಾದ ಮೇಲೆ ಮಹಿಳೆಯ ಗಂಡ ಮನೆಗೆ ಬರುತ್ತಾರೆ. ನಂತರ ನಡೆದ ವಿಚಾರವನ್ನೆಲ್ಲ ಈ ಮಹಿಳೆ ಗಂಡನಿಗೆ ತಿಳಿಸುತ್ತಾಳೆ.. ತಕ್ಷಣ ಆಕೆಯ ಗಂಡ ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾವನ್ನು ಚೆಕ್ ಮಾಡಿ ನೋಡಿದಾಗ ಬಾತ್ರೂಮ್ ನಿಂದ ಸ್ನಾನ ಮಾಡಿ ಹೊರಗೆ ಬಂದ ನಂತರವೇ ಡೈಮಂಡ್ ರಿಂಗ್ ಕಾಣೆಯಾಗಿರುವುದು ಪತ್ತೆಯಾಗಿದೆ. ಬಾತ್ರೂಮ್ ನಲ್ಲಿ ಡೈಮಂಡ್ ರಿಂಗ್ ಕಳೆದುಕೊಂಡ ಆಕೆ ಸಂದೇಹ ಪಟ್ಟು ಕೆಲಸದಿಂದ ತೆಗೆದ ಸುಬ್ರಮಣಿ ಅವರನ್ನ ನೆನೆಸಿಕೊಂಡು ಪಶ್ಚಾತ್ತಾಪ ಪಟ್ಟಿದ್ದಾಳೆ..

ಆತನ ಬಳಿ ಹೋಗಿ ಕ್ಷಮೆ ಕೇಳಿ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದಾಳೆ. ಇನ್ನೂ ಈತ ಈ ಓನರ್ ಗೆ ಡೈಮಂಡ್ ಸಿಗಬೇಕು ಏನನ್ನಾದರೂ ಸಹಾಯ ಮಾಡಬೇಕು ಅನ್ನೊ ನಿಟ್ಟಿನಲ್ಲಿ ಅವರೇ ಆ ಚೇಂಬರ್ ನಲ್ಲಿ ಇಳಿದು ಗಂಟೆಗಟ್ಟಲೇ ಹುಡುಕಿದ್ದಾರೆ.. ಕೊನೆಗೂ ಡೈಮಂಡ್ ರಿಂಗ್ ಅನ್ನು ಕಂಡುಹಿಡಿದಿದ್ದಾನೆ. ಕೆಲಸದವನ ಈ ನಿಯತ್ತನ್ನು ನೊಡಿ ಶಾ’ಕ್ ಆದ ಅವರು ಪಶ್ಚಾತ್ತಾಪ ಪಟ್ಟು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.. ಸದ್ಯ ಈ ವಿಚಾರವನ್ನ ಆ ಲಾಯರ್ ಮಹಿಳೆ ಜಾಲತಾಣದಲ್ಲಿ ಹಂಚಿಕೊಂಡಿದ್ದು ಆ ತೋಟಗಾರನ ನಿಯತ್ತನ್ನು ಹೊಗಳಿದ್ದಾಳೆ.. ಇನ್ನೂ ಈತನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.