Advertisements

ಕಸದ ತೊಟ್ಟಿಯ ಬಳಿ ಅನ್ನ ತಿನ್ನುತ್ತಿದ್ದ ವಾಚ್ ಮ್ಯಾನ್ ಗೆ ಓನರ್ ಮಾಡಿದ್ದೇನು ಗೊತ್ತಾ? ಕಣ್ಣೀರು ಬರುತ್ತೆ..

Kannada Mahiti

ನಮಸ್ತೆ ಸ್ನೇಹಿತರೆ, ಮದನ್ ಎಂಬ ಕೋಟ್ಯಾಧಿಪತಿಯ ಮನೆಯ ಕಾವಲುಗಾರನಾಗಿ ನಾರಯಣ್ ಎಂಬ ಸುಮಾರು 60 ವರ್ಷ ವಯಸ್ಸಿನ ವೃದ್ಧ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದ.. ಪ್ರತೀ ದಿನ ಮದನ್ ಡ್ಯೂಟಿಗೆ ಹೊರಗಡೆ ಹೋದಾಗ ಮತ್ತೆ ಮನೆಗೆ ವಾಪಸ್ ಬರುವಾಗ ಸೆಲ್ಯೂಟ್ ಹೊಡೆದು ನಮಸ್ಕಾರ ಮಾಡಿ ಗೇಟ್ ತೆಗೆಯುವುದು ನಾರಾಯಣ್ ಅವರ ಕೆಲಸವಾಗಿತ್ತು.. ಇಗೇ ಪ್ರತೀ ದಿನವೂ ಕೂಡ ಮಾಡುತ್ತಿದ್ದ. ಆದರೆ ಬದಲಿಗೆ ಓನರ್ ಮದನ್ ಒಂದು ದಿನವೂ ಕೂಡ ವಾಚ್ ಮ್ಯಾನ್ ನಾರಾಯಣ್ ಅವರನ್ನ ಸರಿಯಾಗಿ ನೋಡುತ್ತಿರಲಿಲ್ಲ ಒಂದು ಸ್ಮೈಲ್ ಕೂಡ ಕೊಡುತ್ತಿರಲಿಲ್ಲ..

Advertisements

ನಾರಾಯಣ್ ಅವರಿಗೆ ವಯಸ್ಸಾದ ಕಾರಣ ಅತೀ ಕಡಿಮೆ ಸಂಬಳವನ್ನು ಕೊಡುತ್ತಿದ್ದರು.. ಓನರ್ ಯೋಗಕ್ಷೇಮ ವಿಚಾರಿಸದಿದ್ದರೂ. ನಾರಾಯಣ್ ಮದನ್ ಮನೆಯಲ್ಲೇ ತುಂಬಾ ನಿಯತ್ತಿನಿಂದ ಕೆಲಸ ಮಾಡುತ್ತಿದ್ದರು.. ಈಗೆ ಒಂದು ದಿನ ಹೊಟ್ಟೆ ಹಸಿವಿಗೆ ತಾಳಲಾರದೆ ಆ ಮನೆಯ ಮುಂದೆ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಬಾಳೆಎಲೆಯ ಆಹಾರವನ್ನು  ವಾಚ್ ಮ್ಯಾನ್ ನಾರಾಯಣ್ ತಿನ್ನುತ್ತಿದ್ದ.. ಏಕೆಂದರೆ ಬರುವ ಸಂಬಳದಲ್ಲಿ ಮನೆಯ ಊಟಕ್ಕೆ ಸಾಲುತ್ತಿರಲಿಲ್ಲ, ಈಗಾಗಿ ಕಸದ ತೊಟ್ಟಿಯಲ್ಲಿ ಬಿದ್ದಿರುವಂತಹ ಆಹಾರವನ್ನು ತಿನ್ನುತ್ತಿದ್ದ.. ಇನ್ನೂ ಈ ರೀತಿ ವಾಚ್ ಮ್ಯಾನ್ ಕಸದ ತೊಟ್ಟಿಯಲ್ಲಿ ಬಿದ್ದಿರುವ ಆಹಾರವನ್ನು ತಿನ್ನುತ್ತಿರುವುದನ್ನು ಮದನ್ ಅವರು ನೋಡಿ ತುಂಬಾ ಬೇಸರಪಡುತ್ತಾರೆ..

ಇದಾದ ನಂತರ ಮರುದಿನ ತನ್ನ ಮನೆಯಲ್ಲಿ ಬಿಸಿ ಬಿಸಿ ಅಡುಗೆ ಮಾಡಿಸಿ. ಅದನ್ನು ಒಂದು ಕವರ್ ನಲ್ಲಿ ಹಾಕಿಕೊಂಡು, ಮನೆಯ ಹೊರಗಡೆ ಇರುವ ಕಸದ ತೊಟ್ಟಿಯ ಬಳಿ ನಾರಾಯಣ್ ಗೆ ಗೊತ್ತಾಗದಂತೆ ಹೋಗಿ ಇಟ್ಟು ಬರುತ್ತಾರೆ.. ಮದನ್ ಊಹಿಸಿದಂತೆ ವಾಚ್ ಮ್ಯಾನ್ ನಾರಾಯಣ್ ಅವರು ಊಟವನ್ನು ಎತ್ತಿಕೊಂಡು ಹೊಟ್ಟೆ ತುಂಬಾ ತಿನ್ನುತ್ತಾರೆ.. ಅಂದಿನಿಂದಲೂ ಕಸದ ತೊಟ್ಟಿಯ ಬಳಿ ಕವರ್ ನಲ್ಲಿ ಬಿಸಿ ಬಿಸಿ ಊಟ ಇರುತ್ತಿತ್ತು.. ಆಗ ವಾಚ್ ಮ್ಯಾನ್ ನಾರಾಯಣ್ ಅವರಿಗೆ ಆಶ್ಚರ್ಯವಾಗುತ್ತದೆ! ಯಾರಿದು ಬಿಸಿ ಬಿಸಿಯಾದ ಊಟವನ್ನು ತಂದು ಇಲ್ಲಿ ಇಡುತ್ತಾರೆ ಎಂದು. ಯಾರಾದರೇನು ತನಗೆ ಬಿಸಿ ಬಿಸಿ ಊಟ ದಿನನಿತ್ಯ ಸಿಗುತ್ತಿದೆ ಅಷ್ಟೇ ಸಾಕು ಎಂದು ಸುಮ್ಮನಾಗುತ್ತಾರೆ..

ಈಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಮನೆಯ ಓನರ್ ಮದನ್ ಅವರು ಹೃದಯಘಾ’ತದಿಂದ ನಿಧನ ಹೊಂದುತ್ತಾರೆ.. ಆ ದಿನ ಕಸದ ತೊಟ್ಟಿಯ ಬಳಿ ಊಟದ ಕವರ್ ಇರಲಿಲ್ಲ.. ಆಗ ವಾಚ್ ಮ್ಯಾನ್ ಯಾರೋ ಈ ದಿನ ಊಟದ ಕವರ್  ತೆಗೆದುಕೊಂಡು ಹೋಗಿರಬಹುದು ಎಂದು ಸುಮ್ಮನಾಗುತ್ತಾರೆ.. ಆದರೆ ಎಷ್ಟು ದಿನಗಳು ಕಳೆದರೂ ಆ ದಿನ ತೊಟ್ಟಿಯ ಬಳಿ ಊಟದ ಕವರ್ ಇರುತ್ತಿರಲಿಲ್ಲ.. ಆಗ ವಾಚ್ ಮ್ಯಾನ್ ಗೆ ತುಂಬಾ ಕಷ್ಟವಾಗುತ್ತದೆ. ಈ ಕಡೆ ಊಟವೂ ಸಿಗುತ್ತಿರಲಿಲ್ಲ ಮತ್ತೊಂದು ಕಡೆ ಸಂಬಳವೂ ಕೂಡ ಜ್ಯಾಸ್ತಿ ಇರಲಿಲ್ಲ.. ಇದರಿಂದ ಬೇಸತ್ತ ವಾಚ್ ಮ್ಯಾನ್ ನಾರಾಯಣ್ ಅವರು ಓನರ್ ಹೆಂಡತಿಯ ಬಳಿ ಹೋಗಿ ನೀವು ಕೊಡುತ್ತಿರುವ ಸಂಬಳ ಸಾಕಾಗುತ್ತಿಲ್ಲ..

ಒಂದು ನನ್ನ ಸಂಬಳ ಜ್ಯಾಸ್ತಿ ಮಾಡಿ ಅಥವಾ ನನಗೆ, ನನ್ನ ಹೆಂಡತಿ ಮಕ್ಕಳಿಗೆ ಒಂದು ಹೊತ್ತಿನ ಊಟವನ್ನು ಕೊಡಿ. ಎರಡಕ್ಕೂ ನೀವು ಒಪ್ಪಲಿಲ್ಲ ಅಂದರೆ ನಾನು ನಾಳೆಯಿಂದ ನಿಮ್ಮ ಮನೆ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳುತ್ತಾರೆ.. ವಾಚ್ ಮ್ಯಾನ್ ಕಷ್ಟದ ಪರಿಸ್ಥಿತಿಯನ್ನು ಕೇಳಿದ ಮದನ್ ಅವರ ಪತ್ನಿಗೆ ತುಂಬಾ ಬೇಸರವಾಗುತ್ತದೆ.. ಸ್ವಲ್ಪ ಸಮಯ ಮೌನವಯಿಸಿದ ಮದನ್ ಹೆಂಡತಿ! ಈಗ ಬಂದು ನಿನ್ನ ಕಷ್ಟ ಏಳಿಕೊಳ್ಳುತ್ತಿದ್ದೀಯಾ.. ಇಷ್ಟು ದಿನ ನಮ್ಮ ಬಳಿ ಏನು ಕೇಳಲಿಲ್ಲ ಯಾಕೆ? ಎಂದು ಕೇಳುತ್ತಾರೆ. ಇನ್ನೂ ವಾಚ್ ಮ್ಯಾನ್ ಗೆ ಬೇರೆದಾರಿಯಿಲ್ಲದೆ ಈ ರೀತಿ ಹೇಳುತ್ತಾನೆ.. ಮೇಡಮ್ ನಿಮ್ಮ ಮನೆಯ ಮುಂದಿರುವ ಕಸದ ತೊಟ್ಟಿಯ ಬಳಿ ಯಾರೋ ಪುಣ್ಯಾತ್ಮರು ನನಗೆ ಮತ್ತು ನನ್ನ ಕುಟುಂಬಕ್ಕೆ ಬೇಕಾಗುವಷ್ಟು ಊಟವನ್ನು ಇಡುತ್ತಿದ್ದರು..

ಆ ಊಟವನ್ನು ತಿನ್ನುತ್ತಾ ಇಷ್ಟು ದಿನ ಏಗೋ ನನ್ನ ಸಂಸಾರವನ್ನು ನೋಡಿಕೊಳ್ಳುತ್ತಿದ್ದೆ.. ಆದರೆ ಕೆಲವು ದಿನಗಳಿಂದ ಅಲ್ಲಿ ಊಟವನ್ನು ಯಾರು ಇಡುತ್ತಿಲ್ಲ ಈಗಾಗಿ ನನಗೆ ತುಂಬಾ ಕಷ್ಟವಾಗುತ್ತಿದೆ ಎಂದು ಕಣ್ಣೀರು ಹಾಕುತ್ತಾರೆ.. ವಾಚ್ ಮ್ಯಾನ್ ಊಟದ ಬಗ್ಗೆ ಹೇಳಿದ ನಂತರ ಮದನ್ ಹೆಂಡತಿ ಯಾವಾಗಿನಿಂದ ಅಲ್ಲಿ ನಿನಗೆ ಊಟ ಸಿಗುವುದು ನಿಂತು ಹೋಯಿತೆಂದು ಕೇಳುತ್ತಾರೆ.. ನಮ್ಮ ಓನರ್ ಮದನ್ ಅವರು ಸ’ತ್ತ ದಿನದಿಂದ ಅಲ್ಲಿ ಊಟದ ಕವರ್ ಸಿಗುತ್ತಿಲ್ಲ ಎಂದು ವಾಚ್ ಮ್ಯಾನ್ ಹೇಳುತ್ತಾರೆ.. ಇದನ್ನು ಕೇಳಿದ ಮದನ್ ಹೆಂಡತಿ ಕಣ್ಣೀರು ಹಾಕುತ್ತಾ ನಿನಗೆ ಒಂದು ವಿಷಯ ಗೊತ್ತಾ?

ನನ್ನ ಗಂಡ ಮದನ್ ದಿನವೂ ಐದು ಜನಗಳಿಗೆ ಆಗುವಷ್ಟು ಆಹಾರವನ್ನು ಮನೆಯಿಂದ ಮಾಡಿಸಿಕೊಂಡು ಪ್ರತಿದಿನ ಹೋಗುತ್ತಿದ್ದರು.. ಆ ಐದು ಜನರಲ್ಲಿ ನಾಲ್ಕು ಜನರನ್ನು ಕಂಡುಹಿಡಿದು ನಾನು ಅವರಿಗೆ ಈಗ ಊಟ ಸಪ್ಲೈ ಮಾಡುತ್ತಿದ್ದೇನೆ.. ಆದರೆ ಆ ಐದನೇ ವ್ಯಕ್ತಿ ಸಿಕ್ಕಿರಲಿಲ್ಲ.. ಈಗ ಆ ಐದನೇ ವ್ಯಕ್ತಿ ಬೇರೆ ಯಾರೂ ಅಲ್ಲ ನೀನೆ ಎಂಬುದು ತಿಳಿದು ಕಣ್ಣೀರು ಹಾಕುತ್ತಿದ್ದೇನೆ ಎಂದು ಹೇಳುತ್ತಾರೆ.. ನಾನು ದಿನವೂ ನಮಸ್ಕಾರ ಮಾಡುತ್ತಿದ್ದರೂ, ನನ್ನ ಕಡೆ ತಿರುಗಿ ಸಹ ನೋಡದ ಓನರ್ ಮದನ್ ಈ ರೀತಿ ತಮಗೆ ಪ್ರತಿದಿನ ಊಟವನ್ನು ತಂದು ಇಡುತ್ತಿದ್ದರು.. ಎಂದು ಶಾಕ್ ಆಗಿ ವಾಚ್ ಮ್ಯಾನ್ ನಾರಾಯಣ್ ಅವರು ಕಣ್ಣೀರು ಹಾಕುತ್ತಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..