Advertisements

ಹರಿದ ಬಟ್ಟೆಯಲ್ಲಿದ್ದ ಸ್ಕೂಲ್ ಹುಡುಗಿಗೆ.. ಈ ಪಾನಿ ಪೂರಿ ಅಂಗಡಿಯ ಹುಡುಗ ಏನ್ ಮಾಡಿದ ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಸಾಧಾರಣವಾಗಿ ನಮ್ಮ ಊರುಗಳಲ್ಲಿ ಹೊರ ರಾಜ್ಯದಿಂದ ಬಂದು ಪಾನಿ ಪೂರಿ ಮಾಡುವ ವ್ಯಕ್ತಿಗಳಿಗೆ ಚುಡಾಯಿಸುವುದು ಅವರನ್ನ ತಪ್ಪಾದ ಅರ್ಥದಲ್ಲಿ ನೋಡುವುದು ಕೆಲವರು ಹೆಚ್ಚಾಗಿ ಮಾಡುತ್ತಿರುತ್ತಾರೆ.. ಆದರೆ ಆ ರೀತಿ ಅವರು ತಪ್ಪಾದವರಲ್ಲ ಅನ್ನುವ ರೀತಿಯಲ್ಲಿ ಇಲ್ಲಿ ಒಂದು ಘಟನೆ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದನ್ನ ತಿಳಿಯೋಣ.. ಬೆಂಗಳೂರಿನ ಕೇಆರ್ ಪುರಂ ನಲ್ಲಿ ಹೊರ ರಾಜ್ಯದಿಂದ ಬಂದು ಸುಷಾಂತ್ ಎಂಬ ಯುವಕ ಅಮ್ಮ ಮತ್ತು ತಂಗಿಯ ಜೊತೆಯಲ್ಲಿ ಒಂದು ಚಿಕ್ಕ ಮನೆಯಲ್ಲಿ ವಾಸವಾಗಿರುತ್ತಾನೆ. ಪಕ್ಕದಲ್ಲಿ ಒಂದು ಶಾಲೆ ಕೂಡ ಇದೆ..

Advertisements

ಅಲ್ಲಿ ಒಂದು ಪಾನಿಪೂರಿ ಅಂಗಡಿಯನ್ನು ರಸ್ತೆಯ ಬದಿಯಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುತ್ತಾನೆ.. ಈಗೆ ಒಂದು ದಿನ ಶಾಲೆ ಮುಗಿದು ಒಂದು ಹುಡುಗಿ ಸೈಕಲ್ ನಲ್ಲಿ ಮುಂದೆಯಿರುವ ಬಾಸ್ಕೆಟ್ ನಲ್ಲಿ ತನ್ನ ಬ್ಯಾಗ್ ಅನ್ನು ಇಟ್ಟುಕೊಂಡು ನಡೆದುಕೊಂಡು ಹೋಗುವಾಗ ಆ ಹುಡುಗಿಯ ಬೆನ್ನಿನ ನೇಲೆ ಯೂನಿಫಾರ್ಮ್ ಕಿತ್ತುಹೋಗಿದೆ ಅದು ಆಕೆಗೆ ಗೊತ್ತಾಗಿರಲಿಲ್ಲ.. ಹಾಗೇಯೇ ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದಾಳೆ. ಕೆಲವರು ಅದನ್ನ ನೋಡಿ ನೋಡದ ಹಾಗೆ ಹೋಗಿದ್ದರು..

ಆದರೆ ಇದನ್ನ ನೋಡಿದ ಪಾನಿಪೂರಿ ಅಂಗಡಿಯ ಸುಷಾಂತ್ ಈ ಹುಡುಗಿಗೆ ಒಂದು ನಿಮಿಷ ನಿಲ್ಲಿಸಿದ್ದಾನೆ.. ಅಲ್ಲೇ ಕೂರಲು ಸಹ ಹೇಳಿದ್ದಾನೆ. ಆಗ ಸುಷಾಂತ್ ಅಲ್ಲೇ ಹತ್ತಿರದಲ್ಲಿರುವ ಮನೆಗೆ ಕರೆ ಮಾಡಿ ತಂಗಿಯ ಹತ್ತಿರ ಒಂದು ಸ್ವೆಟರ್ ತರಲು ಹೇಳುತ್ತಾನೆ. ನಂತರ ಆತನ ತಂಗಿಯ ಮುಖಾಂತರ ಎಲ್ಲವನ್ನ ಆಕೆಗೆ ವಿವರಿಸಿ ಆ ಸ್ವೆಟರ್ ಅನ್ನು ಹಾಕಿಸಿ ಮನೆಯವರೆಗೂ ಬಿಟ್ಟು ಬರಲು ಹೇಳಿದ್ದಾನೆ.. ಇನ್ನೂ ಮರುದಿನ ಆ ಹುಡುಗಿ ತನ್ನ ಅಮ್ಮನ ಜೊತೆ ಸುಷಾಂತ್ ನನ್ನ ನೋಡಲು ಬಂದಿದ್ದಾರೆ..

ಆಗ ಆಕೆಯ ತಾಯಿ ಆ ಹುಡುಗನಿಗೆ ಕೈ ಮುಗಿದು ಸ್ವಲ್ಪ ಹಣ ಸಹಾಯ ಮಾಡೋಣ ಎಂದು ಹಣವನ್ನು ಕೂಡ ಕೊಟ್ಟಿದ್ದಾರೆ.. ಆಗ ಸುಷಾಂತ್ ನನಗೂ ಒಬ್ಬ ತಂಗಿ ಇದ್ದಾಳೆ ಈ ಹುಡುಗಿಯನ್ನ ಅದೇ ರೀತಿ ಅಂದುಕೊಂಡೆ ದುಡ್ಡು ಏನು ಬೇಡ ಎಂದು ಹೇಳಿಕೊಂಡಿದ್ದಾರೆ.. ನಿಜವಾಗಿಯೂ ಸುಷಾಂತ್ ದೊಡ್ಡ ಮನುಷ್ಯನೇ ಅಲ್ವಾ. ಸದ್ಯ ಈ ಹುಡುಗಿಯ ತಾಯಿ ತನ್ನ ಪೇಸ್ಬುಕ್ ಖಾತೆಯಲ್ಲಿ ಈ ವಿಚಾರವನ್ನ ಹಂಚಿಕೊಂಡಿದ್ದಾರೆ..