ಪಪ್ಪಾಯಿ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಈ ಹಣ್ಣು ಸಂಪೂರ್ಣ ಆಹಾರವಾಗಿದ್ದು ಹಲವು ಹಣ್ಣುಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಹಾಗೂ ವರ್ಷವಿಡೀ ಸಿಗುವ ಹಣ್ಣಾಗಿದೆ. ಇದರಲ್ಲಿ ಅನೇಕ ರೀತಿಯ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಅಲ್ಲದೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ರೋಗಗಳಿಗೆ ಈ ಹಣ್ಣು ರಾಮಬಾಣವಿದ್ದಂತೆ.

ಈ ಹಣ್ಣಿನಲ್ಲಿ ಪೊಟಾಷಿಯಂ, ಮೆಗ್ನೀಷಿಯಂ, ಪ್ರೋಟೀನ್, ಕೆರೋಟಿನ್, ನಾರಿನಂಶ ಇನ್ನೂ ಇತರೆ ಹಲವು ಆರೋಗ್ಯ ಅಂಶಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಇದರಲ್ಲಿ ವಿಟಮಿನ್ ‘ಎ’ ವಿಟಮಿನ್ ‘ಸಿ’ ಹೇರಳವಾಗಿ ಇದೆ. ಪರಂಗಿ ಕಾಯಿ ಸೇರಿದಂತೆ ಮರದ ಪ್ರತಿ ಭಾಗದಲ್ಲೂ ಪೆಭಿನ್ ಎಂಬ ಕಿಡುಮಾ ಹೆಚ್ಚಾಗಿದ್ದು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

ಊಟ ಮುಗಿದ ನಂತರ ಪಪ್ಪಾಯಿ ಹಣ್ಣನ್ನು ಸೇವನೆ ಮಾಡುವುದನ್ನು ರೂಡಿಸಿಕೊಂಡರೆ ನಿಮ್ಮ ಜೀರ್ಣ ಶಕ್ತಿ ಉತ್ಪಾದನೆಯಾಗುತ್ತದೆ. ಇನ್ನೂ ಪಪ್ಪಾಯಿ ಹಣ್ಣು ಮಾತ್ರವಲ್ಲದೆ ಗಿಡದ ಎಲೆಗಳು ಕೂಡ ಆರೋಗ್ಯಕ್ಕೆ ಉತ್ತಮವಾದುದ್ದು. ಪಪ್ಪಾಯಿ ಎಲೆಗಳನ್ನು ಕಿತ್ತು ಅದನ್ನು ತಿಂದರೆ ಕರುಳಿನಲ್ಲಿರುವ ಕ್ರಿಮಿಗಳನ್ನು ನಾಶ ಮಾಡತ್ತದೆ. ಹಾಗೂ ಪಪ್ಪಾಯಿ ಸೇವನೆಯಿಂದ ದೇಹದಲ್ಲಿರುವ ಗಾಯಗಳನ್ನು ಬೇಗ ಗುಣಮಾಡುತ್ತದೆ

ಪಪ್ಪಾಯಿನಲ್ಲಿರುವ ಅಂಶಗಳು ಜಂತುಹುಳಗಳ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಈಗಿನ ಮಕ್ಕಳಲ್ಲಿ ಹೆಚ್ಚಾಗಿ ಜಂತು ಹುಳುಗಳು ಕಂಡುಬರುತ್ತದೆ ಯಾಕೆಂದರೆ ಹೆಚ್ಚು ಸಿಹಿ ಪದಾರ್ಥಗಳು ಸೇವನೆ ಮಾಡುತ್ತಾರೆ ಆದ್ದರಿಂದ ಜಂತುಹುಳಗಳು ಕಾಣಿಸುತ್ತವೆ. ಹೊಟ್ಟೆಯಲ್ಲಿ ಹುಳು ಹಾಗೂ ಇತರೆ ಕೆಲವೊಂದು ಕ್ರಿಮಿಗಳು ಇದ್ದರೆ ಪಪ್ಪಾಯಿಯಲ್ಲಿರುವ ಅಂಶಗಳು ಹೋರಾಡುತ್ತವೆ ಮತ್ತು ನಿಯಮಿತವಾಗಿ ಪಪ್ಪಾಯಿ ಹಣ್ಣಿನ ಸೇವನೆ ಮಾಡಿದರೆ ಮೂತ್ರಕೋಶ ಹಾಗೂ ಮೂತ್ರನಾಳದಲ್ಲಿರುವ ಕಲ್ಲುಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಪಪ್ಪಾಯಿ ಸೇವನೆಯಿಂದ ಶರೀರದಲ್ಲಿರುವ ಗ್ರಂಥಿಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ‘ಸಿ’ ಎಂಬ ಅಂಶ ಚರ್ಮದ ಜೀವಕೋಶಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಈ ಹಣ್ಣಿನಲ್ಲಿ ‘ಎ’ ಎಂಬ ಅಂಶ ಇರುವುದರಿಂದ ಕಣ್ಣಿನ ದೋಷವನ್ನು ನಿವಾರಿಸುತ್ತದೆ ಮತ್ತು ಕಾಲುಗಳು ಒಡೆದಿದ್ದರೆ ಪಪ್ಪಾಯಿ ಹಣ್ಣನ್ನು ಪೇಸ್ಟ್ ಮಾಡಿ ಒಡೆದಿರುವ ಭಾಗಕ್ಕೆ ಆ ಪೇಸ್ಟ್ ಅನ್ನು ಹಚ್ಚಿಕೊಂಡರೆ ಒಡೆದ ಹಿಮ್ಮಡಿ ನಿವಾರಣೆಯಾಗುತ್ತದೆ.

ಪಪ್ಪಾಯಿ ಹಣ್ಣಿನ ಸೇವನೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು, ಈ ಹಣ್ಣಿನಿಂದ ಕ್ಯಾನ್ಸರ್ ಅನ್ನು ನಿಯಂತ್ರಿಸಬಹುದು. ಹೌದು ಪಪ್ಪಾಯಿ, ಹಣ್ಣಿನಲ್ಲಿ ಅಂಟಿ ಆಕ್ಸಿಡೆಂಟ್ ಗಳು, ಡೈಯಟ್ರಿ ಫೈಭರ್ ಗಳು ಇರುವುದರಿಂದ ದೇಹದಲ್ಲಿರುವ ಕ್ಯಾನ್ಸರ್ ಕಾರಕ ಕೋಶಗಳನ್ನು ಹೊರದಬ್ಬುತ್ತದೆ. ವಿಟಮಿನ್ ‘ಸಿ’, ‘ಇ’ ಹಾಗೂ ಬಿಟಾಕೇರೋಟಿನ್ ಎಂಬ ಕ್ಯಾನ್ಸರ್ ಹಾಗೂ ಕೋಲಾನ್ ಕ್ಯಾನ್ಸರ್ ಕೋಶಗಳ ವಿರುದ್ದ ಹೋರಾಡಲು ಸಹಕರಿಸುತ್ತದೆ.