ನಮಸ್ತೆ ಸ್ನೇಹಿತರೆ, ನಮ್ಮ ದೇಶದಲ್ಲಿ ವಿಧ ವಿಧವಾದ ಆಚಾರ, ವಿಚಾರ ಮತ್ತು ಸಂಪ್ರದಾಯಗಳು ಇವೆ.. ಇನ್ನೂ ಕೆಲವು ಸಂಪ್ರದಾಯಗಳ ಬಗ್ಗೆ ಕೇಳುವುದಕ್ಕೆ ಬಹಳ ವಿಚಿತ್ರ ಎಂದು ನಿಮಗೆ ಅನಿಸಬಹುದು. ಆದರೆ ಕೆಲವೊಂದು ವರ್ಗದವರು ಮತ್ತು ಕುಲದವರು ಸಂಪ್ರದಾಯಗಳನ್ನು ಈಗಲೂ ಪಾಲನೆ ಮಾಡುತ್ತಿದ್ದಾರೆ.. ಆದರೆ ಛತ್ತೀಸ್ಗಢ ರಾಜ್ಯದಲ್ಲಿ ಎಲ್ಲದಕ್ಕು ಮೀರಿದ ಒಂದು ಸಂಪ್ರದಾಯವಿದೆ. ಆ ಊರಿನ ಜನಗಳು ಒಂದು ವಿಚಿತ್ರ ಸಂಪ್ರದಾಯವನ್ನು ಪಾಲನೆ ಮಾಡುತ್ತಿದ್ದಾರೆ.. ಅದು ಏನೆಂದರೆ ಅಲ್ಲಿನ ಜನಗಳು ತಮ್ಮ ಹೆಣ್ಣು ಮಕ್ಕಳ ಜೊತೆ ಹಾವುಗಳನ್ನು ಕೂಡ ತಮ್ಮ ಬೀಗರ ಮನೆಗೆ ಕೊಟ್ಟು ಕಳುಹಿಸುತ್ತಾರೆ..

ಛತ್ತೀಸ್ಗಢದಲ್ಲಿ ಗೌರಯ್ಯ ಎಂಬ ಒಂದು ಕಮ್ಯೂನಿಟಿ ಇದೆ. ಈ ಗೌರಯ್ಯ ವರ್ಗಕ್ಕೆ ಸೇರಿದ ಜನಗಳು ತಮ್ಮ ಹೆಣ್ಣುಮಕ್ಕಳನ್ನು ಅತ್ತೆ ಮನೆಗೆ ಕಳುಹಿಸಬೇಕಾದರೆ ಬೆಳ್ಳಿ, ಬಂಗಾರದ ಜೊತೆಗೆ 21 ಜೀವಂತ ಹಾವುಗಳನ್ನು ಬುಟ್ಟಿಯಲ್ಲಿ ಇಟ್ಟು ಮಗಳನ್ನು ಕಳುಹಿಸಿ ಕೊಡುತ್ತಾರೆ. ಈ ರೀತಿ ಮಾಡುವುದು ಇವರ ಸಂಪ್ರದಾಯವಾಗಿದೆ.. ನಿಖರವಾಗಿ ಒಂದಲ್ಲ ಎರಡಲ್ಲ ಸುಮಾರು 21 ಹಾವುಗಳನ್ನು ಬುಟ್ಟಿಯಲ್ಲಿ ಇಟ್ಟು ಅಪ್ಪ ಅಮ್ಮ ತನ್ನ ಮಗಳಿಗೆ ಕೊಟ್ಟು ಅತ್ತೆ ಮನೆಗೆ ಮದುವೆಯ ನಂತರ ಕೊಟ್ಟು ಕಳುಹಿಸುತ್ತಾರೆ. ಈ ಕಮ್ಯೂನಿಟಿಗೆ ಸೇರಿದ ಜನಗಳು ಈ ಸಂಪ್ರದಾಯವನ್ನು ಪಾಲನೆ ಮಾಡಲೇ ಬೇಕು..

ಒಂದು ವೇಳೆ ಈ ಹಾವುಗಳನ್ನು ಕೊಡುವ ಸಂಪ್ರದಾಯವನ್ನು ಪಾಲಿಸದೆ ಮದುವೆ ಮಾಡಿದರೆ, ಅಂತಹ ಮದುವೆಗಳು ಶಾಶ್ವತವಾಗಿ ಉಳಿಯುವುದಿಲ್ಲ.. ಗಂಡ ಹೆಂಡತಿ ಆದಷ್ಟು ಬೇಗ ಒಬ್ಬರಿಗೊಬ್ಬರು ದೂರ ಆಗುತ್ತಾರೆ ಎಂಬ ನಂಬಿಕೆ ಈ ಬುಡಕಟ್ಟು ಗೌರಯ್ಯ ಜನಗಳಲ್ಲಿ ಇದೆ. ಒಂದು ಮದುವೆ ಕೊನೆಯವರೆಗೂ ಗಟ್ಟಿಯಾಗಿ ಇರಬೇಕಾದರೆ ಖಚಿತವಾಗಿ ಮದುವೆ ಹೆಣ್ಣಿನ ಜೊತೆ 21 ಹಾವುಗಳನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸುತ್ತಾರೆ..

ಈ ರೀತಿ ಮಾಡುವುದರಿಂದ ಒಬ್ಬ ಹೆಣ್ಣು ಮಗಳು ಅತ್ತೆ ಮನೆಗೆ ಹೋದರೆ, ಅತ್ತೆ ಮನೆಯಲ್ಲಿ ಸಾಯುವವರೆಗೂ ಕುಷಿಯಾಗಿ ಜೀವನ ಮಾಡುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆ.. ನಿಜವಾಗಿಯೂ ಹೇಳಬೇಕೆಂದರೆ ಈ ರೀತಿಯ ವಿಚಿತ್ರ ಸಂಪ್ರದಾಯ ಇಡೀ ಜಗತ್ತಿನಲ್ಲಿಯೇ ಇಲ್ಲಾ ಅನಿಸುತ್ತದೆ.. ಆದರೆ ಛತ್ತೀಸ್ಗಢಲ್ಲಿ ಅಲ್ಲಲ್ಲಿ ಬುಡಕಟ್ಟು ಜನಗಳು ವಾಸ ಮಾಡುವ ಜಾಗದಲ್ಲಿ ಈಗಲೂ ಕೂಡ ಈ ಸಂಪ್ರದಾಯವನ್ನು ಮುಂದುವರೆಸುತ್ತಿದ್ದಾರೆ.. ಸ್ನೇಹಿತರೆ ಈ ಸಂಪ್ರದಾಯದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿ.