Advertisements

ಹೊಟೆಲ್ ನಲ್ಲಿ ಬಿಲ್ ಕಟ್ಟಲು ಹಣವಿಲ್ಲದಾಗ ಪಾರ್ವತಮ್ಮ ಅವರು ಮಾಡಿದ ಕೆಲಸ ನೋಡಿ ಬೆಚ್ಚಿಬಿದ್ದ ಹೋಟೆಲ್ ನವರು..

Cinema

ರಾಜಕುಮಾರ್ ಅವರ ಕುಟುಂಬವೆಂದರೆ ಅದೊಂದು ಗೌರವಯುತವಾದ ಕುಟುಂಬ. ಸ್ಯಾಂಡಲ್ವುಡ್ನ ತವರು. ಕುಟುಂಬದ ಯಾವ ಒಬ್ಬ ಸದಸ್ಸ್ಯಾರಿಗೂ ಅಹಂಕಾರ ಎನ್ನುವುದಿಲ್ಲ. ಇನ್ನು ಹಣದ ವಿಚಾರ ಬಂದ್ರೆ, ಜೇಬಲ್ಲಿ ಎಷ್ಟಇರುತ್ತೋ ಅಷ್ಟು ಹಣ ದಾನಮಾಡುವ ಹೃದಯ ಶ್ರೀಮಂತಿಕೆಯ ಗುಣದವರು ರಾಜಕುಮಾರ್ ಅವರು ಹಾಗೂ ಅವರ ಕುಟುಂಬ. ಇನ್ನು ಇವರ ಧರ್ಮ ಪತ್ನಿಯಾದ ಪಾರ್ವತಮ್ಮ ಅವರು ಕೂಡ ಪತಿಯ ದಾರಿಯನ್ನು ಅನುಸರಿಸಿದವರು. ಹೀಗಿರುವ ಕುಟುಂಬ ಅದೊಂದು ದಿನ ಸಂಕಷ್ಟ ಎದುರಿಸಬೇಕಾಗಿತ್ತು. ಆದ್ದರಿಂದ ಪಾರಾಗಲು ಪಾರ್ವತಮ್ಮ ಅವರು ಸ್ವತಹ ತಾವೇ ಸೆರೆಯಾಗಿ ಎಲ್ಲರನ್ನು ಮನೆಗೆ ಕಳುಹಿಸಿದ್ದರು.

[widget id=”custom_html-3″]

ಏನದು ಸಂಕಷ್ಟ? ಹೇಗೆ ಪಾರಾದರೂ? ಯಾರು ಸಹಾಯ ಮಾಡಿದರು? ಪಾರ್ವತಮ್ಮ ಅವ್ರು ಸದಾ ಕ್ರಿಯಾಶೀಲರಾಗಿ ಇರುವಂಥವರು. ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರುವವು. ಅಪ್ಪು ಅವರು ಯಾವಾಗಲೂ ಹೇಳುತ್ತಿದ್ದ ಒಂದು ಮಾತು ಅಂದ್ರೆ “ಅಮ್ಮನಂತೆ ನಾನು ಆಗುವ ಆಸೆ ಇದೆ ” ಎಂದು. ಅವರು ಪ್ರತಿ ಹೆಣ್ಣು ಮಕ್ಕಳಿಗೆ ಸ್ಫೂರ್ತಿ. ಇವರಿಂದಾಗಿಯೇ ಸ್ಯಾಂಡಲ್ವುಡ್ಗೆ ಅದೆಷ್ಟೋ ಹೆಣ್ಣುಮಕ್ಕಳು ಧೈರ್ಯವಾಗಿ ತೆರೆಮೇಲೆ ನಟಿಸಲು ಬಂದಿದ್ದಾರೆ. ಇವರದು ಅತೀ ಉದಾರವಾದ ಮನಸ್ಸು.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]


ಸದಾ ರಾಜಕುಮಾರ ಅವರ ಹಿತ ಬಯಸುವ ಪಾರ್ವತಮ್ಮ ಅವರು ಒಂದು ಸಿನಿಮಾದ ಶೂಟಿಂಗ್ ಗೆ ಸಿನಿಮಾ ತಂಡ ಹಾಗೂ ನಟ ರಾಜ್ ಕುಮಾರ್ ಅವರೊಂದಿಗೆ ಮಾಲ್ಡಿವ್ಸ್ ಗೆ ಹೋಗುತ್ತಾರೆ. ಸಿನಿಮಾ ಶೂಟಿಂಗ್ ಮುಗಿಯುವವರೆಗೂ ಅಲ್ಲೇ ಮಾಲ್ದಿವ್ಸ್ ನ ಒಂದು ಹೋಟೆಲ್ ನಲ್ಲಿ ಉಳಿದುಕೊಂಡಿರುತ್ತಾರೆ. ಶೂಟಿಂಗ್ ಮುಗಿದ ಕೊನೆದಿನ ಅವರ ಬಳಿ ಇದ್ದ ಅಷ್ಟು ಹಣ ಖಾಲಿಯಾಗಿರುತ್ತದೆ. ಹೋಟೆಲ್ ರೂಮಿನ ಬಿಲ್ ಕಟ್ಟಲು ಸಹ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತಂತ್ತೆ. ಆಗ ಮಾಲ್ಡಿವ್ಸ್ ನ ಹೋಟೆಲ್ ನವರು ಇವರನ್ನು ಭಾರತಕ್ಕೆ ಹೋಗಲು ಬಿಡದೆ ರೂಮ್ನಲ್ಲೇ ಎಲ್ಲರನ್ನು ಲಾಕ್ ಮಾಡುತ್ತಾರಂತೆ. ಎಲ್ಲರ ಫ್ಲೈಟ್ ಟಿಕೆಟ್ ಬುಕ್ ಆಗಿರುವುದರಿಂದ ಅಂದು ಅನಿವಾರ್ಯವಾಗಿ ಎಲ್ಲರೂ ಹೊರಡಲೇ ಬೇಕಾಗಿತ್ತು. ಆಗ ರಾಜಕುಮಾರ್ ಅವರು ನಾವು ಭಾರತಕ್ಕೆ ಹಿಂತಿರುಗಿದ ತಕ್ಷಣ ನಿಮ್ಮ ಹಣ ಕಳುಹಿಸುತ್ತೇವೆ. ಎಂದು ಹೋಟೆಲ್ ಮ್ಯಾನೇಜರ್ಗೆ ಹೇಳುತ್ತಾರಂತೆ. ಇದಕ್ಕೆ ಒಪ್ಪದ ಹೋಟೆಲ್ ಮ್ಯಾನೇಜರ್ ರಾಜಕುಮಾರ್ ಅವರನ್ನು ಅಲ್ಲಿ ಇಟ್ಟುಕೊಂಡು ಉಳಿದ ಎಲ್ಲಾ ಕಲಾವಿದರನ್ನು ಹಾಗೂ ಪಾರ್ವತಮ್ಮ ಅವರನ್ನು ಹೋಗಲು ಅನುಮತಿ ನೀಡಿದರಂತೆ.

[widget id=”custom_html-3″]

ಅವರಿಗೆ ರಾಜಕುಮಾರ್ ಒಬ್ಬ ಮಹಾನ್ ಕಲಾವಿದ ಎಂದು ತಿಳಿದಿತ್ತು. ಇವರನ್ನು ಹಿಡಿದುಕೊಂಡರೆ ತಮ್ಮ ಹಣಕ್ಕೆ ಮೋಸ ಆಗುವುದಿಲ್ಲ. ಅದು ವಾಪಸ್ ಬಂದೇ ಬರುತ್ತದೆ ಎಂದು ತಿಳಿತ್ತು. ಆದ್ದರಿಂದಲೇ ರಾಜಕುಮಾರ್ ಅವರನ್ನು ಬಿಡಲಿಲ್ಲ. ಈ ಸಂದರ್ಭದಲ್ಲಿ ಪಾರ್ವತಮ್ಮ ಅವರು ಧೈರ್ಯದ ಒಂದು ನಿರ್ಧಾರಕ್ಕೆ ಬಂದರು. ಅದೇನಂದ್ರೆ ನನ್ನನ್ನು ಬಿಟ್ಟು ನೀವೆಲ್ಲ ಭಾರತಕ್ಕೆ ತೆರಳಿ ಎಂದರಂತೆ ತಮ್ಮ ಮೈಮೇಲೆ ಇದ್ದ ಬಂಗಾರ ಎಲ್ಲವನ್ನು ಬಿಚ್ಚಿ ಕೊಟ್ಟು, ತಾವೊಬ್ಬರೇ ಮಾಲ್ದಿವ್ಸ್ ಹೋಟೆಲ್ ರೂಮ್ ನಲ್ಲಿ ಉಳಿದರಂತೆ. ಈ ಮೊದಲೇ ಎಲ್ಲರ ಟಿಕೆಟ್ ಬುಕ್ ಆಗಿದ್ದರಿಂದ ಅನಿವಾರ್ಯವಾಗಿ ಅವರೆಲ್ಲರೂ ಹೊರಡಬೇಕಾಯಿತು.
ಪಾರ್ವತಮ್ಮ ಅವರ ನಿರ್ಧಾರದಂತೆ ಅವರನ್ನು ಬಿಟ್ಟು ಉಳಿದ ಎಲ್ಲರೂ ಭಾರತಕ್ಕೆ ಬರುತ್ತಾರೆ. ಈ ವಿಷಯ ಹೇಗೋ ನಟ ಅಂಬರೀಶ್ ಅವರ ಕಿವಿಗೆ ಬೀಳುತ್ತದೆ. ಆಗ ಅವರು ಸಹಾಯಕ್ಕೆ ಬಂದರು. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಮಾಲ್ದಿವ್ಸ್ ಹೋಟೆಲ್ ಮ್ಯಾನೇಜರ್ ಗೆ ಫೋನ್ ಮಾಡಿ ಮಾತನಾಡಿದರಂತೆ.

[widget id=”custom_html-3″]

ನಂತರ ಪಾರ್ವತಮ್ಮ ಅವರೊಂದಿಗೆ ಮಾತನಾಡಿ “ಅಕ್ಕ ನೀವು ಧೈರ್ಯವಾಗಿರಿ. ನೀವು ಹೀಗೆ ಎಂದು ಒಂದು ಮಾತು ಹೇಳಬೇಕಲ್ಲವೇ? ನಾನು ಇನ್ನೊಂದೆರಡು ಗಂಟೆಯಲ್ಲಿ ನಿಮಗೆ ಸಹಾಯ ಮಾಡುತ್ತೇನೆ. ಹೀಗೆ ಪ್ರೀತಿಯಿಂದಲೇ ಅಕ್ಕಾ ಎಂದು ರೇಗಿದರಂತೆ. ಇದಾದ ಕೇವಲ ಎರಡು ಗಂಟೆಯಲ್ಲಿ ಮಾಲ್ದಿವ್ಸ್ ನ ಹೋಟೆಲ್ಗೆ ವ್ಯಕ್ತಿಯೊಬ್ಬ ಬಂದು ಹಣ ನೀಡುತ್ತಾನಂತೆ. ಪಾರ್ವತಮ್ಮ ಅವರನ್ನು ಜೋಪಾನವಾಗಿ, ಜಾಗರೂಕತೆಯಿಂದ ಎರಡನೇ ಪ್ಲೇಟ್ಗೆ ಹತ್ತಿಸಿ ಭಾರತಕ್ಕೆ ಕಳಿಸಿದರಂತೆ. ಅಂಬರೀಶ್ ಅವರ ಆದಿನದ ಸಹಾಯವನ್ನು ಇಂದು ರಾಜಕುಮಾರ್ ಕುಟುಂಬದ ಆಪ್ತರಾದ ನಿರ್ದೇಶಕರಾದ ಭಗವಾನ್ ಅವರು ನೆನಪಿಸಿಕೊಂಡಿದ್ದಾರೆ. ಅಂಬರೀಶ್ ಅವರು ನಿಜವಾಗಿಯೂ ಕರ್ಣ.

[widget id=”custom_html-3″]

ಎಲ್ಲಿಯೂ ಅವರು ಸಹಾಯ ಮಾಡಿರುವ ಕುರಿತು ಹೇಳಿಕೊಂಡಿಲ್ಲ. ಅವರ ಮಾತು ಒರಟಾದರೂ ಮನಸ್ಸು ಹೂವಿನಂತೆ ಮೃದು ಎಂದು ನಿರ್ದೇಶಕರಾದ ಭಗವಾನ್ ಅವರು ಇಂದು ಅಂಬರೀಷ್ ಕರುನಾಳು ಭಾವನೆಯನ್ನು ಮೆಲುಕು ಹಾಕಿದರು. ಗುರುತು ಪರಿಚಯವೇ ಇಲ್ಲದ ವಿದೇಶದಲ್ಲಿ ತಾವೊಬ್ಬರೇ ಉಳಿದು ಎಲ್ಲರನ್ನು ಭಾರತಕ್ಕೆ ಕಳುಹಿಸಿದ ಪಾರ್ವತಮ್ಮ ಅವರ ಧೈರ್ಯ ಮೆಚ್ಚಲೇಬೇಕು. ಇನ್ನು ತಮ್ಮ ಸಹ ನಟನ ಪತ್ನಿ ಸಂಕಷ್ಟದಲ್ಲಿದ್ದಾರೆ ಎಂದು ತಿಳಿದು ಸಹೋದರಿ ಎಂದು ಮಾತನಾಡಿ, ಧೈರ್ಯ ಹೇಳಿದ ಅಂಬರೀಶ್ ಅವರು ಕೂಡ ಗ್ರೇಟ್. ಯಾಕಂದ್ರೆ ಸಹನಟ ಕಟ್ಟಬೇಕಾಗಿದ್ದ ಅದೆಷ್ಟು ಬಹು ದೊಡ್ಡ ಮೊತ್ತದ ಹಣವನ್ನು ತಾವು ಕಟ್ಟಿ ಅವರನ್ನು ಸ್ವದೇಶಕ್ಕೆ ಕರೆತಂದದ್ದು ನಿಜವಾದ ಬಾಂದವ್ಯೆಕೆ ಸಾಕ್ಷಿ. ಆಗ ಅಷ್ಟರಮಟ್ಟಿಗೆ ಕಲಾವಿದರಲ್ಲಿ ಅನನ್ಯತೆ ಹೊಂದಾಣಿಕೆ ಪ್ರೀತಿ ಇತ್ತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಈಗಿನ ನಟ ನಟಿಯರಂತೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದ ಲಿಲ್ಲ. ಎಲ್ಲರೂ ಒಂದೇ ಎನ್ನುವ ಭಾವನೆ ಇತ್ತು. ಈ ಘಟನೆಯನ್ನು ಆದರೂ ಈಗಿನ ಕಲಾವಿದರು ಅನುಸರಿಸುವಂತೆ ಆಗಲಿ.

[widget id=”custom_html-3″]