Advertisements

ಹೆಂಡತಿಯಿರಿಂದ ಪೀ’ಡಿತರಾದ ಗಂಡಂದಿರಿಗೆ ಶುರುವಾಗಿದೆ ಆಶ್ರಮ ! ಎಲ್ಲಿದೆ ? ಹೇಗೆ ನಡೆಯುತ್ತೆ ಗೊತ್ತಾ ?

News

ನಮಸ್ಕಾರ ಸ್ನೇಹಿತರೇ, ನಮ್ಮ ದೇಶದಲ್ಲಿ ಅನಾಥಾಶ್ರಮ, ವೃದ್ದಾಶ್ರಮ ಸೇರಿದಂತೆ ಹಲವಾರು ರೀತಿಯ ಆಶ್ರಮಗಳಿವೆ. ಆದರೆ ಇಲ್ಲೊಂದು ವಿಭಿನ್ನ ವಿಚಿತ್ರ ಆಶ್ರಮವಿದೆ. ಇದನ್ನ ನೀವು ಮೊದಲ ಬಾರಿಗೆ ಕೇಳುತ್ತಿರಬಹುದು. ಈ ಆಶ್ರಮದ ಹೆಸರು ಕೇಳಿದ್ರೆ ನಿಮಗೆ ಒಂದು ಕ್ಷಣ ನಗೂ ಕೂಡ ಬರಬಹುದು. ಇನ್ನು ಈ ಆಶ್ರಮದಲ್ಲಿ ವಯಸ್ಸಾದವರಾಗಲಿ ಅಥ್ವಾ ಅನಾಥ ಮಕ್ಕಳಾಗಲಿ ಇಲ್ಲ. ಈ ಆಶ್ರಮದ ಹೆಸರೇ ಪತ್ನಿ ಪೀಡಿತ ಪುರುಷರ ಆಶ್ರಮ ಎಂದು. ಅಂದರೆ ಹೆಂಡತಿಯಿರಿಂದ ಶೋ’ಷಣೆಗೆ ಒಳಗಾಗಿ ಪೀ’ಡಿತರಾದ ಗಂಡಂದಿರು ಈ ಆಶ್ರಮದಲ್ಲಿದ್ದಾರೆ.

Advertisements

ಹೌದು, ನೀವು ಕೇಳಿದ್ದು ನಿಜ. ಪತ್ನಿಯಿರಿಂದ ಕಿ’ರುಕುಳಕ್ಕೆ ಒಳಗಾದ ಪತಿಯಿಂದಿರು ಈ ಆಶ್ರಮದಲ್ಲಿ ಜೀವನ ನಡೆಸುತ್ತಿದ್ದಾರೆ. ಇನ್ನು ಈ ಆಶ್ರಮ ಇರುವುದು ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ನಲ್ಲಿ. ತಮ್ಮ ಪತ್ನಿಯಿಂದ ಹಿಂ’ಸೆಗೆ ಒಳಗಾದವರು ಈ ಆಶ್ರಮದಲ್ಲಿ ಆಶ್ರಯ ಪಡೆಯಲು ಕೆಲವೊಂದು ಪರೀಕ್ಷೆಗಳನ್ನ ಎದುರಿಸಬೇಕಾಗುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಆಶ್ರಮದಲ್ಲಿ ಜಾಗ ಸಿಗುತ್ತದೆ.

ಇನ್ನು ಈ ಆಶ್ರಮದ ಸೃಷ್ಟಿಕರ್ತ ಭರತ್ ಎಂದು. ಇವರು ಕೂಡ ತಮ್ಮ ಪತ್ನಿಯಿಂದ ಕಿ’ರುಕುಳಕ್ಕೆ ಒಳಗಾಗಿದ್ದು ಇವರ ಮೇಲೆ ಅವರ ಪತ್ನಿ ದಾಖಲಿಸಿರುವ ಮೂರು ದೂರುಗಳು ಇವೆಯಂತೆ. ಇದಾದ ಬಳಿಕ ಭರತ್ ತಮ್ಮಂತಯೇ ಹೆಂಡತಿಯಿರಿಂದ ಶೊ’ಷಣೆಗೆ ಒಳಗಾದ ಕೆಲವರ ಜೊತೆ ಮಾತನಾಡಿ ಈ ಆಶ್ರಮವನ್ನ ತೆರೆದಿದ್ದಾರೆ. ಇನ್ನು ೩೫ ಕ್ಕಿಂತ ಹೆಚ್ಚು ಕೇ’ಸ್ ಗಳಿರುವವರು ಹಾಗೂ ತಮ್ಮ ಹೆಂಡತಿಯ ಕಾರಣದಿಂದಾಗಿ ಜೈಲಿಗೆ ಹೋಗಿ ಬಂದವರಿಗೆ ಈ ಆಶ್ರಮದಲ್ಲಿ ಪ್ರವೇಶ ಸಿಗುತ್ತದೆ.

ಒಂದು ವರ್ಷಕ್ಕಿಂತ ಹೆಚ್ಚು ದಿನಗಳಿಂದ ಈ ಆಶ್ರಮದಲ್ಲಿ ಆಶ್ರಯ ಪಡೆದವರಿದ್ದಾರೆ. ಈ ಆಶ್ರಮದಲ್ಲಿರುವವರು ತಮ್ಮ ಕೈಲಾದ ಕೆಲಸ ಮಾಡಿ ಆಶ್ರಮಕ್ಕೆ ಹಣಕಾಸನ್ನ ನೀಡುತ್ತಾರೆ ಎಂದು ಹೇಳಲಾಗಿದೆ. ಸ್ನೇಹಿತರೆ, ಈ ಲೇಖನಿಯನ್ನ ಓದಿದ ಮೇಲೆ ನಿಮಗೆ ಎಂತ ಕಾಲ ಬಂತಪ್ಪಾ..ಅಂತ ಅನ್ನಿಸಿದೆ ಇರೋಲ್ಲ..ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..