Advertisements

ಅರಳಿ ಮರ ಯಾಕೆ ಬಾಡುವುದಿಲ್ಲಾ ಗೊತ್ತಾ? ಸೀತಾ ದೇವಿ ನೀಡಿದ ಆ ನಾಲ್ಕು ಶಾಪಗಳೇನು ನೋಡಿ..

Adyathma

ಈ ಪ್ರಪಂಚದಲ್ಲಿರುವ ಪ್ರತಿಯೊಂದು ಗಿಡ ಮರವು ಸಹ ಒಂದು ಕಾಲದಲ್ಲಿ ಬಾಡಿದರೆ ಮತ್ತೊಂದು ಕಾಲದಲ್ಲಿ ಚಿಗುರುತ್ತದೆ. ಆದರೆ ಕೇವಲ ಅರಳಿ ಮರ ಮಾತ್ರ ಯಾವಾಗಲೂ ಬಾಡುವುದಿಲ್ಲ. ಎಂದಿನಂತೆ ಹಚ್ಚಹಸಿರಾಗಿ ಕಂಗೊಳಿಸುತ್ತದೆ. ಇದರ ಹಿಂದೆ ಒಂದು ಪುರಾಣ ಕಥೆ ಇದೆ, ಅದು ಏನೆಂದು ನೋಡಿ. ಈ ಅರಳಿಮರದ ಕಥೆ ಇಂದಿನದಲ್ಲ ತೇತ್ರಾಯುಗ ಕಾಲಕ್ಕೆ ಸೇರಿರುವಂತದ್ದು. ದಶರಥ ಮಹಾರಾಜರು ಕೊಟ್ಟಂತಹ ವರಗಳನ್ನು ತಪ್ಪಾಗಿ ಬಳಸಿದ ಕೈಕೆ ಮಾತೆ ಆಕೆಯ ಮಗನಾದ ಭರತನನ್ನು ಅಯೋಧ್ಯೆ ರಾಜ ನಾಗಿಸುವ ಸಲುವಾಗಿ ಶ್ರೀರಾಮ ರನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಎಂದು ಕಳಿಸುತ್ತಾರೆ. ಆಗ ಪತಿಯನ್ನು ಬಿಟ್ಟಿರಲಾಗದೆ ಸೀತಾದೇವಿ ಅಣ್ಣನನ್ನು ಬಿಟ್ಟಿರಲಾಗದೆ ಲಕ್ಷ್ಮಣ ಇಬ್ಬರೂ ಸಹ ಶ್ರೀರಾಮರನ್ನೆ ಹಿಂಬಾಲಿಸುತ್ತಾ ಅರಣ್ಯಕ್ಕೆ ಹೋಗುತ್ತಾರೆ. ಇತ್ತ ಮಗನನ್ನು ದೂರಾಗಿಸಿದ ಚಿಂತೆಯಿಂದ ಕೊರಗಿ ಕೊರಗಿ ದಶರಥ ಮಹಾರಾಜರು ಪ್ರಾ’ಣ ಬಿಡುತ್ತಾರೆ.

[widget id=”custom_html-3″]

Advertisements

ನಾಲ್ಕು ಮಕ್ಕಳಿದ್ದರು ಅವರು ಸಾ’ಯು’ವಾಗ ಮಾತ್ರ ಒಬ್ಬ ಮಗನು ಪಕ್ಕದಲ್ಲಿ ಇಲ್ಲ ದಂತಾಗುತ್ತದೆ. ಅದಕ್ಕೊಂದು ಕಾರಣವಿದೆ ಅದು ನೆಕ್ಸ್ಟ್ ಚಾಪ್ಟರ್ ಅಲ್ಲಿ ತಿಳಿಸುತ್ತೇವೆ. ಆ ರೀತಿ ವನವಾಸಕ್ಕೆ ಎಂದು ಹೊರಟ ಶ್ರೀರಾಮ ಸೀತಾ ಲಕ್ಷ್ಮಣನು ಎಲ್ಲಾ ಪುಣ್ಯಕ್ಷೇತ್ರಗಳಿಗೂ ಭೇಟಿ ನೀಡುತ್ತಾ ಗಯಾ ಕ್ಷೇತ್ರಕ್ಕೆ ತಲುಪುತ್ತಾರೆ. ದಶರಥ ಮಹಾರಾಜರಿಗೆ ಪಿಂಡ ಪ್ರದಾನ ಮಾಡಲು ಸೀತಾ ದೇವಿಯನ್ನು ಪಾಲ್ಗುಣ ನದಿಯಲ್ಲಿ ಕೂರಿಸಿ ಶ್ರೀರಾಮ ಲಕ್ಷ್ಮಣನು ಹಣ್ಣುಹಂಪಲುಗಳನ್ನು ಶೇಖರಿಸಲು ಕಾಡಿನೊಳಗೆ ಹೋಗುತ್ತಾರೆ. ಆದರೆ ಇದಾದ ಸ್ವಲ್ಪ ಹೊತ್ತಿನಲ್ಲಿಯೆ ಪಾಲ್ಗುಣಿ ನದಿಯೊಳಗಿನಿಂದ ಒಂದು ಕೈ ಹೊರಬರುತ್ತದೆ. ಸೀತಾದೇವಿ ಹೆದರಿಕೆಯಿಂದ ಬಂಡೆಯ ಹಿಂದೆ ನಿಂತು ಆ ಕೈಯನ್ನೇ ನೋಡುತ್ತಿರುತ್ತಾಳೆ. ಆಗ ಹಠಾತ್ತನೆ
ಸೀತಾದೇವಿ ನನಗೆ ಹಸಿವಾಗುತ್ತಿದೆ ಎಂಬ ಧ್ವನಿ ಕೇಳಿಸುತ್ತದೆ. ಆ ದ್ವನಿ ಪದೆ ಪದೆ ಮರುಕಳಿಸುತ್ತದೆ. ಆದರೆ ಆ ಧ್ವನಿ ದಶರಥ ಮಹಾರಾಜರ ದಾಗಿತ್ತು.

[widget id=”custom_html-3″]

ಸೀತೆಗೆ ಏನು ಮಾಡುವುದೆಂದು ದಿಕ್ಕೆ ತೋಚುವುದಿಲ್ಲ. ಕೇಳಿದವರಿಗೆ ಇಲ್ಲವೆನ್ನದೆ ದಾನ ಮಾಡುತ್ತಿದ್ದವರು
ಸೀತಾ ಮಾತೆ ಆಹಾರ ಕೇಳಿದಾಗ ಇಲ್ಲವೆನ್ನುವುದು ಮಹಾಪಾಪ ಅಂತಹದರಲ್ಲಿ ಕೇಳುತ್ತಿರುವವರು ಯಾರು ಅಯೋಧ್ಯೆಯ ಮಹಾರಾಜ ದಶರಥ ಶ್ರೀರಾಮರ ತಂದೆ ಸೀತಾದೇವಿಯ ಬಳಿ ಕೊಡಲು ಏನೂ ಇಲ್ಲ ಹಾಗಾಗಿ ಬೇರೆ ವಿಧಿಯಿಲ್ಲದೆ ಅಲ್ಲೇ ನದಿ ದಡದಲ್ಲಿ ಇದ್ದ ಮಣ್ಣನ್ನು ಮೂರು ಉಂಡೆಗಳಂತೆ ಕಟ್ಟಿ ಅದರಲ್ಲಿ ಅನ್ನವನ್ನು ಆಹ್ವಾವನೆ ಮಾಡಿ ನದಿ ಒಳಗಿನಿಂದ ಹೊರಬಂದ ಕೈಯೊಳಗೆ ಇಡುತ್ತಾರೆ ಸೀತಾದೇವಿ.. ಸೀತೆಯ ಆಹಾರದಿಂದ ಸಂತುಷ್ಟರಾದ ದಶರಥ ಮಹಾರಾಜನು ಸಂತೋಷದಿಂದ ಹರಿಸಿ ಮಾಯ ವಾಗುತ್ತಾರೆ.ಕೆಲವು ಹೊತ್ತಿನ ಬಳಿಕ ರಾಮ ಲಕ್ಷ್ಮಣನು ಆಹಾರದೊಂದಿಗೆ ಹಿಂದುರುಗಿ ಬರುತ್ತಾರೆ. ಆಗ ನಡೆದ ಎಲ್ಲ ವಿಷಯವನ್ನು ಅವರೆ ಬಳಿ ಹೇಳುತ್ತಾರೆ ಸೀತಾದೇವಿ ಆದರೆ ರಾಮಲಕ್ಷ್ಮಣರಿಗೆ ಸೀತಾದೇವಿಯ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ.

[widget id=”custom_html-3″]

ಅವರ ಮುಖದಲ್ಲಿದ್ದ ಅನುಮಾನವನ್ನು ಗ್ರಹಿಸಿದ ಸೀತಾದೇವಿ ನೀವು ನಮ್ಮನ್ನು ನಂಬುವುದಿಲ್ಲವೆಂದೆ ನಾನು ನನ್ನ ಕಾರ್ಯಕ್ಕೆ ಐದು ಸಾಕ್ಷಿಗಳನ್ನು ನೇಮಿಸಿದ್ದೇನೆ ಎಂದು ಪಾಲ್ಗುಣಿ ನದಿ, ತುಳಸಿ ಗಿಡ, ಹಸು, ಬ್ರಾಹ್ಮಣ, ಹಾಗೂ ಅರಳಿ ಮರವನ್ನು ಕರೆದು
ಸಾಕ್ಷಿ ಹೇಳುವಂತೆ ಹೇಳುತ್ತಾರೆ. ಆದರೆ ಸೀತೆಗೆ ಸಹಾಯ ಮಾಡಲು ಅರಳಿ ಮರವನ್ನು ಹೊರತುಪಡಿಸಿ ಮತ್ಯಾರೂ ಬರುವುದಿಲ್ಲ. ಅರಳಿಮರ ಎಲ್ಲಾ ನಡೆದ ವಿಷಯವನ್ನು ರಾಮಲಕ್ಷ್ಮಣರ ಬಳಿ ಹೇಳುತ್ತದೆ. ಅದರಿಂದ ಸಂತೋಷಿಸಿದ ಶ್ರೀರಾಮ
ಲಕ್ಷ್ಮಣರು ಸೀತಾದೇವಿಯ ಕರ್ತವ್ಯ ಪ್ರಜ್ಞೆಯನ್ನು ಅಭಿನಂದಿಸುತ್ತಾರೆ. ಆದರೆ ಆಕೆಗೆ ಸಾಕ್ಷಿ ಹೇಳಲು ಬಾರದ ಪಾಲ್ಗುಣಿ ನದಿ, ಹಸು, ಬ್ರಾಹ್ಮಣ ಹಾಗೂ ತುಳಸಿ ಗಿಡದ ಮೇಲೆ ವಿಪರೀತವಾಗಿ ಕೋಪಗೊಂಡು ಅವುಗಳನ್ನು ಶ್ರಮಿಸುತ್ತಾರೆ ಸೀತಾದೇವಿ. ಮೊದಲಿಗೆ ಪಾಲ್ಗುಣಿ ನದಿಯನ್ನು ಮಳೆಗಾಲದಲ್ಲಿಯೂ ಸಹ ನೀನು ಬರಿದಾಗಿಯೇ ಇರುತ್ತೀಯ ಎಂದು ಶ್ರಮಿಸುತ್ತಾರೆ.

[widget id=”custom_html-3″]


ಎರಡನೆಯದಾಗಿ ಬ್ರಾಹ್ಮಣರನ್ನು ಹೇ ವಿಕ್ರೋತ್ತಮ ನೀನು ಸತ್ಯ ಹೇಳದೇ ನನಗೆ ಮೋಸ ಮಾಡಿರುವೆ ಹಾಗಾಗಿ ನೀನು ಈ ಕ್ಷೇತ್ರದಲ್ಲಿಯೆ ಇದ್ದು ಈ ಕ್ಷೇತ್ರಕ್ಕೆ ಬರುವ ಯಾತ್ರಿಕರನ್ನು ಪೀಡಿಸಿ ಅದರಿಂದ ಬಂದ ಲಾಭದಿಂದ ಜೀವನ ಸಾಗಿಸು ಎಂದು ಶ್ರಮಿಸುತ್ತಾರೆ. ಮೂರನೆಯದಾಗಿ ಗೋಮಾತೆಯನ್ನು ಗೋಮಾತೆ ನೀನು ಈ ಜಾಗವನ್ನು ಬೆಳಗ ಬೇಕಾದವಳು ಆದರೆ ನೀನು ನನ್ನ ಮಾತನ್ನು ಮೀರಿ ಲೋಭತನ ಮೆರೆದಿರುವೆ. ಹಾಗಾಗಿ ನೀನು ಗಯಾ ಕ್ಷೇತ್ರದಲ್ಲಿಯೇ ಇದ್ದು ಅವರಿವರು ಇಡುವ ಪಿಂಡವನ್ನು ತಿಂದು ಬದುಕು.. ಎಷ್ಟೇ ತಿಂದರು ನಿನ್ನ ಹೊಟ್ಟೆ ಮಾತ್ರ
ತುಂಬದಿರಲಿ ಎಂದು ಶ್ರಮಿಸುತ್ತಾರೆ.

[widget id=”custom_html-3″]

ನಾಲ್ಕನೆಯದಾಗಿ ತುಳಸಿಯನ್ನು ತುಳಸಿ ಮಾತೆ ನೀನು ಪವಿತ್ರವಾದವಳು ಆದರೆ ನೀನು ಸಹ ನನ್ನ ನಂಬಿಕೆಗೆ ದ್ರೋಹ ಬಗೆಯುವೆ ಎಂದು ನಾನು ಅಂದುಕೊಂಡಿರಲಿಲ್ಲ. ಹಾಗಾಗಿ ನೀನೆಷ್ಟೇ ಪವಿತ್ರವಾದರೂ ಎಲ್ಲೆಂದರಲ್ಲಿ ಬೆಳೆಯುವಂತಾಗಲಿ ಎಂದು ಶ್ರಮಿಸುತ್ತಾರೆ. ಸೀತಾದೇವಿಯ ಶಾಪದಂತೆ ಪಾಲ್ಗುಣಿ ನದಿ ಬತ್ತಿಹೋಗಿದೆ, ಪಾಲ್ಗುಣಿ ನದಿ ತೀರದಲ್ಲಿರುವ ಹಸುಗಳಿಗೆ ಇಂದಿಗೂ ಪಿಂಡವೆ ಆಹಾರ, ಅದರ ಬಳಿಕ ಸೀತಾದೇವಿಗೆ ಸಹಾಯ ಮಾಡಿ ಸಾಕ್ಷಿ ನುಡಿದ ಅರಳಿಮರದ ಕಾರ್ಯಕ್ಕೆ ಸಂತೋಷಿಸಿ ಇಂದಿನಿಂದ ನೀನೆಂದು ಬಾಡದಂತೆ ಹಚ್ಚಹಸುರಾಗಿ ಕಂಗೊಳಿಸುತ್ತಾ ದೈವ ವೃಕ್ಷವಾಗಿ ಪೂಜೆಗಳನ್ನು ಸ್ವೀಕರಿಸಿ ಎಂದು ಆಶೀರ್ವದಿಸುತ್ತಾರೆ ಸೀತಾದೇವಿ ಆದ್ದರಿಂದಲೇ ಅರಳಿಮರ ಎಂದಿಗೂ ಬಾಡುವುದಿಲ್ಲ..