Advertisements

ಪೆಟ್ರೋಲ್ ಹಾಕಿಸಲು ಬಂಕ್ ಗೆ ಹೋದ ಮಹಿಳೆ.. ನಂತರ ಅಲ್ಲಿ ಏನಾಯ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲರೂ ಆಪಿಸ್ ಗೆ ಹೋಗಿ ಬರಲು ಬೈಕ್ ಗಳನ್ನು ಬಳಸುತ್ತಾರೆ.. ಅದೇ ರೀತಿ ಬೈಕ್ ಚಲಿಸಬೇಕಾದರೆ ಪೆಟ್ರೋಲ್ ಇರಲೇ ಬೇಕು ಈಗಾಗಿ ಬೈಕ್ ನ ಹೊಟ್ಟೆ ತುಂಬಿಸಲು ಪೆಟ್ರೋಲ್ ಬಂಕ್ ಗೆ ಹೋಗ್ತಾರೆ.. ಇದೇ ರೀತಿ ತೆಲಂಗಾಣದ ಒಂದು ಸಿಟಿಯಲ್ಲಿ ಇರುವ ಪೆಟ್ರೋಲ್ ಬಂಕ್ ಒಂದರಲ್ಲಿ ರಿಯಾ ಎಂಬ ಮಹಿಳೆ ಪೆಟ್ರೋಲ್ ಹಾಕಿಸಲು ಹೋಗಿದ್ದಳು.. ರಿಯಾ ತನ್ನ ಬೈಕಿಗೆ 500 ರೂಪಾಯಿ ಗೆ ಪೆಟ್ರೋಲ್ ಆಕಿಸುತ್ತಾರೆ.. ಆದರೆ ಪೆಟ್ರೋಲ್ ಹಾಕುವ ಹುಡುಗ ಮೊದಲು ನೂರು ರೂಪಾಯಿಗೆ ಪೆಟ್ರೋಲ್ ಹಾಕಿದ್ದಾನೆ.. ಆಗ ರಿಯಾ ನಾನು ಹೇಳಿದ್ದು 500 ರೂಪಾಯಿಗೆ ನೀವು 100 ರೂಪಾಯಿ ಗೆ ಪೆಟ್ರೋಲ್ ಹಾಕಿದ್ದಿರಲ್ಲಾ ಎಂದು ಪ್ರಶ್ನೆ ಮಾಡುತ್ತಾರೆ..

Advertisements

ಆಗ ಆ ಹುಡುಗ ಕ್ಷಮಿಸಿ ಮೇಡಮ್ ಎಂದು ಮತ್ತೆ 400 ರೂಪಾಯಿಗೆ ಪೆಟ್ರೋಲ್ ತುಂಬಿಸುತ್ತಾನೆ.. ಪೆಟ್ರೋಲ್ ಹಾಕುವ ವ್ಯಕ್ತಿ ಸರಿಯಾಗಿ ಪೆಟ್ರೋಲ್ ಹಾಕಿದ್ದಾನೆ ಎಂಬುದು ನಿಮಗೆ ಅನಿಸಿರಬಹುದು, ಅನಿಸದೇ ಇರಬಹುದು.. ರಿಯಾ ಅವರು ಕೂಡ ಪೆಟ್ರೋಲ್ ಹಾಕಿದ್ದಾನೆ ಎಂದುಕೊಂಡು ತನ್ನ ಮನೆಗೆ ಹೋಗುತ್ತಾರೆ.. ಪ್ರತಿ ವಾರವೂ 500 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡರೆ ಐದು ದಿ‌ನ ಆಪಿಸ್ ಗೆ ಹೋಗಿ ಬರಬಹುದು ಎಂದು ರಿಯಾ ಲೆಕ್ಕವನ್ನು ಮಾಡಿಕೊಂಡು ಪ್ರತಿವಾರ ಪೆಟ್ರೋಲ್ ಹಾಕಿಸುತ್ತಿದ್ದರು.. ಆದರೆ ಈ ಬಾರಿ ಮಾತ್ರ ಮೂರು ದಿನಕ್ಕೆ ಪೆಟ್ರೋಲ್ ಖಾಲಿ ಆಗುತ್ತದೆ.. ಒಂದು ದಿನ ಆಪಿಸ್ ಗೆ ಹೋಗಿ ಮನೆಗೆ ಬರುವ ವೇಳೆ ದಾರಿಯಲ್ಲಿ ರಿಯಾ ಬೈಕ್ ನಿಂತು ಹೋಗುತ್ತದೆ..

ಇನ್ನೇನು ಮಾಡಲಾಗದೆ ಬೈಕ್ ಅನ್ನು ತಳ್ಳಿಕೊಂಡು ರಿಯಾ ಮನೆಗೆ ಹೋಗುತ್ತಾರೆ.. ಮನೆಗೆ ಬಂದ ಸಂದರ್ಭದಲ್ಲಿ ತನ್ನ ಪತಿಗೆ ಈ ವಿಷಯದ ಬಗ್ಗೆ ಚರ್ಚೆ ಮಾಡುತ್ತಾರೆ.. ಆಗ ಗಂಡ ಆಪಿಸ್ ಹತ್ತಿರ ಯಾರಾದರೂ ನಿನ್ನ ಬೈಕ್ ನಲ್ಲಿ ಪೆಟ್ರೋಲ್ ಕಳ್ಳತನ ಮಾಡಿರಬಹುದು ಈಗಾಗಿ ಬೈಕ್ ನಲ್ಲಿ ಬೇಗನೆ ಪೆಟ್ರೋಲ್ ಖಾಲಿಯಾಗಿದೆ ಎಂದು ಹೇಳುತ್ತಾರೆ.. ಇಲ್ಲವೆಂದರೆ ಪೆಟ್ರೋಲ್ ಹಾಕುವವನು ಮೋಸ ಮಾಡಿರಬಹುದು ಅಥವಾ ಬೈಕ್ ನಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದು ಗಂಡ ಹೆಂಡತಿ ಚರ್ಚೆ ಮಾಡುತ್ತಾರೆ.. ಹೀಗೆ ಮಾತನಾಡಿಕೊಂಡ ನಂತರ ಮತ್ತೊಮ್ಮೆ ಪೆಟ್ರೋಲ್ ಹಾಕಿಸಲು ಹೋದಾಗ ನಡೆದ ಒಂದು ಘಟನೆ ನೆನಪಾಗುತ್ತದೆ.. ಮೊದಲು ನೂರು ರುಪಾಯಿಗೆ ಪೆಟ್ರೋಲ್ ಹಾಕಿ ಮತ್ತೆ ನಾನೂರು ರೂಪಾಯಿಗೆ ಪೆಟ್ರೋಲ್ ಹಾಕಿರುವಂತೆ ಮೊಸ ಮಾಡಿದ್ದಾನೆ ಎಂದು ರಿಯಾ ಅವರಿಗೆ ಗೊತ್ತಾಗುತ್ತದೆ..

ಮರುದಿನ ಬೆಳಿಗ್ಗೆ ಬೈಕ್ ತೆಗೆದುಕೊಂಡು ಅದೇ ಬಂಕ್ ಗೆ ಬರುತ್ತಾರೆ.. ಪೆಟ್ರೋಲ್ ಹಾಕುವವನು ಮೊದಲಿನಂತೆಯೇ ಮೊದಲು ನೂರು ರೂಪಾಯಿಗೆ ಪೆಟ್ರೋಲ್ ಹಾಕಿ ನಂತರ ನಾನೂರು ರೂಪಾಯಿಗೆ ಪೆಟ್ರೋಲ್ ಹಾಕಲು ಬರುತ್ತಿರುವುದನ್ನು ಗಮನಿಸಿದ ರಿಯಾ ನೂರು ರುಪಾಯಿ ಹಾಕಿದ ನಂತರ ರಿಸೆಟ್ ಬಟನ್ ಪ್ರೆಸ್ ಮಾಡಿ ಈಗ ನಾನೂರು ರೂಪಾಯಿಗೆ ಪೆಟ್ರೋಲ್ ಹಾಕಿ ಎಂದು ಹೇಳಿದ್ದಾರೆ.. ಆಗ ಪೆಟ್ರೋಲ್ ಹಾಕುವ ಯುವಕ ನಾವು ಮಾಡುತ್ತಿರುವ ಮೋಸ ಈಕೆಗೆ ಗೊತ್ತಾಗಿದೆ ಎಂದು ತಿಳಿದು ಅಲ್ಲಿದ್ದ ಬೇರೆ ಪೆಟ್ರೋಲ್ ಹಾಕುವವರಿಗೆ ಸನ್ನೆಯ ಮೂಲಕ ತಿಳಿಸಿದ್ದಾನೆ..

ನಂತರ ರಿಯಾ ಬೈಕ್ ಗೆ ಸರಿಯಾಗಿ ಐನೂರು ರೂಪಾಯಿಗೆ ಪೆಟ್ರೋಲ್ ಹಾಕುತ್ತಾರೆ.. ಇನ್ನು ಬಂಕ್ ನವರು ಮಾಡುತ್ತಿರುವ ಮೋಸದ ವಿಷಯವನ್ನು ರಿಯಾ ತಮ್ಮ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಎಲ್ಲರೂ ಪೆಟ್ರೋಲ್ ಹಾಕಿಸುವಾಗ ಜಾಗೃತರಾಗಿರಿ ಎಂದು ಹೇಳಿದ್ದಾರೆ.. ಸ್ನೇಹಿತರೆ ನೀವು ಕೂಡ ಯಾವಾಗಲಾದರೂ ಪೆಟ್ರೋಲ್ ಹಾಕಿಸಲು ಹೋದಾಗ ಜಾಗೃತರಾಗಿರಿ.. ಈ ನೈಜ ಘ’ಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..