Advertisements

ನಿಮ್ಮ PF ಖಾತೆಯಲ್ಲಿರುವ ಹಣವನ್ನ ಅಡ್ವಾನ್ಸ್ ಆಗಿ ಆನ್ಲೈನ್ ನಲ್ಲಿ ಪಡೆಯೋದು ಹೇಗೆ ? ಎಷ್ಟು ಹಣ ಪಡೆಯಬಹುದು ಗೊತ್ತಾ ?

Kannada Mahiti

ಕೊರೋನಾ ಹಾಗೂ ಲಾಕ್ ಡೌನ್ ನಿಂದಾಗಿ ಕಾರ್ಮಿಕರು ಮತ್ತು ಉದ್ಯೋಗಿಗಳು ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಹಾಗೂ ಉದ್ಯೋಗಿಗಳು ಪಿಎಫ್ ಖಾತೆಯನ್ನ ಹೊಂದಿರುತ್ತಾರೆ. ಯಾರೆಲ್ಲಾ ಪಿಎಫ್ ಖಾತೆಯನ್ನ ಹೊಂದಿದ್ದಾರೋ ಅವರಿಗೆಲ್ಲ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದ್ದಿಯೊಂದು ಬಂದಿದೆ. ಅದೇನಪ್ಪಾ ಅಂದರೆ, ತಮ್ಮ ಖಾತೆಯಲ್ಲಿರುವ ಉಳಿತಾಯದಲ್ಲಿ ಒಂದಷ್ಟು ಹಣವನ್ನು ಅಂದರೆ ಶೇ 75 ಭಾಗದಷ್ಟು ಹಣವನ್ನ ಪಿಎಫ್ ಖಾತೆದಾರರು ಬಯಸಿದ್ದಲ್ಲಿ ಹಣವನ್ನ ಹಿಂಪಡೆಯಬಹುದಾಗಿದೆ ಎಂದು ಸರ್ಕಾರ ಹೇಳಿದೆ.

Advertisements

ಹಾಗಾದ್ರೆ ಉಳಿತಾಯದಲ್ಲಿನ ಒಟ್ಟು ಹಣದಲ್ಲಿ ಎಷ್ಟು ಹಣವನ್ನ ತೆಗೆದುಕೊಳ್ಳಬಹುದು ಎಂಬುದನ್ನ ನೋಡೋಣ ಬನ್ನಿ..ಉದಾಹರಣೆಗೆ..ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿ 1 ಲಕ್ಷ ಹಣವಿದ್ದು, ನಿಮ್ಮ ತಿಂಗಳ ಸಂಬಳ 30 ಸಾವಿರ ಎಂದಿಟ್ಟುಕೊಂಡರೆ, ಅದರಲ್ಲಿ ಶೇ 75 ಭಾಗ ಎಂದರೆ 75 ಸಾವಿರ ಹಣವನ್ನ ನೀವು ಹಿಂಪಡೆಯಬಹುದು. ಹಾಗೆಯೆ ನೀವು ಹೆಚ್ಚಿನ ಹಣದ ಅವಶ್ಯಕತೆ ಇದ್ದಲ್ಲಿ ಮೂರು ತಿಂಗಳ ವೇತನದಲ್ಲಿ ಶೇ 75 ಭಾಗದಷ್ಟು ಹಣವನ್ನ ಹಿಂಪಡೆಯಬಹುದಾಗಿದೆ.

ಇನ್ನು ನಿಮ್ಮ PF ಹಿಂಪಡೆಯಲು ಏನೆಲ್ಲಾ ಇರಬೇಕು ಎಂದು ನೋಡೋಣ ಬನ್ನಿ..

*ಯುನಿವರ್ಸಲ್ ಅಕೌಂಟ್ ನಂಬರ್ (UAN) ಚಾಲನೆಯಲ್ಲಿರಬೇಕು. ಜೊತೆಗೆ ಆಧಾರ್ ನಂಬರ್ ಜೊತೆ ಲಿಂಕ್ ಆಗಿರಬೇಕು.

*ನಿಮ್ಮ ಬ್ಯಾಂಕ್ ಖಾತೆಯ ಅಕೌಂಟ್ ನಂಬರ್ ಜೊತೆಗೆ IFSC ಕೋಡನ್ನು ಸಹ UAN ಜೊತೆ ಲಿಂಕ್ ಮಾಡಿರಬೇಕು.

ಇನ್ನು ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿನ ಹಣವನ್ನ ಹಿಂಪಡೆಯಲು http://unifiedportal-mem.epfindia.gov.in ವೆಬ್ ಸೈಟ್ ಗೆ ಲಾಗಿನ್ ಆಗಬೇಕು. (ನೆನಪಿರಲಿ : ಒಮ್ಮೊಮ್ಮೆ ಸರ್ವರ್ ಪ್ರಾಬ್ಲಮ್ ಆದಾಗ ವೆಬ್ಸೈಟ್ ಓಪನ್ ಆಗದೆ ಇರಬಹುದು). ಅಲ್ಲಿ ನಿಮಗೆ ಪಿಎಫ್ ನ ಪೇಜ್ ನಲ್ಲಿ UAN ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ. ಬಳಿಕ ONLINE SERVICE ಮತ್ತು CLAIM ಎಂಬ ಎರಡು ಆಪ್ಷನ್ ಗಳಿದ್ದು, ಅದರ ಮೇಲೆ ಕ್ಲಿಕ್ ಮಾಡಿ. ನಿಮ್ಮ ಬ್ಯಾಂಕ್ ನ ಅಕೌಂಟ್ ನಂಬರ್ ನ್ನ ಎಂಟರ್ ಮಾಡಿ, ವೆರಿಫೈ ಮಾಡಿಕೊಳ್ಳಿ. ಬಳಿಕ PROCEED FOR ONLINE CLAIM ಕೊಡಿ.

ಬಳಿಕ ನಿಮಗೆ ಅಲ್ಲಿ ಕಾಣಿಸುವ PF ADVANCE FORM 31ನ್ನ ಆಯ್ಕೆ ಮಾಡಿ. ಅದರಲ್ಲಿ ಮತ್ತೊಂದು ಆಪ್ಷನ್ ಔಟ್‌ಬ್ರೇಕ್ ಫಾರ್ ಪಾಂಡೆಮಿಕ್ (COVID-19) ನನ್ನ ಸೆಲೆಕ್ಟ್ ಮಾಡಿ. ಅಲ್ಲಿ ನಿಮಗೆ WITH DRAW ಆಪ್ಷನ್ ಕಾಣಿಸುತ್ತದೆ. ಅಲ್ಲಿ ನೀವು ಹಣದ ಮೊತ್ತವನ್ನ ಬರೆಯಿರಿ. ಜೊತೆಗೆ ಅಲ್ಲಿ ಕೇಳಲಾಗುವ ದಾಖಲೆಗಳ ಸ್ಕ್ಯಾನ್ ಕಾಪಿ, ಚೆಕ್ ಮತ್ತು ಅಡ್ರೆಸ್ ನ್ನ ನೀಡಬೇಕಾಗುತ್ತದೆ. ಬಾಳಿಕೆ GET AADHAR OTP ಪ್ರೆಸ್ ಮಾಡಿ. ಬಳಿಕ ನೀವು ಆಧಾರ್ ಲಿಂಕ್ ಮಾಡಿರುವ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತೆ. ನಿಮ್ಮ ಮೊಬೈಲ್ ಗೆ ಬಂದ OTP ಯನ್ನ ಎಂಟರ್ ಮಾಡಿ PF CLAIM ಕ್ಲಿಕ್ ಮಾಡಿ. ನೀವು ಕೊಟ್ಟ ಎಲ್ಲಾ ದಾಖಲೆಗಳು ಸೂಕ್ತವಾಗಿದ್ದಲ್ಲಿ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುತ್ತದೆ.