Advertisements

ಪಿಎಫ್ ಖಾತೆದಾರರಿಗೆ ಗುಡ್ ನ್ಯೂಸ್ ! ಕೇವಲ 5 ದಿನಗಳ ಒಳಗೆ ನಿಮ್ಮ ಕೈ ಸೇರುತ್ತೆ ಹಣ

News

ಸ್ನೇಹ್ಹಿತರೇ, ಕರೋನಾ ಲಾಕ್ ಡೌನ್ ಕಾರಣದಿಂದಾಗಿ ಭಾರತದಲ್ಲಿ ಬಾರಿ ಆರ್ಥಿಕ ಸಂಕಷ್ಟ ಉಂಟಾಗಿದೆ. ಇನ್ನು ಇದೇ ಸಮಯದಲ್ಲಿ ಬಹುತೇಕ ಪಿಎಫ್ ಖಾತೆದಾರರು ತಮ್ಮ PF ಹಣವನ್ನ ಡ್ರಾ ಮಾಡುತ್ತಿದ್ದಾರೆ. ಇನ್ನು ಇದಕ್ಕೂ ಮುಂಚೆ ಖಾತೆದಾರರು ತಮ್ಮ ಪಿಎಫ್ ಹಣವನ್ನ ಡ್ರಾ ಮಾಡಿಕೊಳ್ಳಲು ತಿಂಗಳು ಗಟ್ಟಲೆ ಕಾಯಬೇಕಿತ್ತು.

Advertisements

ಇನ್ನು ಇತ್ತೀಚೆಗಷ್ಟೇ ಹದಿನೈದು ದಿನಗಳಲ್ಲಿ ಪಿಎಫ್ ಹಣವನ್ನ ದ್ರಾ ಮಾಡಿಕೊಳ್ಳುವ ಹಾಗೆ ಸರ್ಕಾರ ವ್ಯವಸ್ಥೆ ಕಲ್ಪಿಸಿತ್ತು. ಈಗ ಹಣ ವಿತ್ ಡ್ರಾ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನ ಮಾಡಲಾಗಿದ್ದು ಪಿಎಫ್ ಖಾತೆದಾರರು ತಮ್ಮ ಹಣ್ನವನ್ನ ಕೇವಲ ಮೂರರಿಂದ ಐದು ದಿನಗಳ ಒಳಗೆ ಡ್ರಾ ಮಾಡಿಕೊಳ್ಳಬಹುದಾಗಿದೆ. EPFO ಹಣ ವಿತ್ ಡ್ರಾ ಖಾತೆಯಲ್ಲಿ ಹೊಸ ಆಧುನಿಕ ತಂತ್ರಜ್ನ್ಯಾನದೊಂದಿಗೆ ಬದಲಾವಣೆಗಳನ್ನ ತಂದಿದ್ದು, ಈಗ ಪ್ರತಿ ದಿವಸ ಸುಮಾರು ೮೦ ಸಾವಿರ ಖಾತೆದಾರರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ.

ಇನ್ನು ತಮ್ಮ ಪಿಎಫ್ ಹಣವನ್ನ ತೆಗೆದುಕೊಳ್ಳಲು ಇಚ್ಛಿಸುವ ಖಾತೆದಾರರ ಯುನಿಫೈಡ್ ಅಕೌಂಟ್ ನಂಬರ್ ಆಕ್ಟಿವ್ ಆಗಿದ್ದು, ಇದಕ್ಕೆ ಖಾತೆದಾರರ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಆಧಾರ್ ಸಂಖ್ಯೆ ಜೋಡಣೆಯಾಗಿರಬೇಕು. ಇನ್ನು ಖಾತೆದಾರರಿಗೆ ಅನುಕೂಲವಾಗಲೆಂದು ಆನ್ಲೈನ್ ನಲ್ಲೆ ಪಿಎಫ್ ಗೆ ಸಂಬಂಧಪಟ್ಟ ದಾಖಲಾತಿಗಳ ಜೋಡಣೆಗೆ ಅವಕಾಶ ನೀಡಲಾಗಿದೆ. ಇನ್ನು PF ಖಾತೆದಾರರು https://unifiedportal-mem.epfindia.gov.in/memberinterface/ ಈ ವೆಬ್ಸೈಟ್ ನ್ನ ಓಪನ್ ಮಾಡಿ ಲಾಗಿನ್ ಆಗಬೇಕು. ಲಾಗಿನ್ Uಆಗ್ಗುವವರು UAN ನಂಬರ್ ಹಾಗೂ ಪಾಸ್ವರ್ಡ್ ಹೊಂದಿರಬೇಕು.