Advertisements

ಆಸ್ತಿ, ಜಮೀನಿಗೆ ಸಂಬಂಧಪಟ್ಟಂತೆ ಪಿತ್ರಾರ್ಜಿತ ಆಸ್ತಿಗೆ ವಾರಸುದಾರ ಯಾರಾಗ್ತಾರೆ ಗೊತ್ತಾ? ಹೇಗೆ ನೋಡಿ..

Kannada Mahiti

ಪ್ರಿಯ ಓದುಗರೆ ನಮ್ಮ ತಾತ, ಮುತ್ತಾತರ ಗಳಿಸ,ಿ ಕೂಡಿಟ್ಟ ಅಸ್ತಿಯೇ ಪಿತ್ರಾರ್ಜಿತ ಆಸ್ತಿ. ಇದು ತಲೆಮಾರುಗಳಿಂದ ತಲೆಮಾರಿಗೆ ವರ್ಗವಾಗುತ್ತದೆ. ಹಾಗಾದರೆ ಎಷ್ಟು ತಲೆಮಾರಿಗೆ ಆಸ್ತಿ ಬರುತ್ತದೆ. ಯಾರು ವಾರಸುದಾರ ಆಗಬಹುದು ಎಂದು ನಾವು ನಿಮಗೆ ಇಂದು ಮಾಹಿತಿ ನೀಡುತ್ತೇವೆ.. ತಂದೆಯ ತಾತ, ಮುತ್ತಾತರು ಮಾಡಿಟ್ಟ ಆಸ್ತಿಯಲ್ಲಿ ಮಕ್ಕಳು ಮೊಮ್ಮಕ್ಕಳು ಪಾಲುದಾರ ಆಗುತ್ತಾರೆ. ಅದು ಹೇಗೆ ಎಂದು ತಿಳಿಯೋಣ ಬನ್ನಿ. ಕಾಯ್ದೆ ಪ್ರಕಾರ ನಾವು ಅದೇ ವಂಶದವರು ಆಗಿದ್ದರೂ ಕೂಡ 4 ಮತ್ತು 5ನೇ ತಲೆಮಾರಿಗೆ ಹಿಂದೂ ವಾರಸ್ದಾರ ಕಾಯ್ದೆ ಪ್ರಕಾರ ಅನ್ವಯವಾಗುವುದಕ್ಕೆ ಬರುವುದಿಲ್ಲ. ನೀವು ನಿಮ್ಮ ಅಜ್ಜ ಮುತ್ತಜ್ಜ ತಂದೆ ಮೊಮ್ಮಕ್ಕಳು ಅವರೆಲ್ಲರೂ ಸೇರಿ ಕುಳಿತು ಮಾತಾಡಿಕೊಂಡು ಆಸ್ತಿಯನ್ನು ಪಡೆಯಬಹುದು. 3ನೇ ತಲೆಮಾರಿನವರೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ ಎಂದು ಹೇಳಬಹುದು. ಇನ್ನೂ ಧರ್ಮಗಳ ಪ್ರಕಾರ ಪ್ರತಿಯೊಂದು ಧರ್ಮದವರಿಗೂ ಪ್ರತ್ಯೇಕವಾದ ಕಾನೂನುಗಳಿವೆ.

[widget id=”custom_html-3″]

Advertisements

ಅದು ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಹಿಂದೂ ಧರ್ಮದಲ್ಲಿ ಬರುವ ಪ್ರತಿಯೊಂದು ಉಪಧರ್ಮ ಮತ್ತು ಉಪ ಜಾತಿಗಳಿಗೆ ಸಂಬಂಧಿಸಿದಂತೆ ಪಿತ್ರಾರ್ಜಿತ ಆಸ್ತಿಗೆ ಒಂದೇ ರೀತಿಯಾದಂತಹ ಕಾನೂನು ಇದೆ. ಆದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ತಮ್ಮ ಕಾನೂನುಬದ್ಧ ಉತ್ತರಾಧಿಕಾರಿಗಳಿಂದ ಆಸ್ತಿಯನ್ನು ಹೇಗೆ ಅನುವಂಶಿಕವಾಗಿ ಪಡೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಅವರ ವೈಯಕ್ತಿಕ ಕಾನೂನುಗಳಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇನ್ನೂ ಪಿತೃರ್ಜಿತ ಆಸ್ತಿಯನ್ನು ಮಾರುವುದು ಹೇಗೆ ಎಂದು ನೋಡುವುದಾದರೆ, ಪಿತ್ರಾರ್ಜಿತ ಆಸ್ತಿಯನ್ನು ಅಷ್ಟು ಸುಲಭವಾಗಿ ಇನ್ನೊಬ್ಬರಿಗೆ ಮಾರಾಟ ಮಾಡುವುದಕ್ಕೆ ಆಗುವುದಿಲ್ಲ ಅಥವಾ ತಮಗೆ ಇಷ್ಟ ಬಂದವರಿಗೆ ಕೊಡಲು ಆಗುವುದಿಲ್ಲ. ಏಕೆಂದರೆ ಆಸ್ತಿ ಪಿತ್ರಾರ್ಜಿತವಾಗಿ ಸಿಕ್ಕಿರುವುದರಿಂದ. ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡುವಾಗ ಪಿತ್ರಾರ್ಜಿತ ಆಸ್ತಿಯ ಅಡಿಯಲ್ಲಿ ಬರುವ ಕುಟುಂಬದ ಪ್ರತಿಯೊಬ್ಬರ ಒಪ್ಪಿಗೆ ಅವಶ್ಯಕ.

[widget id=”custom_html-3″]

ಪಿತ್ರಾರ್ಜಿತ ಕಾಯ್ದೆ ಹೇಳುವಂತೆ ಮನೆಯ ಒಬ್ಬ ಸದಸ್ಯರು ಒಪ್ಪಿಗೆ ಇಲ್ಲದಿದ್ದರೆ ಆಸ್ತಿ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಆಸ್ತಿ ಮಾರಾಟವಾದರೆ ಒಬ್ಬ ಸದಸ್ಯ ವಕೀಲರ ಸಲಹೆ ಪಡೆದುಕೊಂಡು ಕೋರ್ಟ್ ಗೆ ಹೋಗಬಹುದು. ಹಾಗೆ ಪಿತ್ರಾರ್ಜಿತ ಆಸ್ತಿಯನ್ನು ವಿಲ್ ಮಾಡಲು ಹೋದರೆ, ಇಬ್ಬರು ಅಣ್ಣ ತಮ್ಮಂದಿರಿಗೆ ಪಿತ್ರಾರ್ಜಿತವಾಗಿ ಆಸ್ತಿ ಬಂದಿರುತ್ತದೆ. ಅಣ್ಣ ಮತ್ತು ತಮ್ಮ ತಮಗೆ ಬಂದಿರುವ ಆಸ್ತಿಯನ್ನು ಪ್ರತ್ಯೇಕವಾಗಿ ವಿಭಾಗ ಅಥವಾ ಕ್ರಯ ಮಾಡಿಕೊಂಡು ಅವರು ರಿಜಿಸ್ಟರ್ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುತ್ತಾರೆ. ಇಲ್ಲಿ ಮುಖ್ಯವಾಗಿ ಅಣ್ಣನಿಗೆ ಮಕ್ಕಳು ಇದ್ದು, ತಮ್ಮನಿಗೆ ಮಕ್ಕಳು ಇಲ್ಲದಾಗ, ಅಂತಹ ಸಮಯದಲ್ಲಿ ತಮ್ಮ ತನ್ನ ಪಾಲಿಗೆ ಬಂದ ಆಸ್ತಿಯನ್ನು ತನಗೆ ಇಷ್ಟವಾದವರ ಹೆಸರಿಗೆ ವಿಲ್ ಬರೆಯಬಹುದು. ಅಥವಾ ತಮಗೆ ಇಷ್ಟ ಬಂದವರಿಗೆ ಆಸ್ತಿಯನ್ನು ಕೊಡಬಹುದು. ಪಿತೃರ್ಜಿತ ಆಸ್ತಿಯಲ್ಲಿ ಹೇಗೆ ಪಾಲುದಾರರು ಆಗಬಹುದು ಎಂದು ತಿಳಿದಿರಿ. ಅದನ್ನೂ ಮಾರಾಟ ಮಾಡಲು ಇರುವ ನಿಯಮಗಳನ್ನು ತಿಳಿದಿರಿ. ಯಾರೆಲ್ಲ ವಾರಸುದಾರವಾಗಿ ಆಗುತ್ತಾರೆ ಎಂದು ತಿಳಿದಿರಲ್ಲವೇ. ಹಾಗಾದ್ರೆ ಈ ಮಾಹಿತಿಯನ್ನು ನಿಮ್ಮ ಸುತ್ತ-ಮುತ್ತಲಿನ ಜನರಿಗೆ ಸ್ನೇಹಿತರಿಗೆ ಮಾಹಿತಿ ನೀಡಿ.

[widget id=”custom_html-3″]