Advertisements

ಸ್ಪೀಡನ್ ದೇಶದ ಈ ಹುಡುಗಿಗಾಗಿ ಈ ಪುಣ್ಯಾತ್ಮ ಮಾಡಿದ್ದೇನು ಗೊತ್ತಾ? ಬೆಚ್ಚಿ ಬೀಳ್ತೀರಾ..

Kannada Mahiti

ಪ್ರೀತಿ ಪ್ರೇಮ ಅಂದ್ರೆ ಕೆಲವರು ಎಂತಹ ರಿಸ್ಕ್ ಬೇಕಾದ್ರೂ ತೆಗೆದುಕೊಳ್ತಾರೆ, ಆದರೆ ಇಷ್ಟರಮಟ್ಟಿಗಾ? ನಾವ್ ನಿಮಗೆ ಹೇಳ್ತರೋ ಈ ವ್ಯಕ್ತಿ ತೆಗೆದುಕೊಂಡ ರಿಸ್ಕ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ.. ಎಸ್ ನಾವು ಈಗ ಹೇಳ್ತಿರುವ ಕಥೆಯ ಕಥಾನಾಯಕನ ಹೆಸರು ಪ್ರದ್ಯುಮ್ನ ಕುಮಾರ್ ಮಹಾನಂದ್ಯ ಅಲಿಯಾಸ್ ಪಿಕೆ. ಒಡಿಶಾ ಮೂಲದ ಪಿಕೆ ಅತ್ಯಂತ ಕಡುಬಡತನದಲ್ಲಿದ್ದ ದಲಿತ ಕುಟುಂಬದಲ್ಲಿ ಜನಸಿದ್ದರು. ಬದುಕಿನಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಿದ್ದ ಪ್ರದ್ಯುಮ್ನ, ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಅವಮಾನಗಳನ್ನು ನಿಂದನೆಯನ್ನು ಎದುರಿಸಿದ್ರು, ಬದುಕಿನಲ್ಲಿ ಓದಬೇಕು ಅಂತ ಛಲ ಹೊಂದಿದ್ದ ಅವರು, ಕಷ್ಟಪಟ್ಟು ದೆಹಲಿಯ ಲಲಿತಾ ಕಲಾ ವಿಭಾಗದಲ್ಲಿ ಸೀಟ್ ಗಿಟ್ಟಿಸಿಕೊಂಡ್ರು, ಅಪ್ರತಿಮ ಪ್ರತಿಭಾವಂತನಾಗಿದ್ದ ಪ್ರದ್ಯುಮ್ನ ಕ್ಷಣ ಮಾತ್ರದಲ್ಲಿ ಉತ್ತಮ ಪೈಂಟಿಂಗ್ ಬಿಡಿಸುತ್ತಿದ್ದರು.

[widget id=”custom_html-3″]

Advertisements

ಇದೇ ಕಲೆಯನ್ನು ಜೀವನದಲ್ಲಿ ಮುಂದುವರಿಸಬೇಕು ಅಂತ ದೃಢವಾಗಿ ನಿಶ್ಚಯಿಸಿ, ದೆಹಲಿಯ ಕಾಲೇಜಿಗೆ ಸೇರಿಕೊಳ್ತಾರೆ, ಆದರೆ ದೆಹಲಿಯಲ್ಲಿ ಹೊಸ್ಟೆಲ್‌ನಲ್ಲಿ ಉಳಿದುಕೊಳ್ಳುವಷ್ಟು ಅನೂಕೂಲ ಮನೆಯಲ್ಲಿ ಇರದಿದ್ದರಿಂದ ಪುಟ್‌ಬಾತ್‌ಗಳಲ್ಲಿ ಮಲಗಿ ಕೊಳ್ತಾಯಿದ್ದರು, ಸರ್ಕಾರಿ ಶೌಚಾಲಯಗಳಲ್ಲಿ ನಿತ್ಯ ಕರ್ಮವನ್ನು ಮುಗಿಸಿ ಸ್ನಾನ ಮಾಡಿ ಬಟ್ಟೆ ಬದಲಾಯಿಸುತ್ತಿದ್ದರಂತೆ, ಆದರೆ ಊಟಕ್ಕಾಗಿ ಜನದಟ್ಟಣೆ ಇರುವ ಪ್ರದೇಶಕ್ಕೆ ಹೋಗಿ ಜನರ ಪೈಂಟಿಗ್ ಮಾಡಿಕೊಟ್ಟು ಹಣ ಸಂಪಾದನೆ ಮಾಡ್ತಾಯಿದ್ದರಂತೆ ಹೀಗೆ ಒಂದು ದಿನ ಸ್ವೀಡೀಶ್ ಮೂಲದ ವಿದ್ಯಾರ್ಥಿನಿಯಾದ ಚಾರ್ಲೋಟ್ ಎನ್ನುವ ಸ್ಪುರದ್ರೂಪಿ ಚೆಲುವೆ ತನ್ನ ಚಿತ್ರ ಬಿಡಿಸಿಕೊಡಲು ಪಿಕೆ ಬಳಿ ಮನವಿ ಮಾಡಿ ಕೊಳ್ತಾಳೆ..

[widget id=”custom_html-3″]

ಅದ್ಯಾಕೋ ಸ್ವಲ್ಪ ವಿಚಲಿತನಾದ ಪಿಕೆ, ಮಾರನೇ ದಿನ ಬರುವಂತೆ ಕೇಳಿಕೊಳ್ಳುತ್ತಾರೆ, ನಂತರ ಮಾರನೇ ದಿನ ಚಾರ್ಲೋಟ್ ಬಂದಾಗ ಅವರ ಅಂದವಾದ ಚಿತ್ರವನ್ನು ಅವರೇ ಬೆರಗಾಗುವಂತೆ ಪಿಕೆ ಬಿಡಿಸಿಕೊಡುತ್ತಾರೆ, ಇವರಿಬ್ಬರ ಮಧ್ಯೆ ಗೊತ್ತಿಲ್ಲದ ಒಂದು ಅನುರಾಗ ಅರಳಲು ಶುರುವಾಗುತ್ತೆ, ದಿನಕಳೆದಂತೆ ಅದು ಪ್ರೇಮವಾಗಿ ಬದಲಾಗುತ್ತದೆ. ನಂತರ ಇಬ್ಬರು ಪರಸ್ಪರ ವಿವಾಹವಾಗ್ತಾರೆ, ಆದರೆ ಚಾರ್ಲೋಟ್ ಹಿಪ್ಪಿ ಮಾರ್ಗವಾಗಿ ಭಾರತಕ್ಕೆ ಬಂದಿರ‍್ತಾರೆ, ಅವರ ವೀಸಾ ಅವಧಿ ಮುಗಿಯುವ ಕಾರಣ ಮರಳಿ ತನ್ನ ದೇಶಕ್ಕೆ ವಾಪಾಸ್ ಆಗ್ತಾರೆ, ಆದರೆ ಪ್ರದ್ಯುಮ್ನ ಮಾತ್ರ ಪ್ರೀತಿಸಿದ ಹುಡುಗಿಯನ್ನು ನೋಡಲಾಗದೇ ಮಾತನಾಡಲಾಗದೇ ಪರದಾಟ ಅನುಭವಿಸ್ತಾನೆ..

[widget id=”custom_html-3″]

ಈ ಹಿನ್ನಲೆ ತನ್ನಲ್ಲಿದ್ದ ಎಲ್ಲ ವಸ್ತುಗಳನ್ನು ಮಾರಿ ಒಂದು ಸೈಕಲ್ ತಗೆದುಕೊಂಡು ತಾನೂ ಸಹ ಹಿಪ್ಪಿ ಮಾರ್ಗವಾಗಿ ಸ್ವೀಡನ್ ತಲುಪಬೇಕು ಅಂತ ಅಂದುಕೊಂಡು ಹೊರಡುತ್ತಾನೆ, ಹಿಪ್ಪಿ ಮಾರ್ಗ ಅಂದರೆ ಆರು ಸಾವಿರ ಕಿಲೋ ಮೀಟರ್‌ಗೂ ಜಾಸ್ತಿ ಇರುವ ಆ ಮಾರ್ಗದಲ್ಲಿ ಹಲವಾರು ದೇಶಗಳನ್ನು ಸುತ್ತುವ ಅವಕಾಶ ವಿರ‍್ತದೆ. ಅದೇ ಮಾರ್ಗ ಅನುಸರಿಸಿ ತನ್ನ ಹೆಂಡತಿಯನ್ನು ಹುಡುಕುತ್ತಾ ದೂರದ ಸ್ವಿಡನ್ ತಲುಪುತ್ತಾನೆ, ಆದರೆ ಪ್ರದ್ಯುಮ್ನನ ಬಳಿ ವೀಸಾ ಇರದ ಕಾರಣ ಗಡಿಯ ಪೊಲೀಸರು ಅವನನ್ನು ಒಳಗೆ ಬಿಡುವುದಿಲ್ಲ, ನಂತರ ಮದುವೆಯ ಫೋಟೋ ತೋರಿಸಿದ ಮೇಲೆ ಚಾರ್ಲೋಟ್ ಅವರನ್ನು ಸಂಪರ್ಕಿಸಿ ಖಚಿತ ಪಡಿಸಿಕೊಂಡು ಸ್ವಿಡನ್ ಒಳಗೆ ಬಿಟ್ಟು ಕೊಳ್ತಾರೆ, ಸ್ವಿಡನ್ ನ ಪ್ರಕಾರ ಮತ್ತೊಮ್ಮೆ ಮದುವೆ ಆಗ್ತಾರೆ.
ಸ್ವತಃ ಚಾರ್ಲೊಟ್ ಸಹ ಪ್ರದ್ಯುಮ್ನನ ಆ ಅಪಾರ ಪ್ರೀತಿಯ ಕಂಡು ದಂಗಾಗ್ತಾಳೆ..

ಹಲವಾರು ದೇಶಗಳನ್ನು ಸೈಕಲ್‌ನಲ್ಲಿ ಸುತ್ತುವದೆಂದರೆ ತಮಾಷೆ ಮಾತಂತು ಅಲ್ಲ, ಆಕೆಯೇ ತನ್ನ ಪತಿಯ ಅಮರ ಪ್ರೀತಿಗೆ ಸೆಲ್ಯೂಟ್ ಹೊಡೆದಿದ್ದಾಳೆ,
ಇನ್ನು ಆಗಿನ ಕಾಲದಲ್ಲಿಯೇ ಇಂದಿರಗಾಂಧಿಯವರ ಚಿತ್ರಣ ಬರೆದುಕೊಟ್ಟು ಪ್ರಸಿದ್ಧಿ ಪಡೆದಿದ್ದ ಪ್ರಧ್ಯುಮ್ನ ಈಗ ಸ್ವಿಡನ್ ಸರ್ಕಾರದ ಕಲೆ ಹಾಗೂ ಸಾಂಂಸ್ಕೃತಿಕ ಸಲಹೆಗಾರನಾಗಿ ಕಾರ್ಯನಿರ್ವಹಿಸ್ತಾಯಿದ್ದಾರೆ.
ಸೈಕಲ್‌ನಲ್ಲಿ ಆರು ಸಾವಿರ ಕ್ರಮಿಸಿ ಪತನಿಯನ್ನು ಮೀಟ್ ಮಾಡಿದ ಪ್ರಧ್ಯುಮ್ನ ಅಮರ ಪ್ರೇಮದ ಬಗ್ಗೆ ನಿವೇನು ಹೇಳ್ತೀರಾ..