Advertisements

ರಾಷ್ಟೀಯ ಭದ್ರತೆ ವಿಚಾರದಲ್ಲಿ ಯಾರು ದಿ ಬೆಸ್ಟ್ ?ಸಮೀಕ್ಷೆಯಲ್ಲಿ ಬಹಿರಂಗ ? ಶಾಕ್ ಕೊಟ್ಟ ಸರ್ವೆಯಲ್ಲಿ ಏನಿದೆ !

News

ಭಾರತದ ಗಡಿ ಭಾಗಗಳಲ್ಲಿ ಪದೇ ಪದೇ ಖ್ಯಾತೆ ತೆಗೆಯುತ್ತಲೇ ಬಂದಿರುವ ಕುತಂತ್ರಿ ಚೀನಾದ ಉದ್ಧಟತನ ಸದ್ಯದ ಮಟ್ಟಿಗೆ ಕಡಿಮೆಯಾಗುವಂತೆ ಕಾಣಿಸುತ್ತಿಲ್ಲ. ಬೂದಿ ಮುಚ್ಚಿದ ಕೆಂಡದಂತಾಗಿದೆ ಭಾರತ ಚೀನಾದ ಗಡಿ. ಇನ್ನು ಈ ಸಂಘರ್ಷಗಳು ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈಗ ಚೀನಾದೇಶವನ್ನ ಮಣಿಸಲು ಯಾವ ನಾಯಕ ಉತ್ತಮ ? ರಾಷ್ಟೀಯ ಭದ್ರತೆ ವಿಚಾರದಲ್ಲಿ ಯಾರು ಬೆಸ್ಟ್? ಯಾರ ನಾಯಕತ್ವದ ಮೇಲೆ ದೇಶದ ಜನರು ನಂಬಿಕೆಯಿಟ್ಟಿದ್ದಾರೆ ? ಎಂಬುದೊಂದು ಸರ್ವೇಯನ್ನ ಸಿ ವೋಟರ್ಸ್ ಮಾಡಿದ್ದೂ ಚೀನಾವನ್ನ ಮಣಿಸಲು ಸೂಕ್ತ ನಾಯಕರು ಯಾರು ಎಂಬುದು ಈಗ ಬಹಿರಂಗವಾಗಿದೆ.

Advertisements

ಹಾಗಾದ್ರೆ ದೇಶದ ಜನರು ಯಾರ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ, IANS ಮತ್ತು C ವೋಟರ್ಸ್ ಸಮೀಕ್ಷೆಯಲ್ಲಿ ಬಯಲಾಗಿದ್ದೆನು ನೋಡೋಣ ಬನ್ನಿ..ಚೀನಾ ದೇಶವನ್ನ ಮಣಿಸಲು ಪ್ರಧಾನಿ ನರೇದ್ರ ಮೋದಿಯವರೇ ಸೂಕ್ತ..ದೇಶಕ್ಕೆ ಮೋದಿಯೇ ದಂಡನಾಯಕ. ಶೇ 89ರಷ್ಟು ಜನರು ಮೋದಿಯ ನಿರ್ಧಾರಗಳನ್ನು ನಾವು ಬೆಂಬಲಿಸಲಿದ್ದು, ಮೋದಿ ಡಿ ಬೆಸ್ಟ್ ಎಂದು ಸರ್ವೆಯಲ್ಲಿ ತಿಳಿಸಿದ್ದಾರೆ. ಇನ್ನು ಈ ವಿಚಾರದಲ್ಲಿ ರಾಹುಲ್ ಗಾಂಧಿಯನ್ನ ನಂಬೋದಿಲ್ಲ ಎಂದು ಶೇ 61.3 ಜನ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇನ್ನು ರಾಷ್ಟ್ರ್ರೀಯ ಭದ್ರತೆ ವಿಚಾರದಲ್ಲಿ ಮೋದೀಯವರೇ ದಿ ಬೆಸ್ಟ್ ಎಂದು ಶೇ 73.3 ಜನ ವೋಟ್ ಮಾಡಿದ್ದಾರೆ. ಇನ್ನು ರಾಷ್ಟೀಯ ಭದ್ರತೆ ವಿಚಾರದಲ್ಲಿ ವಿರೋಧ ಪಕ್ಷಗಳು ಬೆಸ್ಟ್ ಎಂದು ಶೇ 16.7 ಜನ ವೋಟ್ ಮಾಡಿದ್ದಾರೆ. ಇನ್ನು ಈಗ ಬಾಯ್ಕಾಟ್ ಚೀನಾ ಹೋರಾಟ ನಡೆಯುತ್ತಿದೆ. ಹಾಗಾಗಿ ಶೇ 68.2 ಜನ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಬೆಂಬಲ ಕೊಟ್ಟಿದ್ದಾರೆ. ಇನ್ನು ಇದರ ಜೊತೆಗೆ ಶಾಕಿಂಗ್ ಏನೆಂದರೆ ಚೀನಾ ಉತ್ಪನ್ನಗಳು ಬೇಕು ಎಂದು ಶೇ 31.8 ಜನ ವೋಟ್ ಮಾಡಿದ್ದಾರೆ.

ಇನ್ನು ನಮಗೆ ತಿಳಿದಿರುವಂತೆ ಇದುವರೆಗೂ ನಮ್ಮ ಭಾರತದ ಅತೀ ದೊಡ್ಡ ಶತ್ರು ದೇಶ ಎಂದು ಯಾವುದೇ ಭಾರತೀಯನನ್ನ ಕೇಳಿದ್ರೂ ಪಾಕಿಸ್ತಾನ ಎಂದು ಹೇಳುತ್ತಿದ್ದರು. ಆದರೆ ಈಗ ಶೇ 68.3 ಜನ ಪಾಕಿಸ್ತಾನಗಿಂತ ಚೀನಾವೇ ನಮ್ಮ ದೊಡ್ಡ ಶತ್ರು ಎಂದಿರುವುದು ಸರ್ವೆಯಲ್ಲಿ ತಿಳಿದುಬಂದಿದೆ. ಇನ್ನು ಪಾಕ್ ನಮ್ಮ ದೇಶದ ದೊಡ್ಡ ಶತ್ರು ಎಂದು 31.7 ಜನ ಸರ್ವೆಯಲ್ಲಿ ತಿಳಿಸಿದ್ದಾರೆ. ಇನ್ನು ಒಟ್ಟಾರೆ ಚೀನಾ ಹಾಗೂ ರಾಷ್ಟೀಯ ಭದ್ರತೆ ವಿಚಾರದ ಕುರಿತಂತೆ ನಡೆದ ಸಿ ವೋಟರ್ ಸರ್ವೆಯಲ್ಲಿ ಪ್ರಧಾನಿ ಮೋದಿಯವರಿಗೆ ದೇಶದ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.