Advertisements

ಎತ್ತಿನಗಾಡಿಗೆ ಸಾವಿರಾರು ರೂಪಾಯಿ ದಂಡ ಹಾಕಿದ ಈಗ ಫೊಲಿಸಪ್ಪನ ಗತಿ ಏನಾಗಿದೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಾವು ಪ್ರತಿದಿನ ಗಾಡಿಗಳಲ್ಲಿ ಓಡಾಡುವಾಗ ಟ್ರಾಫಿಕ್ ಪೋಲಿಸರು ಹಲವರನ್ನ ಹಿಡಿಯೋದು ಮತ್ತು ಪೈನ್ ಆಕೋದನ್ನ ನೋಡೇ ಇರ್ತೀವಿ.. ಮತ್ತು ಕೆಲವು ಸಾರಿ ಎಲ್ಮೆಟ್ ಹಾಕದೇ ಇರೋದಕ್ಕೆ. ಗಾಡಿ ಡಾಕ್ಯುಮೆಂಟ್ಸ್ ಇಲ್ಲದೇ ಇರೋದಕ್ಕೆ ನಮ್ಮನ್ನು ಸಹ ನಿಲ್ಲಿಸಿ ವಿಚಾರಿಸುತ್ತಾರೆ.. ಅಥವಾ ಪೈನ್ ಹಾಕಿರುತ್ತಾರೆ.. ಅದೇ ರೀತಿ ಇಲ್ಲೊಬ್ಬ ರೈತನ ಎತ್ತಿನ ಗಾಡಿಗೆ ಪೋಲಿಸರು ಸಾವಿರ ರೂಪಾಯಿ ಪೈನ್ ಹಾಕುತ್ತಾರೆ.. ಪೈನ್ ಹಾಕಲು ಕಾರಣವಾದರೂ ಏನು ಮತ್ತು ಇದಕ್ಕೆ ರೈತ ಕೊಟ್ಟ ಜವಾಬಿಗೆ ಎಲ್ಲರೂ ಸಹ ಶಹಬಾಷ್ ಎನ್ನುತ್ತಿದ್ದಾರೆ. ಇಡೀ ಭಾರತದಾದ್ಯಂತ ಕಳೆದ ವರ್ಷ ಹೊಸ ಕಾಯಿದೆ ಬಂದಾಗಿನಿಂದಲೂ ಯಾವುದೇ ಪೈನ್ ಹಣವನ್ನು ಐದು ಪಟ್ಟು, ಹತ್ತು ಪಟ್ಟು ಜ್ಯಾಸ್ತಿ ಮಾಡಿದೆ ಕೇಂದ್ರ ಸರ್ಕಾರ..

Advertisements

ಮತ್ತು ಸಾಮಾನ್ಯ ಜನರಿಗೆ ಇದರಿಂದ ತುಂಬಾ ತೊಂದರೆಗಳು ಆದವು. ಆದರೆ ಇಲ್ಲೊಬ್ಬ ಮಹಾಬೂಪ ಎತ್ತಿನ ಗಾಡಿಗೆ ಪೈನ್ ಹಾಕಿದ್ದಾನೆ.. ಈ ಘಟನೆ ನಡೆದಿರುವುದು ಉತ್ತರಖಾಂಡ್ ನ ಡೆಹ್ರಾಡೂನ್ ನಲ್ಲಿ. ರಿಯಾಜ್ ಹಸನ್ ಎಂಬ ರೈತ ಮಾರ್ಕೆಟ್ ಗೆ ತಾನು ಹೊಲದಲ್ಲಿ ಬೆಳೆದ ತರಕಾರಿಯನ್ನು ಮಾರುವುದಕ್ಕೆ ಮಾರ್ಕೆಟ್ ಗೆ ಹೋಗಿದ್ದ.. ಆಗ ತನ್ನ ಎತ್ತಿನ ಗಾಡಿಯನ್ನು ನಿಲ್ಲಿಸಿ ಹೋಗಿರುತ್ತಾನೆ. ಈ ಸಂದರ್ಬದಲ್ಲಿ ಅಲ್ಲಿಗೆ ಬಂದ ಟ್ರಾಫಿಕ್ ಪೋಲಿಸ್ ಎತ್ತುಗಳನ್ನು ನೋಡಿದ್ದ.. ಮತ್ತು ಅಲ್ಲಿ ಟ್ರಾಫಿಕ್ ಜಾಮ್ ಆದ ಕಾರಣದಿಂದ ಸಾವಿರಾರು ರೂಪಾಯಿ ಚನಲ್ ಹಾಕುತ್ತಾರೆ ಸಬ್ ಇನ್ಸ್ಪೆಕ್ಟರ್ ಪಂಕಜ್ ಕುಮಾರ್ ಅವರು..

ಇನ್ನೂ ಅಲ್ಲಿಗೆ ಬಂದ ರೈತ ರಿಯಾಜ್ ಹಸನ್ ಗೆ ದಂಡ ಕಟ್ಟಿ ನಿನ್ನ ಎತ್ತಿನಗಾಡಿಯನ್ನು ತೆಗೆದುಕೊಂಡು ಹೋಗು ಎಂದು ಗದರುತ್ತಾನೆ. ಆಗ ಬುದ್ಧಿವಂತಿಕೆಯಿಂದ ಮಾತನಾಡಿದ ರಿಯಾಜ್ ಹಸನ್.. ಆಯ್ತು ಸರ್ ನಾನು ದಂಡ ಕಟ್ಟುತ್ತೇನೆ, ಆದರೆ ನೀವು ಹಾಕಿರುವ ದಂಡವನ್ನು ಯಾವ ಕಾನೂನಿನ ಅಡಿಯಲ್ಲಿ, ಮತ್ತು ಯಾವ ತಪ್ಪಿಗಾಗಿ ಹಾಕಿದ್ದೀರಾ ಎಂದು ಕೇಳಿದ. ಆಗ ಸಬ್ ಇನ್ಸ್ಪೆಕ್ಟರ್ ಸಕ್ಷೆನ್ 81 ಮೋಟರ್ ವೈಕಲ್ ಕಾಯಿದೆಯ ಅಡಿ ಹಾಗೂ ನೋ ಪಾರ್ಕಿಂಗ್ ಗಾಗಿ ಹಾಕಿದ್ದೇನೆ ಎಂದು ಹೇಳುತ್ತಾರೆ.. ಆಗ ರಿಯಾಜ್.. ಸರಿ ಸರ್ ಗಾಡಿ ನಂಬರ್ ಬಿಲ್ ನಲ್ಲಿ ಏನಂತ ಹಾಕಿದ್ದೀರಾ ಎಂದು ಕೇಳುತ್ತಾನೆ. ಆಗ ಸಬ್ ಇನ್ಸ್ಪೆಕ್ಟರ್ ಗಾಡಿ ನಂಬರ್ ಹಾಕಿಲ್ಲ ಎಂದು ಹೇಳುತ್ತಾನೆ..

ಮತ್ತೆ ಗಾಡಿ ನಂಬರ್ ಹಾಕದೇನೆ ಪೈನ್ ಹೇಗೆ ಹಾಕ್ತಿರಾ ಸರ್ ಎಂದು ಕೇಳುತ್ತಾನೆ. ನನ್ನದು ಎತ್ತಿನಗಾಡಿ ಇದಕ್ಕೆ ಯಾವುದೇ ರಿಜಿಸ್ಟ್ರೇಷನ್ ಮಾಡಿಸಿರೋದಿಲ್ಲ ಅವು ಪ್ರಾಣಿಗಳು ಗಾಡಿಗಳಲ್ಲ.. ಒಂದು ಕಡೆ ನಿಲ್ಲೊದಕ್ಕೆ.. ಮತ್ತು ಮೋಟರ್ ವೈಕಲ್ ಕಾಯಿದೆ ಕೇವಲ ಗಾಡಿಗಳಿಗೆ ಮಾತ್ರ ಎಂದು ಹೇಳಿದ ರಿಯಾಜ್.. ಆಗ ಏನು ಮಾತನಾಡಬೇಕು ಎಂದು ತಿಳಿಯದ ಸಬ್ ಇನ್ಸ್ಪೆಕ್ಟರ್ ದಂಗಾಗಿ ಹೋದ ಮತ್ತು ಎತ್ತಿನಗಾಡಿಯನ್ನು ಬಿಟ್ಟು ಕಳುಹಿಸಿದ.. ಮತ್ತು ಈ ವಿಚಾರವನ್ನು ದಾರಿಹೋಕರೊಬ್ಬರು ತಮ್ಮ ಜಾಲತಾಣ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ..

ನೋಡಿದರಲ್ವಾ ಸ್ನೇಹಿತರೆ ನಮಗಾಗಿ ರೈತರು ಕಷ್ಟಪಟ್ಟು ದುಡಿಯುತ್ತಾರೆ.. ಈ ರೈತ ಮಾಡಿದ್ದು ತಪ್ಪೇ ಇರಬಹುದು ಆದರೆ ಅವರಿಗೆ ಬುದ್ದಿ ಮಾತನ್ನು ಹೇಳಿ ಕಳುಹಿಸೋದು ಬಿಟ್ಟು ಸಾವಿರ ರೂಪಾಯಿ ದಂಡ ಹಾಕಿದ್ರೆ ಅವರು ಎಲ್ಲಿಂದ ತಂದು ಕಟ್ಟಬೇಕು ಹೇಳಿ. ರಿಯಾಜ್ ಅಸನ್ ಬುದ್ದಿವಂತನಾಗಿದ್ದಕ್ಕೆ ಮಾತನಾಡಿ ಇದರಿಂದ ಪಾರಾದ.. ಬೇರೆ ತಿಳುವಳಿಕೆ ಇಲ್ಲದ ರೈತನಾಗಿದ್ದರೆ ಅವರ ಪರಿಸ್ಥಿತಿ ಏನಾಗಬೇಡ ಹೇಳಿ. ಸ್ನೇಹಿತರೆ ಈ ಘಟನೆಯ ಬಗ್ಗೆ ನೀವೆನು ಹೇಳಲು ಇಷ್ಟಪಡುತ್ತೀರಾ ಎಂಬುದನ್ನು ತಿಳಿಸಿ.