Advertisements

ಗಿರಾಕಿಗಾಗಿ ಕಾಯುತ್ತಿದ್ದ ಮಂಗಳ ಮುಖಿ ಹತ್ತಿರ ಬಂದು ಆಕೆಯನ್ನು ಕರದುಕೊಂಡ ಹೋದ ಫೊಲಿಸ್.. ಆದರೆ ನಂತರ ಆಗಿದ್ದೇ ಬೇರೆ. ಇಂತವ್ರು ಇರ್ತಾರಾ!

Kannada Mahiti

ಮಂಗಳಮುಖಿಯರ ಜೀವನವೇ ಒಂದು ವ್ಯಥೆ. ಅದನ್ನು ಕೇಳಿದಾಗ ಅದೊಂದು ಕಥೆಯಾಗುತ್ತದೆ. ಸಮಾಜದ ನಡುವೆ ಎಲ್ಲರಂತೆ ಬಾಳುವ ಆಸೆ ಇದ್ದರೂ ಬದುಕಲು ಈ ಜನ ಬಿಡುವುದಿಲ್ಲ. ಹೀಗಾಗಿ ಬೆಳಗಿನಿಂದ ಸಂಜೆಯವರೆಗೂ ಟ್ರಾಫಿಕ್ನಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ರಾತ್ರಿಯಾದರೆ ಗಿರಾಕಿಗಳಿಗಾಗಿ ರಸ್ತೆ ಬದಿಯಲ್ಲಿ ನಿಲ್ಲುತ್ತಾರೆ. ಹೀಗೆ ನಿಂತಿದ್ದ ಮಂಗಳಮುಖಿಗೆ ಈ ಪೊಲೀಸ್ ಮಾಡಿದ್ದೇನು ಗೊತ್ತಾ? ಈ ತರದ ಪೊಲೀಸರು ಇರ್ತಾರ? ಎಂದು ಮೂಗಿನ ಮೇಲೆ ಬೆರಳು ಇಡುವುದು ಖಂಡಿತ. ಈ ಕುರಿತು ಒಂದು ಸ್ಟೋರಿ ನಿಮಗಾಗಿ.. ತಮಿಳುನಾಡಿನ ಮಧುರೈ ಬೀದಿಗಳು ಸಂಜೆಯಾದರೆ ಸಾಕು ಮಂಗಳಮುಖಿಯ ರಿಂದ ತುಂಬಿರುತ್ತಿತ್ತು. ಪೊಲೀಸರು ರೌಂಡ್ ಗೆ ಬಂದರೆ ಎಲ್ಲರೂ ಕ್ಷಣಾರ್ಧದಲ್ಲಿ ಮಾಯವಾಗುತ್ತಿದ್ದ ಕಾಲವದು. ಹೀಗೆ ಒಂದು ದಿನ ರಾತ್ರಿ ಗಿರಾಕಿಗಾಗಿ ಕಾಯುತ್ತಿದ್ದ ಮಂಗಳಮುಖಿಯರು ಪೊಲೀಸರು ಬಂದೊಡನೆ ದಿಕ್ಕಾಪಾಲಗಿ ಓಡಿಹೋಗುತ್ತಾರೆ.

[widget id=”custom_html-3″]

Advertisements

ಆದ್ರೆ ಒಬ್ಬ ಮಂಗಳಮುಖಿ ಮಾತ್ರ ಓಡದೆ, ರಸ್ತೆಬದಿ ಬಿಟ್ಟು ಕದಲದೆ, ಅಲ್ಲಿಯೇ ತಟಸ್ಥ ಆಗುತ್ತಾಳೆ. ಪೊಲೀಸ್ ಅಧಿಕಾರಿಯಾದ ಕವಿತಾ ಮಂಗಳಮುಖಿ ಬಳಿ ಹೋಗಿ ಕೇಳುತ್ತಾಳೆ. ಎಲ್ಲಿ ನಿಂತು ಏನು ಮಾಡುತ್ತಿದ್ದೀಯಾ ಎಂದು? ಆಗ ಅವಳು ನಾನು ಎಂಬಿಬಿಎಸ್ ಓದಿ ಒಂದು ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೆ. ಆದರೆ ನನ್ನಲ್ಲಿ ಹಾರ್ಮೋನಗಳು ಬದಲಾದವು. ತದನಂತರ ನಾನು ಮಹಿಳೆಯಾದೆ. ಆಗ ಆಸ್ಪತ್ರೆಯವರು ನನ್ನನ್ನು ಹೊರಹಾಕಿದರು. ಅದಕ್ಕಾಗಿ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುತ್ತಾಳೆ. ಅವಳ ಮಾತುಗಳನ್ನು ಅವಳ ಪ್ರಮಾಣಪತ್ರಗಳು ನಿಜ ಎಂದು ಸಾರಿ ಸಾರಿ ಹೇಳಿದವು. ಅಂದು ಅಲ್ಲಿಂದ ಕವಿತಾ ಮಂಗಳಮುಖಿಯನ್ನು ಕರೆತರುತ್ತಾರೆ.

[widget id=”custom_html-3″]

ಅಷ್ಟೇ ಅಲ್ಲಾ ತನ್ನದೇ ಸ್ವಂತ ಹಣದಲ್ಲಿ ಆಸ್ಪತ್ರೆಯೊಂದನ್ನು ತೆರೆದು ಅಲ್ಲಿ ಇವಳನ್ನು ವೈದ್ಯೇಯನ್ನಾಗಿ ಮಾಡುತ್ತಾರೆ.ಸಮಾಜದಲ್ಲಿ ಮರ್ಯಾದೆಯಿಂದ ಬದುಕಲು ದಾರಿ ಮಾಡಿಕೊಡುತ್ತಾರೆ. ಅಂದಿನಿಂದ ಇಂದಿನವರೆಗೂ ಮಂಗಳಮುಖಿ ಪೊಲೀಸ್ ಅಧಿಕಾರಿ ಕವಿತಾರಿಗೆ ಋಣಿಯಾಗಿ, ಬಡವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತ ಬದುಕುತ್ತಿದ್ದಾರೆ. ಪೊಲೀಸರಲ್ಲಿ ಯೂ ಮಾನವೀಯತೆ ಗುಣ ಇರುತ್ತದೆ ಎಂದು ಈ ತಮಿಳುನಾಡಿನ ಪೊಲೀಸ್ ಅಧಿಕಾರಿ ಕವಿತಾ ತೋರಿಸಿಕೊಟ್ಟಿದ್ದಾರೆ. ಮಂಗಳಮುಖಿಯರಿಗೆ ಉತ್ತಮ ಜೀವನ ರೂಪಿಸುವಲ್ಲಿ ಸಹಾಯಕರಾಗಿದ್ದಾರೆ. ಇವರ ಈ ಕಾರ್ಯಕ್ಕೆ ಮಂಗಳಮುಖಿಯರು ಧನ್ಯವಾದ ಅರ್ಪಿಸಿ, ಶುಭ ಹಾರೈಸಿದ್ದಾರೆ..