Advertisements

ಡ್ರ’ಗ್ ವಿಚಾರಣೆ ಬೆನ್ನಲೇ ನಟಿ ರಾಗಿಣಿ ಮದ್ಯ ರಾತ್ರಿ ಎಲ್ಲಿಗೆ ಹೋದ್ರು, ಎಲ್ಲಿದ್ದಾರೆ! ಈಗ ರಾಗಿಣಿ ಏನು ಹೇಳಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ ಕೆಟ್ಟ ಮದ್ದಿನ ವಿಚಾರವಾಗಿ ಒಬ್ಬರ ನಂತರ ಒಬ್ಬರಿಗೆ ನಟಿಯರ ವಿಚಾರಣೆಗೆ ನೋಟಿಸ್ ಜಾರಿಯನ್ನು ಮಾಡುತ್ತಿದ್ದಾರೆ. ಇನ್ನು ಇದರ ಸಂಬಂಧ ಆರ್ ಟಿ ಓ ಸಿಬ್ಬಂದಿ ರವಿಶಂಕರ್ ಅವರನ್ನು ವಿಚಾರಣೆ ನಡೆಸಿ ಅವರು ನೀಡಿರುವ ಮಾಹಿತಿ ಪ್ರಕಾರ ಸ್ಯಾಂಡಲ್ವುಡ್ ನಟಿ ರಾಗಿಣಿಯವ ಹೆಸರು ಬಂದಿದೆ. ರಾಗಿಣಿಯವರಿಗೆ ಪೊಲೀಸರು ವಿಚಾರಣೆಗೆ ಸಿಸಿಬಿ ಕಚೇರಿಗೆ ಬರಬೇಕೆಂದು ಈಗಾಗಲೇ ನೋಟಿಸ್ ಅನ್ನು ಮಾಡಿದ್ದಾರೆ. ಆದರೆ ಇದರ ಬೆನ್ನಲ್ಲೇ ನೆನ್ನೆ ರಾತ್ರಿಯಿಂದಲೇ ರಾಗಿಣಿಯವರು ಮನೆಯಲ್ಲಿ ಇಲ್ಲ ಎಂಭ ವಿಷಯ ಕೇಳಿ ಬರುತ್ತಿದೆ.

Advertisements

ಸಿಸಿಬಿ ನೋಟಿಸ್ ಕಳುಹಿಸಿದ ಬಳಿಕವೇ ರಾಗಿಣಿಯವರು ಮನೆಯಿಂದ ಹೊರಗಡೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ನಟಿ ರಾಗಿಣಿಯವರು ಎಲ್ಲಿಗೆ ಹೋಗಿದ್ದಾರೆ ಎಂದು ರಾಗಿಣಿ ಮನೆಯ ಸೆಕ್ಯೂರಿಟಿ ಅವರನ್ನ ವಿಚಾರಿಸಿದಾಗ ಮನೆಯಲ್ಲಿ ಯಾರು ಇಲ್ಲ. ಮದ್ಯ ರಾತ್ರಿಯೇ ಮೇಡಂ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಈ ಮಾಹಿತಿ ತಿಳಿದು ಇನ್ನು ಹೆಚ್ಚು ಅನುಮಾನಕ್ಕೆ ಕಾರಣವಾಗಿದೆ. ನಟಿ ರಾಗಿಣಿಯವರು ಬೇರೆ ಕಡೆಗೆ ಹೋಗಿದ್ದಾರಾ ಅಥವಾ ಮನೆಯಲ್ಲಿ ಇದ್ದುಕೊಂಡು ಇಲ್ಲ ಅಂತ ಹೇಳಿಸ್ತಿದ್ದಾರಾ ಎಂಬುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.

ಬುಧವಾರ ರಾತ್ರಿ ರಾಗಿಣಿಯವರಿಗೆ ಸಿಸಿಬಿ ಕಡೆಯಿಂದ ನೋಟಿಸ್ ಅನ್ನು ಜಾರಿಗೆ ಮಾಡಿದ್ದರು. ತದನಂತ್ರ ನಟಿ ಕಾನೂನುತಜ್ನ್ಯರ ಮೊರೆ ಹೋಗಿದ್ದರು. ಇದೀಗ ರಾಗಿಣಿಯವರು ಟ್ವೀಟ್ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಸ್ನೇಹಿತರೆ ನಟಿ ರಾಗಿಣಿಯವರು ಟ್ವಿಟರ್ ನಲ್ಲಿ ನನಗೆ ಪೊಲೀಸರು ವಿಚಾರಣೆಗೆ ಕರೆದಿರೋದು ನಿಜ. ಕಡಿಮೆ ಸಮಯದಲ್ಲಿ ನನಗೆ ನೋಟಿಸ್ ನೀಡಿರುವ ಹಿನ್ನೆಲೆ ನಾನು ವಿಚರಣೆಗೆ ಹಾಜರಾಗುತ್ತಿಲ್ಲ, ಪೊಲೀಸರು ನೀಡಿರುವ ನೋಟಿಸ್ ಗೆ ನಾನೊಬ್ಬ ಪ್ರಜೆಯಾಗಿ ನಾನು ವಿಚಾರಣೆಯಲ್ಲಿ ಭಾಗಿಯಾಗಲೇಬೇಕು. ಪೋಲೀಸರ ಮುಂದೆ ಮುಚ್ಚಿಡುವುದು ಏನೂ ಇಲ್ಲ. ಕಾನೂನು ವಿರುದ್ಧ ಚಟುವಟಿಕೆಗೆ ನನಗು ಇದಕ್ಕೂ ಏನು ಸಂಬಂಧ ಇಲ್ಲ. ಸಮಯ ಅಭಾವ ಕಾರಣ ನಾನು ಸೋಮವಾರದಂದು ಸಿಸಿಬಿ ವಿಚಾರಣೆಗೆ ಬರುತ್ತೇನೆ ಎಂದು ಹೇಳಿದ್ದಾರೆ.