Advertisements

ಪ್ರತಿದಿನ ದೇವಸ್ಥಾನಕ್ಕೆ ಬರುತ್ತಿದ್ದ ಮಹಿಳೆಯ ಕಷ್ಟವನ್ನು ನೋಡಿದ ಅರ್ಚಕ ಎಂಥಹ ಕೆಲಸ ಮಾಡಿದ್ದಾರೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಭವ್ಯ ಎಂಬ 26 ವಯಸ್ಸಿನ ಇನ್ನೂ ಮದುವೆಯಾದ ಯುವತಿಯೊಬ್ಬಳು ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತಿದ್ದಳು.. ಭವ್ಯ ಒಳ್ಳೆಯ ಗುಣವಂತಳಾಗಿದ್ದಳು. ದೇವರ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿದ್ದ ಭವ್ಯ ಪ್ರತಿದಿನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬರುತ್ತಿದ್ದಳು.. ಈಗೆ ದಿನನಿತ್ಯ ಭವ್ಯ ದೇವಸ್ತಾನಕ್ಕೆ ಬರುವಾಗ ದೇವಸ್ಥಾನದ ಆವರಣದ ಬಳಿ ಯುವಕರು ಮಹಿಳೆಯರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರು ಕೈಯಲ್ಲಿ ಒಂದು ಮೊಬೈಲ್ ಹಿಡಿದು ಯಾರ ಬಳಿಯೋ ಮಾತನಾಡುತ್ತಿದ್ದರು. ಅದರಲ್ಲೂ ಮಹಿಳೆಯರೇ ಹೆಚ್ಚಾಗಿ ಗುಂಪಾಗಿ ಕೂತು ಮೊಬೈಲ್ ಬಳಕೆ ಮಾಡುತ್ತಿದ್ದರು.. ಅದರಲ್ಲೂ ಈ ಮಹಿಳೆಯ ಗುಂಪು ಬೇರೆಯವರ ಬಗ್ಗೆ ತಪ್ಪು ತಪ್ಪಾಗಿ ತಾವೇನೋ ತುಂಬಾ ಒಳ್ಳೆಯವರಂತೆ ತುಂಬಾ ಕೆಲಸಕ್ಕೆ ಬಾರದಂತಹ ಮಾತುಗಳನ್ನು ಮಾತನಾಡುತ್ತಿದ್ದರು.

Advertisements

ಈ ರೀತಿಯಾಗಿ ಭವ್ಯ ದಿನನಿತ್ಯ ದೇವಸ್ಥಾನಕ್ಕೆ ಬಂದಾಗ ಇವರ ವರ್ತನೆಯನ್ನು ಗಮನಿಸುತ್ತಿದ್ದಳು.. ಇನ್ನೂ ಇವರ ವರ್ತನೆಯನ್ನು ನೋಡಿದ ಭವ್ಯ ದೇವಸ್ಥಾನದ ಮುಂದೆ ಕೂತು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಬೇಸರ ಮಾಡಿಕೊಳ್ಳುತ್ತಿದ್ದಳು. ಈಗೆ ಒಂದು ದಿನ ತನ್ನ ಬಗ್ಗೆಯೇ ಆ ಜನ ಮಾತನಾಡಿಕೊಳ್ಳುತ್ತಿರುವುದು ಭವ್ಯ ಅವರ ಕಿವಿಗೆ ಬೀಳುತ್ತದೆ.. ಭವ್ಯ ತನ್ನ ಸ್ನೇಹಿತನ ಜೊತೆ ದೇವಸ್ಥಾನದ ಹೊರಗೆ ಅಚಾನಕ್ ಆಗಿ ಸಿಕ್ಕಿ ಮಾತನಾಡುತ್ತಿರುವುದನ್ನು ನೋಡಿದ ಜನರು ಭವ್ಯ ಸರಿಯಿಲ್ಲ ತನ್ನ ಹುಡುಗನ ಜೊತೆ ಬಂದಿದ್ದಾಳೆ ಎಂದು ಭವ್ಯಾ ಅವರಿಗೆ ಕೇಳಿಸುವ ರೀತಿಯೇ ಮಾತನಾಡಿಕೊಳ್ಳುತ್ತಾರೆ.‌ ಇದನ್ನು ಕೇಳಿಸಿಕೊಂಡ ಭವ್ಯಾ ಅವರ ಕೋಪ ನೆತ್ತಿಗೇರಿತ್ತು.. ಇನ್ನೂ ಒಬ್ಬರು ಅಥವಾ ಇಬ್ಬರು ಆಗಿದ್ದರೆ ಅವರ ಹತ್ತಿರ ಮಾತನಾಡಬಹುದಾಗಿತ್ತು ಅಲ್ಲಿ ಗುಂಪು ಗುಂಪಾಗಿ ಇದ್ದದ್ದರಿಂದ ತಾನೆ ಬೇಸರ ಮಾಡಿಕೊಂಡು ಸುಮ್ಮನಾಗುತ್ತಾಳೆ.

ಹಾಗೆ ಇನ್ನು ಮುಂದೆ ದೇವಸ್ಥಾನಕ್ಕೆ ಬರಲೇ ಬಾರದು ಎಂದು ತಿರ್ಮಾನ ಮಾಡುತ್ತಾಳೆ.. ನಂತರ ಅದೇ ದಿನ ಅರ್ಚಕರ ಬಳಿ ಹೋಗಿ ದೇವರಿಗೆ ಪೂಜೆ ಮಾಡಿಸುತ್ತಾಳೆ. ಪೂಜೆ ಮುಗಿದ ನಂತರ ಭವ್ಯಾ ಅರ್ಚಕರ ಬಳಿ ನಾನು ಇನ್ನು ಮುಂದೆ ದೇವಸ್ಥಾನಕ್ಕೆ ಬರುವುದಿಲ್ಲ ಎಂದು ಹೇಳಿದಳು.. ಹಾಗ ಅರ್ಚಕರು ಏಕೆ ಏನಾಯ್ತು ಇನ್ನು ಮುಂದೆ ದೇವಸ್ಥಾನಕ್ಕೆ ಯಾಕೆ ಬರುವುದಿಲ್ಲ ಎಂದು ಕೇಳುತ್ತಾರೆ. ಆಗ ಜನರು ತನ್ನ ಬಗ್ಗೆ ಕೆಟ್ಟದಾಗಿ ಇಲ್ಲ ಸಲ್ಲದ ಮಾತುಗಳನ್ನು ಮಾತನಾಡಿಕೊಳ್ಳುತ್ತಿದ್ದಾರೆ.. ಈ ವಿಷಯ ನನ್ನ ಮನೆಯವರಿಗೆ ಗೊತ್ತಾದರೆ ನನ್ನ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಈ ಕಾರಣಕ್ಕೆ ನಾನು ಇನ್ನು ಮುಂದೆ ದೇವಸ್ಥಾನಕ್ಕೆ ಬರುವುದಿಲ್ಲ ಎಂದ ಅರ್ಚಕರ ಬಳಿ ಹೇಳಿದಳು.. ನಂತರ ಅರ್ಚಕರು ಭವ್ಯಾ ಅವರಿಗೆ ಇನ್ನು ಮುಂದೆ ನೀನು ದೇವಸ್ಥಾನಕ್ಕೆ ಬರುವುದು ಬೇಡ ನಿನ್ನ ತಿರ್ಮಾನ ನಿನ್ನದು..

ದಿನವೂ ನಿನ್ನನ್ನು ಗಮನಿಸುತ್ತಿದ್ದೇನೆ ನೀನು ತುಂಬಾ ಗುಣವಂತೆ ಒಳ್ಳೆಯ ಹುಡುಗಿ ಆದರೆ ನಿನ್ನಂತಹ ಹೆಣ್ಣು ಮಗುವಿಗೆ ಈ ರೀತಿ ನೋವಾಗಿರುವುದು ನನಗೂ ಕೂಡ ಬೇಸರ ತಂದಿದೆ.. ಈಗಾಗಿ ನಾನು ಒಂದೇ ಒಂದು ಕೆಲಸ ಹೇಳುತ್ತೇನೆ ನೀನು ಅದನ್ನು ಮಾಡ್ತಿಯಾ ಎಂದು ಅರ್ಚಕರು ಭವ್ಯಾ ಅವರಿಗೆ ಕೇಳುತ್ತಾರೆ. ಸ್ವಲ್ಪ ಮೌನವಾಗಿ ನಿಂತ ಭವ್ಯಾ ನಂತರ ಹೇಳಿ ನೀವು ಹೇಳಿದ ಕೆಲಸ ಮಾಡುತ್ತೇನೆ ಎಂದು ಹೇಳಿದಳು.. ಆಗ ಅರ್ಚಕರು ಒಂದು ಗಾಸ್ಲಿನ ಬಟ್ಟಲಿನಲ್ಲಿ ನೀರನ್ನು ತುಂಬಿ ಆ ನೀರು ತುಂಬಿದ ಗ್ಲಾಸಿನ ಬಟ್ಟಲನ್ನು ಕೈಯಲ್ಲಿ ಹಿಡಿದು ಒಂದೇ ಒಂದು ಚೂರು ಕೂಡ ಬಟ್ಟಲೊಳಗೆ ನೀರು ಕೆಳಗೆ ಬೀಳದಂತೆ ಈ ದೇವಸ್ಥಾನದಲ್ಲಿ ಮೂರು ಪ್ರದಕ್ಷಿಣೆ ಹಾಕಿಕೊಂಡು ಬಾ ಎಂದು ಹೇಳುತ್ತಾರೆ. ಆಗ ಭವ್ಯಾ ಈ ಕೆಲಸ ನನ್ನ ಕೈಯಲ್ಲಿ ಆಗುತ್ತದೆ ಎಂದು ಹೇಳಿ ತುಂಬಿದ ಬಟ್ಟಲನ್ನು ತನ್ನ ಎರಡು ಕೈಯಲ್ಲಿ ಹಿಡಿದು ಪ್ರದಕ್ಷಿಣೆ ಹಾಕಲು ಶುರುಮಾಡಿದಳು..

ಮೂರು ಬಾರಿ ಪ್ರದಕ್ಷಿಣೆ ಹಾಕಿದ ಭವ್ಯಾ ನೀರು ಕೆಳಗೆ ಬೀಳದಾಗೆ ತುಂಬಾ ಬ್ಯಾಲೆನ್ಸ್ ಮಾಡಿದಳು. ಇವೆಲ್ಲವನ್ನು ನೋಡುತ್ತಾ ನಿಂತಿದ್ದ ಅರ್ಚಕರು ಭವ್ಯಾಳ ಬಳಿ ಬಂದು ಮೂರು ಬಾರು ಪ್ರದಕ್ಷಿಣೆ ಮುಗಿತಾ ಎಂದು ಕೇಳಿದರು.. ಆಗ ಭವ್ಯಾ ಪ್ರದಕ್ಷಿಣೆ ಹಾಕಿದೆ ಒಂದು ಚೂರು ನೀರು ಕೆಳಗೆ ಚೆಲ್ಲಲಿಲ್ಲ ಎಂದ ಹೇಳಿದಳು. ಹೌದು ನಾನು ಎಲ್ಲವನ್ನೂ ನೋಡುತ್ತಿದ್ದೆ ನೀನು ತುಂಬಾ ಚೆನ್ನಾಗಿ ನೀರನ್ನು ಚೆಲ್ಲದೇ ಬ್ಯಾಲೆನ್ಸ್ ಮಾಡಿದ್ದಿಯಾ ಎಂದು ಹೇಳುತ್ತಾರೆ. ಇನ್ನೂ ನಿನ್ಮ ಹತ್ತಿರ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ ಅದಕ್ಕೆ ನೀರು ಸರಿಯಾಗಿ ಉತ್ತರವನ್ನು ಕೊಡಬೇಕು ಎಂದು ಅರ್ಚಕರು ಭವ್ಯ ಅವರಿಗೆ ಕೇಳಿದರು.. ಆಗ ಭವ್ಯಾ ಕೂಡ ಉತ್ತರವನ್ನು ಕೊಡುತ್ತೇನೆ ನೀವು ಪ್ರಶ್ನೆಗಳನ್ನು ಕೇಳಿ ಅಂದಳು. ಕೈಯಲ್ಲಿ ನೀರಿನ ಬಟ್ಟಲನ್ನು ಹಿಡಿದು ದೇವಸ್ಥಾನ ಸುತ್ತಿ ಬರುವಾಗ ಯಾರಾದರೂ ಕೈಯಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತಿರುವುದನ್ನು ನೀನು ನೋಡಿದೆಯಾ..

ಆಗ ನಿನ್ನ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದ್ದನ್ನು ನೀನು ಕೇಳಿಸಿಕೊಂಡೆಯಾ ಮತ್ತೆ ನಿನ್ನನ್ನು ಯಾರಾದರೂ ವ್ಯಂಗ್ಯವಾಗಿ ರೇಗಿಸುವುದನ್ನು ನೀನು ಕಂಡೆಯಾ ಎಂದು ಅರ್ಚಕರು ಭವ್ಯಾ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ಭವ್ಯ ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲ ಎನ್ನುವ ಉತ್ತರವನ್ನು ಕೊಡುತ್ತಾಳೆ. ಆಗ ಅರ್ಚಕರು ನಿನ್ನ ಗಮನವೆಲ್ಲಾ ಆ ನೀರಿ‌ನ ಬಟ್ಟಲಿನ ಮೇಲೆ ಇತ್ತು ನಿನ್ನ ಗಮನವೆಲ್ಲಾ ನೀರು ಬಟ್ಟಲಿನಿಂದ ಕೆಳಗೆ ಬೀಳ ಬಾರದೆಂಬ ವಿಷಯ ತುಂಬಿಕೊಂಡಿದ್ದರಿಂದ ನೀನು ಬೇರೆಯವರು ಏನು ಮಾಡುತ್ತಿದ್ದಾರೆ ಎಂಬ ವಿಷಯವನ್ನು ಗಮನಿಸಲೇ ಇಲ್ಲಾ.. ಇದೇ ಕಾರಣಕ್ಕೆ ದೇವಸ್ಥಾನದ ಹೊಳಗೆ ಇರುವ ಜನರು ನಿನ್ನನ್ನು ನೋಡುತ್ತಿದ್ದರು ನಿನ್ನ ಬಗ್ಗೆ ಮಾತನಾಡುತ್ತಿದ್ದರು.. ನೀನು ಅವರ ಬಗ್ಗೆ ಗಮನ ಕೊಡದೇ ನಿನ್ನ ಕೆಲಸವನ್ನು ನೀನು ಮಾಡುತ್ತಿದ್ದೆ. ಇಗಾಗಿ ಅವರೆಲ್ಲರೂ ನಿನ್ನ ಕಣ್ಣು ಮುಂದೆ ಇದ್ದರು ನಿನಗೆ ಅವರು ಯಾರು ಕಾಣಿಸಲೇ ಇಲ್ಲ..

ನೀನು ಅವರ ಬಗ್ಗೆ ಗಮನ ಕೊಡದೇ ನಿನ್ನ ಕೆಲಸವನ್ನು ನೀನು ಮಾಡುತ್ತಿದ್ದೆ. ಇಗಾಗಿ ಅವರೆಲ್ಲರೂ ನಿನ್ನ ಕಣ್ಣು ಮುಂದೆ ಇದ್ದರು ನಿನಗೆ ಅವರು ಯಾರು ಕಾಣಿಸಲೇ ಇಲ್ಲ.. ಅದೇ ರೀತಿ ನೀನು ಇನ್ನು ಮುಂದೆ ದೇವಸ್ಥಾನಕ್ಕೆ ಬರುವಾಗ ದೇವರ ಬಗ್ಗೆ ನೆನಪಿಸಿಕೊಂಡು ಬಾ ನಿನ್ನ ಗಮನವೆಲ್ಲಾ ದೇವರ ಮೇಲೆ ಇರಲಿ ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲಿ ಅದರ ಬಗ್ಗೆ ನೀನು ಗಮನವೇ ಕೊಡಬೇಡ ಆಗ ಅವರ ಮಾತುಗಳು ನಿನಗೆ ಕೇಳಿಸುವುದಿಲ್ಲ ಎಂದು ಭವ್ಯ ಅವರಿಗೆ ಬುದ್ದಿ ಮಾತನ್ನು ಹೇಳುತ್ತಾರೆ. ಆಗ ಭವ್ಯ ಈಗ ನನಗೆಲ್ಲಾ ಅರ್ಥವಾಯಿತು ಎಂದು ಹೇಳಿ ಮತ್ತೆ ದೇವಸ್ತಾನಕ್ಕೆ ಪ್ರತಿದಿನ ಬರಲು ಶುರುಮಾಡಿದಳು ಆಗ ಅಕ್ಕಪಕ್ಕದ ಜನಗಳ ಮಾತಿನ ಕಡೆ ಗಮನ ನೀಡದೆ ದೇವರ ದರ್ಶನ ಮಾಡುತ್ತಿದ್ದಳು.. ಸ್ನೇಹಿತರೆ ಈ ಕತೆಯಲ್ಲಿ ಬಾವು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಜನಗಳು ನಮ್ಮ ಬಗ್ಗೆ ಎಷ್ಟೇ ಕೆ’ಟ್ಟದಾಗಿ ಮಾತನಾಡಿಕೊಳ್ಳಲಿ ನಮ್ಮ ಗಮನವೆಲ್ಲಾ ಗುರಿಯ ಕಡೆಗೆ ಇರಬೇಕೆ ಹೊರತು ಇಂತಹ ಕೆಲಸಕ್ಕೆ ಬಾರದಂತಹ ಜನಗಳ ಕಡೆಗೆ ಅಲ್ಲಾ.