Advertisements

ಮೊಮ್ಮಗಳಿಗೆ ಚಿನ್ನ ಕೊಳ್ಳಲು ಹೋದ ಅಜ್ಜೀನ ಚೀಪ್ ಆಗಿ ನೋಡಿ ಅವಮಾನ ಮಾಡಿದರು.. ಮುಂದೆ ಏನಾಯ್ತು ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಕೆಲವು ಜನರು ಇನ್ನೊಬ್ಬ  ವ್ಯಕ್ತಿ ನೋಡಲು ಶ್ರೀಮಂತಿಕೆ ಹಾಗು ಒಳ್ಳೆಯ ಡ್ರೆಸ್ ಅನ್ನು ಹಾಕಿದ್ದರೆ ಅವರಿಗೆ ತುಂಬಾ ಗೌರವ ಕೊಡುತ್ತಾರೆ.. ಆದರೆ ಇನ್ನೊಬ್ಬ ವ್ಯಕ್ತಿ ನೋಡಲು ಬಡವನಂತೆ ಇದ್ದು ಹಳೆಯ ಬಟ್ಟೆಯನ್ನು ಹಾಕಿದ್ದರೆ ಅವರಿಗೆ ಯಾವುದೇ ಗೌರವವನ್ನು ಕೊಡುವುದಿಲ್ಲ. ಈಗಿನ ಸಮಾಜದ ಪರಿಸ್ಥಿತಿ ಇದೇ ಹಾಗಿದೆ. ಹಣ, ಆಸ್ತಿ, ಶ್ರೀಮಂತಿಕೆಯನ್ನು ನೋಡಿ ಇನ್ನೊಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವಂತಹ ಕಾಲವಿದು.. ಇದೇ ರೀತಿ ಒಬ್ಬ ಮಹಿಳೆ ಚೆನ್ನೈನ ಒಂದು ಸಿಟಿಯಲ್ಲಿ ಅವರು ನೋಡುವದಕ್ಕೆ ಬಡತನ ಹಾಗು ಹಳೆಯ ಬಟ್ಟೆಯನ್ನು ಹಾಕಿದ್ದ ಕಾರಣದಿಂದ ಅವರಿಗೆ ಅವಮಾನ ಮಾಡಿದಂತಹ ಘ’ಟನೆ ನಡೆದಿದೆ..

Advertisements

ಕೊಯಮತ್ತೂರು ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ 60 ವರ್ಷದ ಚಿನ್ನಮ್ಮ ಎಂಬುವವರು ವಾಸವಾಗಿದ್ದಾರೆ.. ಚಿನ್ನಮ್ಮನ ಜೊತೆ ಗಂಡ ಮಗ, ಸೊಸೆ, ಮೊಮ್ಮಕ್ಕಳು ಇದ್ದು ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.. ಈಗೆ  ಒಂದು ದಿನ ಚಿನ್ನಮ್ಮ ಮೊಮ್ಮಗಳಿಗೆ ಚಿನ್ನದ ಸರವೊಂದನ್ನು ಕೊಡಿಸಬೇಕೆಂದು ಜ್ಯೂವೆಲೆರಿ ಶಾಪ್ ಗೆ ಹೋಗುತ್ತಾರೆ.. ಚಿನ್ನಮ್ಮ ಈ ಹಿಂದೆಯೂ ಕೂಡ ಹಲವು ಬಾರಿ ಇದೇ ಜ್ಯೂವೆಲೆರಿ ಶಾಪ್ ನಲ್ಲಿ ಒಡವೆಯನ್ನು ಖರೀದಿ ಮಾಡಿದ್ದರು.. ಇದೇ ಕಾರಣಕ್ಕೆ ಚಿನ್ನಮ್ಮ ಅವರು ಈ ಜ್ಯೂವೆಲೆರಿ ಶಾಪ್ ನಲ್ಲಿ ಮೊಮ್ಮಗಳಿಗೆ ಚಿನ್ನದ ಸರವನ್ನು ಕೊಳ್ಳಲು ಬಂದಿದ್ದಾರೆ.. ಈ ಜ್ಯೂವೆಲೆರಿ ಶಾಪ್ ನೋಡಲು ಅಷ್ಟೇನು ದೊಡ್ಡದಾಗಿರಲಿಲ್ಲ ಸಾಮಾನ್ಯವಾಗಿ ಚಿಕ್ಕ ಜ್ಯೂವೆಲೆರಿ ಶಾಪ್ ಆಗಿತ್ತು..

ಚಿನ್ನಮ್ಮ ಅವರು ಈ ಜ್ಯೂವೆಲೆರಿ ಶಾಪ್ ಗೆ ಹೋದಾಗ ಯಾರೂ ಕೂಡ ಅಜ್ಜಿಯ ಕಡೆ ತಿರುಗಿ ನೋಡಲೇ ಇಲ್ಲ.. ಅಜ್ಜಿಯು ನೋಡಲು ತುಂಬಾ ಬಡತನ, ಹಾಗು ಹಳೆಯ ಡ್ರೆಸ್ ಆಕಿದ್ದರು ಈ ಕಾರಣದಿಂದ ಅವರ ಕಡೆಗೆ  ಸೇಲ್ಸ್ ಮ್ಯಾನ್ ಗಳು ಗಮನ ಕೊಡಲಿಲ್ಲ.. ಜ್ಯೂವೆಲೆರಿ ಶಾಪ್ ಗೆ ಈ ಮೊದಲೇ ತುಂಬಾ ಜನ ಬಂದಿದ್ದರಿಂದ ಅವರೆಲ್ಲ ತೆಗೆದುಕೊಂಡು ಹೋದಮೇಲೆ ಒಡವೆ ತೆಗೆದುಕೊಳ್ಳೋಣ ಎಂದು ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತು ಕಾಯುತ್ತಾರೆ.. ಚಿನ್ನಮ್ಮ ಅವರು ಕುರ್ಚಿಯ ಮೇಲೆ ಕುಳಿತು ಯಾರಾದರೂ ಅಳೆಯ ಸೇಲ್ಸ್ ಮ್ಯಾನ್  ಇದ್ದಾರಾ ಎಂದು ನೋಡುತ್ತಾರೆ ಆದರೆ ಅಲ್ಲಿ ಇದ್ದವರೆಲ್ಲಾ ಹೊಸದಾಗಿ ಬಂದಿದ್ದ ಸೇಲ್ಸ್ ಮ್ಯಾನ್ ಗಳಾಗಿದ್ದರು..

ಏಕೆಂದರೆ ಕಳೆದ ಬಾರಿ ಒಡವೆ ತೆಗೆದುಕೊಳ್ಳಲು ಬಂದಾಗ ಇವರು ಯಾರು ಕೂಡ ಇರಲಿಲ್ಲ, ಹಾಗೆ ಈ ಹೊಸದಾಗಿ ಬಂದ ಸೇಲ್ಸ್ ಮ್ಯಾನ್ಸ್ ಅಜ್ಜಿ ಚಿನ್ನಮ್ಮ ಅವರನ್ನು ತುಂಬಾ ಚೀಪಾಗಿ ನೋಡುತ್ತಿದ್ದರು.. ಸ್ವಲ್ಪ ಸಮಯದ ಬಳಿಕ ಜ್ಯೂವೆಲೆರಿ ಶಾಪ್ ಗೆ ಬಂದಿದ್ದ ಜನರು ಎಲ್ಲಾ ಹೊರಟು ಹೋಗುತ್ತಾರೆ.. ನಂತರ ಅಜ್ಜಿ ಒಡವೆ ಕೊಂಡುಕೊಳ್ಳೋಣ ಎಂದು ಸೇಲ್ಸ್ ಮ್ಯಾನ್ ಅತ್ತಿರ ಹೋಗುತ್ತಾರೆ.. ಅದೇ ಸಮಯಕ್ಕೆ ಬಂದ ಮಾಡರ್ನ್‌ ಮಹಿಳೆಯೊಬ್ಬರಿಗೆ ಒಡವೆಗಳನ್ನು ತೋರಿಸಲು ಎಲ್ಲರೂ ಮುಗಿಬೀಳುತ್ತಾರೆ.. ಇದನ್ನು ನೋಡಿದ ಚಿನ್ನಮ್ಮಾ ಅವರಿಗೆ ಅವಮಾನವಾಗುತ್ತದೆ.. ಮತ್ತೆ ಚಿನ್ನಮ್ಮ ಅವರು ಕುರ್ಚಿಯ ಮೇಲೆ ಕೂತು ಕಾಯುತ್ತಿರುತ್ತಾರೆ..

ಇನ್ನು ಜ್ಯೂವೆಲೆರಿ ಶಾಪ್ ನಲ್ಲಿ ಇದ್ದ ಕ್ಯಾಮರಾನಲ್ಲಿ ನಡೆದ ಘ’ಟನೆಯನ್ನು ನೋಡುತ್ತಿದ್ದ ಓನರ್ ಹೊರಗೆ ಬಂದು ಸೇಲ್ಸ್ ಮ್ಯಾನ್ ಗಳನ್ನು ಚಿನ್ನಮ್ಮ ಇದ್ದ ಜಾಗಕ್ಕೆ ಬನ್ನಿ ಎಂದು ಹೇಳುತ್ತಾರೆ.. ಕೆಲಸಗಾರರು ಬಂದ ನಂತರ ಓನರ್ ಚಿನ್ನಮ್ಮರಿಗೆ ಏಕೆ ನೀವು ಒಡವೆಗಳನ್ನು ತೋರಿಸಲಿಲ್ಲ ಎಂದು ಕೇಳುತ್ತಾರೆ.. ಆಗ ಸೇಲ್ಸ್ ಮ್ಯಾನ್ ಒಬ್ಬ ಮಹಿಳೆ ಬಂದು ಇಂತಹವರಿಗೆಲ್ಲ ಒಡವೇ ತೊರಿಸೋದು ವೇಸ್ಟ್, ಇವರನ್ನು ನೋಡಿದ್ರೇನೆ ಗೊತ್ತಾಗುತ್ತೆ ಒಡವೆ ಕೊಂಡುಕೊಳ್ಳುವ ಮುಖ ಅಲ್ಲ.. ಸುಮ್ಮನೆ ಕಾಲ ಕಳೆಯಲು ಬಂದಿರಬೇಕು ಈಗಾಗಿ ನಾವು ಚಿನ್ನಮ್ಮರಿಗೆ ಒಡವೆ ತೋರಿಸಲಿಲ್ಲ ಎಂದು ಹೇಳುತ್ತಾರೆ..

ಈ ಮಹಿಳೆ ಮಾತುಗಳನ್ನು ಕೇಳಿದ ಓನರ್ ಗೆ ತುಂಬಾ ಕೋಪ ಬಂದು ಮುಖ ನೋಡಿಕೊಳ್ಳುವ ಹಾಗೆ ಬೈದಿದ್ದಾರೆ.. ವ್ಯಕ್ತಿಯ ಬಡತನ, ಅವರ ವೇಷಭೂಷಣ ನೋಡಿ ಅಳೆಯಬೇಡಿ..‌ ಚಿನ್ನಮ್ಮ ಅವರು ನಮ್ಮ ಅಂಗಡಿಗೆ ರೆಗ್ಯುಲರ್ ಕಸ್ಟಮರ್ ಎಂದು ಹೇಳಿ ಸೇಲ್ಸ್ ಮ್ಯಾನ್ಸ್ ಮಾಡಿದ ತಪ್ಪಿಗೆ ಅಜ್ಜಿ ಚಿನ್ನಮ್ಮ ಹತ್ತಿರ ಓನರ್ ಕ್ಷಮೆಯನ್ನು ಕೇಳುತ್ತಾರೆ.. ನಂತರ ಚಿನ್ನಮ್ಮ ಅವರಿಗೆ ಸೇಲ್ಸ್ ಮ್ಯಾನ್ಸ್ ಒಡವೆಯನ್ನು ತೋರಿಸಿ ಅವರಿಗೆ ಇಷ್ಟವಾದ ಸರವನ್ನು ಕೊಡುತ್ತಾರೆ.. ನಂತರ ಚಿನ್ನಮ್ಮ ಚಿನ್ನದ ಸರವನ್ನು ತೆಗೆದುಕೊಂಡು ಮನೆಗೆ ತೆರಳುತ್ತಾರೆ.. ಸ್ನೇಹಿತರೆ ಈ ಸ್ಟೋರಿಯನ್ನ ಕೇಳಿದ ನಿಮಗೆ ಏನನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ..