Advertisements

ಇಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಪುನಿತ್ ರಾಜಕುಮಾರ್.. ಏನದು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕುತ್ತಿರುವ ಪುನಿತ್ ರಾಜ್ ಕುಮಾರ್ ಅವರ ಸರಳತೆಯ ಬಗ್ಗೆ ಎಷ್ಟು ಹೇಳಿದರು ಕಡಿಮೆ.. ಡಾ.ರಾಜ್ ಕುಮಾರ್ ಅವರು ಸರಳತೆಯಲ್ಲಿ ಶ್ರೇಷ್ಠತೆ ಮೆರೆದಂತಹ ನಟ. ಈಗ ಪುನಿತ್ ರಾಜಕುಮಾರ್ ಅವರು ಸಹ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ನಾನೊಬ್ಬ ಸೂಪರ್‌ ಸ್ಟಾರ್ ಎನ್ನುವ ಅ’ಹಂ ಅವರಲ್ಲಿ ಕಂಡಿಲ್ಲ. ಅದನ್ನೇ ಮತ್ತೆ ಮತ್ತೆ ಸಾಬೀತು ಮಾಡುತ್ತಿರುವುದು ಅವರ ಗುಣಗಳು.. ಪುನೀತ್ ರಾಜ್‍ಕುಮಾರ್ ಅವರು ಒಬ್ಬ ನಟ ಎನ್ನುವುದಕ್ಕಿಂತ ಹೆಚ್ಚಾಗಿ ಅವರು ಒಬ್ಬ ಒಳ್ಳೆಯ ಮನಸ್ಸಿ‌ನ ವ್ಯಕ್ತಿ ಅನ್ನುವ ಕಾರಣಕ್ಕಾಗಿಯೇ ಎಲ್ಲರು ಪುನಿತ್ ರಾಜ್ ಕುಮಾರ್ ಅವರನ್ನು ಇಷ್ಟ ಪಡುತ್ತಾರೆ.

Advertisements

ಇನ್ನೂ ಪುನಿತ್ ರಾಜ್ ಕುಮಾರ್ ಅವರು ಇಂದು ಜನ್ಮ ದಿನದ ಸಂಭ್ರಮದಲ್ಲಿ ಇದ್ದಾರೆ‌.. ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅವರು ಇಂದು 47 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಪ್ರತಿವರ್ಷ ಪುನಿತ್ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಕೇಕ್ ಕ’ಟ್ ಮಾಡಲು ಅಪ್ಪು ಅಭಿಮಾನಿಗಳು ಪುನಿತ್ ರಾಜಕುಮಾರ್ ಅವರ ಮನೆಯ ಮುಂದೆ ಸಾಗರ ರೂಪದಲ್ಲಿ ಅಭಿಮಾನಿಗಳು ಸೇರುತ್ತಿದ್ದರು.. ಆದರೆ ಈ ಬಾರಿ ಅದೆಲ್ಲದಕ್ಕು ಚೀನಾ ಖಾ’ಯಿಲೆ ಬ್ರೇಕ್ ಆಕಿದೆ. ಇನ್ನೂ ಪುನಿತ್ ರಾಜಕುಮಾರ್ ಅವರು ಹುಟ್ಟು ಹಬ್ಬವನ್ನು ಪ್ಯಾಮಿಲಿ ಜೊತೆ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ.. ಹುಟ್ಟು ಹಬ್ಬದ ಬರ್ಜರಿ ಉಡುಗೊರೆಯಾಗಿ ಪುನಿತ್ ಅವರ ಜೇಮ್ಸ್ ಚಿತ್ರದ ಪಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.

ಇನ್ನೂ ಪುನಿತ್ ರಾಜ್ ಕುಮಾರ್ ಅವರು ವರ್ಷಕ್ಕೊಂದು ಸಿನಿಮಾ ಮಾಡಿದರು ಅದು ಸೂಪರ್ ಹಿಟ್ ಸಿನಿಮಾ ಆಗುತ್ತದೆ.. ಆದರೆ ಈ ವರ್ಷ ಮಾತ್ರ ಒಂದೇ ವರ್ಷದಲ್ಲಿ ಮೂರು, ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಅಪ್ಪು ಅವರು. ಇನ್ನೂ ನೆನ್ನೆಯಷ್ಟೇ ವರುಣ್ ಸ್ಟುಡಿಯೋದಿಂದ ಅಪ್ಪು ಅಟ್ 47 ಎನ್ನುವ ಆಲ್ಬಮ್ ಕೂಡ ಬಿಡುಗಡೆಯಾಗಿದೆ.. ಇನ್ನೂ ಇಂದು ಜನ್ಮ ದಿನದ ಸಂಭ್ರಮದಲ್ಲಿ ಇರುವ ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯೇ ಬಂದಿದೆ.

ಕೇವಲ ಅಭಿಮಾನಿಗಳು ಅಷ್ಟೇ ಅಲ್ಲದೇ ಸ್ಯಾಂಡಲ್ವುಡ್ ನ ದಿಗ್ಗಜರು ಕೂಡ ಶುಭಾಶಯ ಕೋರಿದ್ದಾರೆ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳು ಪುನಿತ್ ರಾಜಕುಮಾರ್ ಎಂದು ಶುಭಕೋರಿದ್ದಾರೆ. ಇನ್ನೂ ಸ್ಯಾಂಡಲ್ವುಡ್ ನಲ್ಲಿ ಕಿಚ್ಚ ಸುದೀಪ್ ಹಾಗು ಪುನಿತ್ ರಾಜಕುಮಾರ್ ಅವರ ಜೋಡಿ ಅಚ್ಚುಮೆಚ್ಚು, ಜೊತೆಗೆ ಅವರಿಬ್ಬರು ಕೂಡ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.. ಈಗಾಗಿ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡುವ ಮೂಲಕ ಹುಟ್ಟ ಹಬ್ಬದ ಶುಭಾಶಯಗಳು ಕೋರಿದ್ದಾರೆ. ಇನ್ನೂ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಸಿನಿಮಾ ಎಪ್ರಿಲ್ ಒಂದರಲ್ಲಿ ಬಿಡುಗಡೆಯಾಗಲಿದೆ.