Advertisements

ಇಂದು ದಿಡೀರ್ ಎಂದು ಗುಡ್ ನ್ಯೂಸ್ ಕೊಟ್ಟ ರಾಗಿಣಿ ಪ್ರಜ್ವಲ್! ಸಂತಸದಲ್ಲಿ ದೇವರಾಜ್ ಕುಟುಂಬ..

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ ಕ್ಯೂಟ್ ಜೋಡಿಗಳಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದನ್ ಕೂಡ ಒಬ್ಬರು. ಇವರಿಬ್ಬರೂ ಸುಮಾರು 8 ವರ್ಷಗಳ ಕಾಲ ಪ್ರೀತಿಸಿ ಮನೆಯ ಒಪ್ಪಿಗೆಯನ್ನು ಪಡೆದು ಅದ್ದೂರಿಯಾಗಿ ಮದುವೆಯಾಗಿದ್ದರು.. ಇದೀಗ ಮದುವೆಯಾಗಿ 5 ವರ್ಷಗಳ ನಂತರ ರಾಗಿಣಿ ಪ್ರಜ್ವಲ್ ಅವರು ಬರ್ಜರಿ ಸಿಹಿ ಸುದ್ದಿ ಒಂದನ್ನ ಕೊಟ್ಟಿದ್ದಾರೆ.. ಹಾಗಾದರೆ ಆ ಗುಡ್ ನ್ಯೂಸ್ ಏನೆಂದು ನೋಡೊಣ ಬನ್ನಿ. ನಟ ಪ್ರಜ್ವಲ್ ದೇವರಾಜ್ ಅವರು ತಮ್ಮ ಮಡದಿ ರಾಗಿಣಿ ಪ್ರಜ್ವಲ್ ಅವರನ್ನು ತುಂಬಾ ಪ್ರೀತಿಸುತ್ತಾರೆ..

Advertisements

ಅವರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಇಬ್ಬರೂ ಸೇರಿ ವರ್ಕೌಟ್ ಮಾಡೋದು, ಡ್ಯಾನ್ಸ್ ಮತ್ತು ಪ್ರವಾಸದ ಪೊಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇನ್ನೂ ಇವರಿಬ್ಬರ ಜೋಡಿಯನ್ನ ನೋಡಿದ ಅಭಿಮಾನಿಗಳು ನೀವಿಬ್ಬರೂ ಯಾಕೆ ಒಂದೇ ಸಿನಿಮಾದಲ್ಲಿ ನಟಿಸಬಾರದು ಎಂದು ಕೇಳ್ತಾಯಿದ್ದರು.. ಇದೀಗ ರಾಗಿಣಿ ಪ್ರಜ್ವಲ್ ಅವರು ಪ್ರಜ್ವಲ್ ಜೊತೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಪ್ರಜ್ವಲ್ ನಟನೆಯ ಇನ್ಸ್ಪೆಕ್ಟರ್ ವಿಕ್ರಂ‌ ಚಿತ್ರ ಪೆಬ್ರವರಿ 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು.. ಈ ಚಿತ್ರದಲ್ಲಿ ರಾಗಿಣಿ ಕೂಡ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಾತ್ರದ ಮೂಲಕ ಪ್ರಜ್ವಲ್ ಮತ್ತು ರಾಗಿಣಿಯವರನ್ನ ಒಂದೇ ಪರದೆಯ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ.. ಇನ್ನೂ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿಯ ಜೋಡಿ ಹೇಗಿದೆ ಎಂದು ತಿಳಿಸಿ.