Advertisements

ಬಿಗ್ ಬಾಸ್ ಪ್ರಶಾಂತ್ ಅವರು ನಿಜಕ್ಕೂ ಯಾರು, ಜನತೆಗೆ ಹೆಚ್ಚಾಗಿ ಪರಿಚಯ ಆಗಿದ್ದು ಹೇಗೆ.. ಇವರು ಮಾಡುವ ಕೆಲಸ ಏನು ಗೊತ್ತಾ?

Cinema Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಆಟ ಆಡುತ್ತಿರುವವರಲ್ಲಿ ಪ್ರಶಾಂತ್ ಸಂಬರಗಿ ಅವರು ಕೂಡ ಒಬ್ಬರು.. ಒಂದು ರೀತಿಯಲ್ಲಿ ಫೈ’ರ್ ಮ್ಯಾನ್ ಆಗಿ ಆಟ ಆಡುತ್ತಿದ್ದಾರೆ. ಇವರು ನೇರ ಮಾತು ಜೊತೆಗೆ ಕೆಲವೊಂದು ಇಲ್ಲ ಸಲ್ಲದ ಮಾತು, ವಿವಾದಾತ್ಮಕ ಹೇಳಿಕೆ ಎಲ್ಲದರಿಂದಲೂ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಇನ್ನೂ ಪ್ರಶಾಂತ್ ಸಂಬರಗಿ ಪ್ಯಾಮಿಲಿ ಹೇಗಿದೆ ಅಂತ ನೋಡೋಣ ಬನ್ನಿ. ಪ್ರಶಾಂತ್ ಸಂಬರಗಿ ಅವರು ಒಬ್ಬ ಸಾಮಾಜಿಕ ಹೋರಾಟಗಾರ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ.. ಇವರು ಕರ್ನಾಟಕ ಜನತೆಗೆ ಹೆಚ್ಚಾಗಿ ಗೊತ್ತಾಗಿದ್ದು ಯಾವ ಸಂದರ್ಭದಲ್ಲಿ ಅಂದರೆ.. ಸ್ಯಾಂಡಲ್ವುಡ್ ನಲ್ಲಿ ಡ್ರ’,ಗ್ ಮಾ’ಫಿ’ಯಾ ಕೇ’ಸ್ ನಲ್ಲಿ.

Advertisements

ಈ ಸಮಯದಲ್ಲಿ ಪ್ರಶಾಂತ್ ಸಂಬರಗಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರ ಜನತೆಗೆ ಪರಿಚಿತರಾದರು. ಚಲನಚಿತ್ರ ರಂಗವನ್ನೇ ಜಾಲಾಡಿ ಅಲ್ಲಾಡಿಸಿ ಬಿಟ್ಟಿದ್ದರು.. ಈ ಪ್ರಶಾಂತ್ ಸಂಬರಗಿ ಅವರ ಪೂರ್ತಿ ಹೆಸರು ವೀರ ಪ್ರಶಾಂತ್ ಸಂಬರಗಿ.. ಇವರು ಸಾಮಾಜಿಕ ಹೋರಾಟಗಾರ ಅಷ್ಟೇ ಅಲ್ಲಾ ಒಬ್ಬ ಬ್ಯುಸಿನೆಸ್ ಮ್ಯಾನ್ , ಪ್ರೊಡಿಸರ್ ಸಿನಿಮಾ ಡಿಸ್ಟಿಬ್ಯೂಟರ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ. ಮೂಲತಃ ಬೆಳಗಾವಿಯಲ್ಲಿ ಜನಸಿದ ಪ್ರಶಾಂತ್ ಸಂಬರಗಿ ಅವರು ಓದಿನಲ್ಲಿ ಮುಂದಿದ್ದು ಎಂಬಿಎ ಪದವಿಯನ್ನು ಪಡೆದಿದ್ದಾರೆ. ಇನ್ನೂ ಸ್ಟಾರ್ ನಟ ಉಪೇಂದ್ರ ಅವರನ್ನ ಕನ್ನಡ ಸಿನಿಮಾ ಅಕಾಡೆಮಿ ರಾಯಭಾರಿಯನ್ನಾಗಿ ಮಾಡಲು ಇವರೇ ಕಾರಣ ಎನ್ನಲಾಗಿದೆ..

ನಟ ಅರ್ಜುನ್ ಸರ್ಜಾ ಅವರ ಕಟ್ಟ ಅಭಿಮಾನಿಯಾಗಿರುವ ಪ್ರಶಾಂತ್ ಅವರು ಅವರಿಗೆ ಮೀಡಿಯಾ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದಾರೆ. ಪ್ರಶಾಂತ್ ಸಂಬರಗಿ ಅವರಿಗೆ ಮದುವೆಯಾಗಿದ್ದು ಮುದ್ದಿನ ಮಡದಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ.. ಇನ್ನೂ ಬೆಂಗಳೂರಿನಲ್ಲಿ ನೆಲೆಸಿರುವ ಪ್ರಶಾಂತ್ ಅವರು ತನ್ನ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ಇದರ ಜೊತೆಗೆ ಸಿನಿಮಾ ದಿಗ್ಗಜರ ಒಡನಾಟ ಇಟ್ಟುಕೊಂಡಿದ್ದಾರೆ. ಮನೆಯಲ್ಲಿ ಯಾರು ಕೂಡ ಇವರ ಮಾತಿಗೆ ಮಾತು ಕೊಡಲು ಆಗದಿರುವ ಪ್ರಶಾಂತ್ ಸಂಬರಗಿ ಅವರು ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳವರೆಗೆ ಇದ್ದರು ಅಚ್ಚರಿಯಿಲ್ಲ ಅನಿಸುತ್ತದೆ.. ಇನ್ನೂ ಇವರು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ಹಾಗೂ ಇವರ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ತಿಳಿಸಿ.