ಉಗ್ರಂ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಶಾಂತ್ ನೀಲ್ ಒಂದೇ ಒಂದು ಕೆಜಿಎಫ್ ಚಿತ್ರದ ಮೂಲಕ ಸ್ಟಾರ್ ನಿರ್ದೇಶಕರಾಗಿ ಬದಲಾದರು. ಇನ್ನು ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ದಿಕ್ಕೇ ಬದಲಾದದ್ದು ಇತಿಹಾಸ.

ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದ ಕಡೆ ಎದುರು ನೋಡುವಂತೆ ಮಾಡಿದ ಕೆಜಿಎಫ್ ಭಾಗ 1 ಚಿತ್ರದ ಬಳಿಕ, KGF ಭಾಗ 2 ಬಿಡುಗಡೆಗೆ ರೆಡಿಯಾಗಿದ್ದು, ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದೆ. ಇನ್ನು ಇದರೆಲ್ಲದರ ನಡುವೆ ಟಾಲಿವುಡ್ ನ ಸ್ಟಾರ್ ನಟನಿಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಇದು ನಿಜವೆಂಬುವಂತೆ ಟಾಲಿವುಡ್ ಯುಂಗ್ ಟೈಗರ್ ಜೂನಿಯರ್ NTR ಅವರ ಹುಟ್ಟುಹಬ್ಬಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಬರ್ತ್ ಡೇ ವಿಶ್ ಮಾಡಿ ಟ್ವೀಟ್ ಮಾಡಿದ್ದರು. ಆದರೆ ಈಗ ಈ ಟ್ವೀಟ್ ನೋಡಿದ ಅನೇಕರು ಕೆಜಿಎಫ್ ನಿರ್ದೇಶಕನ ವಿರುದ್ಧ ಕಿಡಿಕಾರಿದ್ದಾರೆ.
So….finally I know how it feels like to sit next to a nuclear plant….next time bringing my radiation suit to be around all that crazy energy @tarak9999
— Prashanth Neel (@prashanth_neel) May 20, 2020
Happy birthday brother!!!
Have a safe and great day
See you soon…#HappyBirthdayNtr#stayhomestaysafe
ಇನ್ನು ಪ್ರಶಾಂತ್ ನೀಲ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಲು ಕಾರಣವೂ ಕೂಡ ಇದೆ. ಸ್ಯಾಂಡಲ್ವುಡ್ ನಲ್ಲಿ ದೊಡ್ಡ ದೊಡ್ಡ ನಟರೇ ಇದ್ದಾರೆ. ಇನ್ನು ನಮ್ಮ ಕನ್ನಡ ಚಿತ್ರರಂಗದ ನಟರಿಗೆ ನಿರ್ದೇಶನ ಮಾಡುವುದನ್ನ ಬಿಟ್ಟು, ಪರಭಾಷೆ ಚಿತ್ರರಂಗಕ್ಕೆ ಹೋಗುವುದು ಸರಿಯಲ್ಲ ಎಂದು ಪ್ರಶಾಂತ್ ನೀಲ್ ಮಾಡಿದ್ದ ಟ್ವೀಟ್ ಗೆ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಹಾಗಾಗಿ ಈ ಟ್ವೀಟ್ ಈಗ ಸಖತ್ ವೈರಲ್ ಆಗಿದ್ದು, ವಿವಾದಕ್ಕೆ ಕೂಡ ಗುರಿಯಾಗಿದೆ.