Advertisements

ನೋವು ಅಪಮಾನಗಳನ್ನೇ ಮೆಟ್ಟಿಲುಗಳನ್ನಾಗಿಸಿ ನಟನಾಗಿ ಮಿಂಚುತ್ತಿರುವ ಸಿದ್ದಿಯ ಬಗ್ಗೆ ನಿಮಗ್ಯಾರಿಗೂ ಗೊತ್ತಿಲ್ಲದ ಇಂಟೆರೆಸ್ಟಿಂಗ್ ಮಾಹಿತಿ !

Uncategorized

ಸ್ನೇಹಿತರೇ, ಕಲೆ ಯಾರಪ್ಪನ ಸ್ವತ್ತೂ ಅಲ್ಲ. ಕಲೆಗೆ ಬಣ್ಣ, ಜಾತಿ, ಬಡವ, ಶ್ರೀಮಂತ ಅನ್ನೋ ಭೇದ ಭಾವ ಇಲ್ಲ. ಇದನ್ನೆಲ್ಲಾ ಮೀರಿ ಸ್ಯಾಂಡಲ್ವುಡ್ ನಲ್ಲಿ ಮಿಂಚಿದ ಅನೇಕ ನಟರಿದ್ದಾರೆ. ಅದರಲ್ಲಿ ಒಬ್ಬರು ಕಾಡಿನಲ್ಲಿ ಹುಟ್ಟಿ ನಾಡಿಗೆ ಬಂದು ಇದುವರೆಗೂ ೬೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತನ್ನ ವಿಭಿನ್ನ ಅಭಿನಯದಿಂದ ಜನರಿಗೆ ಮನರಂಜನೆ ನೀಡುತ್ತಿರುವ ನಟ ಪ್ರಶಾಂತ್ ಸಿದ್ಧಿ. ಕಡುಬಡತನದಲ್ಲಿ ಹುಟ್ಟಿ ಸ್ಯಾಂಡಲ್ವುಡ್ ನಲ್ಲಿ ಉತ್ತಮ ಹಾಸ್ಯ ನಟನಾಗಿ ಬೆಳೆದಿರುವ ಪ್ರಶಾಂತ್ ಸಿದ್ಧಿ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಶಿರಸಿಯ ಬೆದಹಕ್ಲ ಎಂಬ ಪುಟ್ಟ ಹಳ್ಳಿಯಲ್ಲಿ.

Advertisements

ಇನ್ನು ಪ್ರಶಾಂತ್ ಸಿದ್ಧಿಗೆ ಇಬ್ಬರು ಸಹೋದರಿಯರಿದ್ದಾರೆ. ತಾಯಿ ತಮ್ಮ ಮಕ್ಕಳನ್ನ ತುಂಬಾ ಕಷ್ಟಪಟ್ಟು ದುಡಿದು ದೊಡ್ಡವರನ್ನಾಗಿ ಮಾಡಿರುವುದರ ಜೊತೆಗೆ ವಿದ್ಯಾಭ್ಯಾಸ ಕೂಡ ಕೊಡಿಸಿದ್ದಾರೆ. ಪ್ರಶಾಂತ್ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ತುಂಬಾ ಅ”ವಮಾನ ಅ’ಪಮಾನಗಳನ್ನ ಅನುಭವಿಸಿದ್ದಾನೆ. ಪ್ರಶಾಂತ್ ಸಿದ್ದಿಯವರ ಬಣ್ಣ, ದೇಹದ ಆಕಾರ ನೋಡಿ ನೀನು ತುಂಬಾ ಕಪ್ಪಗೆ ನಿಗ್ರೋಗಳ ತರ ಇದ್ದೀಯಾ ಎಂದು ಹೀ’ಯಾಳಿಸುತ್ತಿದ್ದರಂತೆ. ಇದರಿಂದ ತುಂಬಾ ನೋ’ವು ಅನುಭವಿಸುತ್ತಿದ್ದ ಪ್ರಶಾಂತ್ ಸಿದ್ಧಿ ತನ್ನ ಬೇಸರದ ಬಗ್ಗೆ ತಾಯಿಯ ಬಳಿ ಹೇಳಿಕೊಂಡಾಗ, ನೀನು ದೇವರ ಮಗ, ದೇವರ ಮಕ್ಕಳು ಹೀಗೆ ಇರುತ್ತಾರೆ..ಯಾರೋ ಏನೋ ಹೇಳುತ್ತಾರೆ ಎಂದು ನೀನು ತಲೆ ಕೆಡಿಸಿಕೊಂಡು ನೋವು ತಿ’ನ್ನಬೇಡ ಎಂದು ತಾಯಿ ಸಿದ್ದಿಯನ್ನ ಸಮಾಧಾನ ಮಾಡುತ್ತಿದ್ದರಂತೆ.

ತನ್ನ ಜನಾಂಗದವರನ್ನ ತುಂಬಾ ಕೀ’ಳಾಗಿ ನೋಡುತ್ತಿದ್ದ ಕಾರಣ ಈ ಜೀವನವೇ ಬೇಡ ಎಂದು ಎಷ್ಟೋ ಬಾರಿ ಬೇಸರಪಟ್ಟುಕೊಂಡಿದ್ದನಂತೆ ಪ್ರಶಾಂತ್ ಸಿದ್ಧಿ. ಇನ್ನು ಕಾಲೇಜಿಗೆ ಹೋಗುತ್ತಿದ್ದ ಪ್ರಶಾಂತ್ ಗೆ ಬಣ್ಣದ ಲೋಕದ ಕಡೆ ಸೆಳೆತ ಹೆಚ್ಚಾಗಿತ್ತು. ತಾನು ನಟನಾಗಿ ಮಿಂಚಬೇಕು ಎಂಬ ಆಸೆ ಆಗಲೇ ಸಿದ್ದಿ ಮನಸ್ಸಿನಲ್ಲಿ ಚಿಗುರೊಡೆದಿತ್ತು. ಇನ್ನು ಪ್ರಶಾಂತ್ ಅವರ ಒಬ್ಬ ಅಕ್ಕ ಕೂಡ ನೀನಾಸಂ ನಲ್ಲಿ ತರಭೇತಿ ಪಡೆದಿದ್ದರು. ಸಹೋದರನ ನಟಿಸುದ ಆಸೆಯನ್ನ ತಿಳಿದ ಅಕ್ಕ ನೀನಾಸಂ ನಲ್ಲಿ ಹೋಗುವಂತೆ ಸಲಹೆ ನೀಡುತ್ತಾರೆ. ಇನ್ನು ಅದೇ ಸಮಯದಲ್ಲಿ ಪೊಲೀಸ್ ಉದ್ದೆಗೆ ಸಂಬಂಧಪಟ್ಟ ಪರೀಕ್ಷೆಯನ್ನ ಬರೆಯುವುದರ ಜೊತೆಗೆ ನೀನಾಸಂ ಪರೀಕ್ಷೆ ಕೂಡ ಬರೆಯುತ್ತಾನೆ ಪ್ರಶಾಂತ್ ಸಿದ್ದಿ. ಎರಡರಲ್ಲೂ ಆಯ್ಕೆಯಾದ ಪ್ರಶಾಂತ್ ಆರಿಸಿಕೊಂಡಿದ್ದು ಮಾತ್ರ ನಟನೆಯನ್ನ. ಹಾಗಾಗಿ ನಟನೆಯನ್ನ ಕಲಿಯುವದೋಕೋಸ್ಕರ ನೀನಾಸಂ ಗೆ ಸೇರಿಕೊಳ್ಳುತ್ತಾನೆ.

ಪ್ರಶಾಂತ್ ಸಿದ್ಧಿ ಎರಡು ವರ್ಷಗಳ ಕಾಲ ನೀನಾಸಂ ನಲ್ಲಿ ತರಭೇತಿ ಪಡೆದು ನಾಟಕವೊಂದರಲ್ಲಿ ಅಭಿನಯ ಮಾಡುತ್ತಾರೆ. ಇನ್ನು ಈ ನಾಟಕವನ್ನ ನೋಡಿದ ಖ್ಯಾತ ಬರಹಗಾರರು ಹಾಗೂ ಚಲನಚಿತ್ರ ಸಾಹಿತಿಯೂ ಆಗಿರುವ ಜಯಂತ್ ಕಾಯ್ಕಿಣಿ ಅವರು ಪ್ರಶಾಂತ್ ಸಿದ್ದಿಯ ಅಭಿನಯ ನೋಡಿ ಮನಸಾರೆ ಮೆಚ್ಚಿದ್ದು ನೀವು ಕನ್ನಡ ಸಿನಿಮಾ ರಂಗಕ್ಕೆ ಬನ್ನಿ ಎಂದು ಅವರ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಇನ್ನು ಅವಕಾಶಗಳನ್ನ ಆರಿಸಿ ಬೆಂಗಳೂರೆಂಬ ಮಾಯಾಲೋಕಕ್ಕೆ ಹೆಜ್ಜೆ ಇಟ್ಟ ಸಿದ್ಧಿಯ ಬದುಕು ಆರಂಭದಲ್ಲಿ ಅಷ್ಟೇನೂ ಸುಲಭವಾಗಿರಲಿಲ್ಲ. ಅವಕಾಶಗಳು ಅಷ್ಟು ಸುಲಭವಾಗಿ ದಕ್ಕಲಿಲ್ಲ. ಕೊನೆಗೆ ಜಯಂತ್ ಕಾಯ್ಕಿಣಿ ಅವರಿಗೆ ಕರೆ ಮಾಡಿದ ಪ್ರಶಾಂತ್ ಸಿದ್ಧಿ ಅವರ ಮೂಲಕ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿದ್ದ ಪರಮಾತ್ಮ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಾರೆ. ಬಳಿಕ ಗಜಕೇಸರಿ, ಅಣ್ಣಾಬಾಂಡ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ಅಭಿನಯಿಸುವ ಅವಕಾಶ ಪಡೆಯುತ್ತಾರೆ.

ಖ್ಯಾತ ನಿರ್ದೇಶಕ ಸೂರಿಯಂತವರ ಜೊತೆ ಕೆಲಸ ಮಾಡಿರುವ ಸಿದ್ದಿ ಕೆಲ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ತನ್ನ ರೂಪದ ಬಗ್ಗೆ ಆಡಿಕೊಳ್ಳುತ್ತಾರೆ ಎಂದು ಬೇಸರಪಟ್ಟುಕೊಳ್ಳುತ್ತಿದ್ದ ಸಿದ್ದಿಗೆ ಅವರ ರೂಪವೇ ವರವಾಗಿ ಪರಿಣಮಿಸಿದೆ. ಹೌದು, ಈಗ ಸಿದ್ದಿ ಕಾಮಿಡಿ ಪಾತ್ರಗಳಲ್ಲಿ ಮಿಂಚುತ್ತಿದ್ದು ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರಗಳಲ್ಲಿಯೂ ಕೂಡ ನಟಿಸುತ್ತಿದ್ದಾರೆ. ಈಗ ಸ್ಯಾಂಡಲ್ವುಡ್ ನಲ್ಲಿ ಉತ್ತಮ ನಟನಾಗಿ ಬೆಳೆದಿರುವ ಸಿದ್ಧಿ ತನ್ನದೇ ಆದ ಅಭಿಮಾನಿಗ ಬಳಗವನ್ನ ಹೊಂದಿದ್ದು, ಸಿದ್ದಿ ನಟಿಸಿರುವ ಬಿಡುಗಡೆಯಾಗಬೇಕಿರುವ ಹಲವು ಚಿತ್ರಗಳು ಬಾಕಿ ಇವೆ. ಒಟ್ಟಿನಲ್ಲಿ ಅ’ವಮಾನ, ಅ’ಪಮಾಗಳನ್ನ ದಾಟಿ ಬಂದ ಪ್ರಶಾಂತ್ ಸಿದ್ಧಿ ಈಗ ಪುರಸ್ಕಾರಗಳನ್ನ ಪಡೆಯುತ್ತಿದ್ದಾರೆ. ಅದಕ್ಕೆ ಹೇಳೋದು ಕಲೆ ಅನ್ನೋದು ಯಾರಪ್ಪನ ಸ್ವತ್ತು ಅಲ್ಲ ಅಂತ. ಮತ್ತಷ್ಟು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ನಟನಾಗಿ ಪ್ರಶಾಂತ್ ಸಿದ್ಧಿ ಬೆಳೆಯಲು ಎಂದು ನಾವೆಲ್ಲಾ ಹಾರೈಸೋಣ…