Advertisements

ತಾಯಿಗಾಗಿ ಮೈಸೂರಲ್ಲಿ ಅರಮನೆಯಂತಹ ಮನೆ ಕಟ್ಟಿಸಿದ ಪ್ರಭುದೇವ.. ಮನೆ ಎಷ್ಟು ಚೆನ್ನಾಗಿದೆ ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ, ರೆಕ್ಕೆ ಬಂದ ಮೇಲೆ ಗೂಡಿನಿಂದ ಹಾರಿ ಬರುವ ನಾವು ಹೊಸದಾಗಿ ಪರಿಚಯ ಆದವರಿಗೆ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಉಡುಗೊರೆ ಕೊಡುತ್ತೇವೆ.. ಆದರೆ ನಮ್ಮನ್ನು ಹೆತ್ತು ಹೊತ್ತ ತಂದೆ ತಾಯಿಗೆ ಇಷ್ಟವಾಗುವ ವಸ್ತುವನ್ನು ಕೊಂಡುಕೊಳ್ಳೋಣ ಎನ್ನುವ ಅಲೋಚನೆ ಬರುವುದಿಲ್ಲ. ಪ್ರೇಯಸಿಯನ್ನು ಬಟ್ಟೆ ಶಾಪಿಂಗ್ ಗೆ ಕರೆದುಕೊಂಡು ಹೋಗಿ ನಿನಗೆ ಇಷ್ಟವಾಗುವುದನ್ನು ಕೊಂಡುಕೊ ಎಂದು ಹೇಳುವ ಅದೆಷ್ಟೋ ಜನ ಜೀವನದಲ್ಲಿ ಒಮ್ಮೆಯೂ ತಾಯಿಗೆ ಒಂದು ಸೀರೆಯನ್ನು ಕೊಡಿಸಿರುವುದಿಲ್ಲ.. ನಿಜ ಏನೆಂದರೆ ನಾವು ಏನಾದರೂ ನಮ್ಮ ತಂದೆ ತಾಯಿಗೆ ಕೊಟ್ಟರೆ ಎಲ್ಲಿಲ್ಲದ ಸಂತೋಷ ಪಡುತ್ತಾರೆ.

Advertisements

ಅದೇ ರೀತಿ ಎಷ್ಟೇ ಬ್ಯುಸಿ ಇದ್ದರೂ ತಮ್ಮ ತಾಯಿಯ ಬಗ್ಗೆ ಅಲೋಚಿಸುವ ಪ್ರಭುದೇವ ಅವರಿಗಾಗಿ ಎಂತಹ ಮನೆಯನ್ನು ಕಟ್ಟಿಸಿ ಕೊಟ್ಟಿದ್ದಾರೆ ಗೊತ್ತಾ? ನೋಡೋಣ ಬನ್ನಿ. ಎಲ್ಲೇ ಹೋದರು ಚಿತ್ರರಂಗದಲ್ಲಿ ಎಷ್ಟೇ ಪ್ರಸಿದ್ಧಿ ಗಳಿಸಿದರೂ ತಮ್ಮ ಊರನ್ನು ಮರೆಯದಿರುವ ಪ್ರಭುದೇವ ಅವರ ತಂದೆ ಸುಂದರ್ ಮಾಸ್ಟರ್ ಹಾಗೂ ತಾಯಿ ಮಹದೇವಮ್ಮ ಅವರು ಮೈಸೂರಿನಲ್ಲೇ ನೆಲೆಸಿದ್ದಾರೆ.. ಎಷ್ಟೇ ಬ್ಯುಸಿ ಇದ್ದರೂ ಸಮಯ ಮಾಡಿಕೊಂಡು ಮೈಸೂರಿಗೆ ಬರುವ ಪ್ರಭುದೇವ ಅವರು ಕೆಲವು ದಿನ ತಂದೆ ತಾಯಿಯ ಜೊತೆ ಕಾಲ ಕಳೆಯುತ್ತಾರೆ.

ತಮ್ಮ ತಾಯಿಯ ಸುಂದರ ಮನೆಯ ಆಸೆಯನ್ನು ತಿಳಿದ ಪ್ರಭುದೇವ ತಾಯಿಗಾಗಿ ಅವರ ಕನಸಿನ ಮನೆಯನ್ನು ತುಂಬಾ ಖರ್ಚು ಮಾಡಿ ಮೈಸೂರಿನಲ್ಲಿ ಕಟ್ಟಿದ್ದಾರೆ.. ಮನೆಯಲ್ಲಿ ವಿಶಾಲವಾದ ಅಡುಗೆ ಮನೆ, ಬೆಡ್ ರೂಮ್ ಹಾಗೂ ತಾನು ಬಂದಾಗ ಉಳಿದುಕೊಳ್ಳಲು ಒಂದು ರೂಮ್..‌ ಈಗೆ ತಮ್ಮ ತಾಯಿಯ ಅಲೋಚನೆ, ಅಭಿರುಚಿಯಂತೆ ಅವರಿಗಿಷ್ಟವಾದ ಕನಸಿನ ಮನೆಯನ್ನು ಕಟ್ಟಿಸಿ ಕೊಟ್ಟಿದ್ದಾರೆ ಪ್ರಭುದೇವ ಅವರು‌. ತನ್ನ ಮಗ ತಮಗಾಗಿ ಕಟ್ಟಿಸಿರುವ ಸುಂದರ ಮನೆಯನ್ನು ಪ್ರವೇಶಿಸುವಾಗ ಅವರ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ..

ದೊಡ್ಡ ಮನೆ, ಸುಂದರ ಮನೆ ಅನ್ನೊದಕ್ಕಿಂತ ನನ್ನ ಮಗ ನನಗಾಗಿ ಮನೆ ಕಟ್ಟಿಸಿದ್ದಾನೆ ಅನ್ನೋದೆ ದೊಡ್ಡ ಸಂತೋಷ. ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಸಿದ್ದರೂ ಆ ಬಾಷೆಗಳು ಬಂದರೂ ಸಹ ಯಾವುದೇ ಸಭೆಗಳಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ ಪ್ರಭುದೇವ ಅವರ ತಾಯಿ ಅನ್ನೋದು.. ಇನ್ನೊಂದು ವಿಶೇಷ. ಅರಮನೆ ನಗರದಲ್ಲಿ ತನ್ನ ತಾಯಿಗಾಗಿ ಪ್ರೀತಿಯ ಅರಮನೆಯನ್ನು ಕಟ್ಟಿಸಿರುವ ಪ್ರಭುದೇವ ಅವರ ಈ ಕಾರ್ಯದ ಬಗ್ಗೆ ನೀವು ಏನು ಏಳಲು ಇಷ್ಟಪಡುತ್ತೀರಾ ಎಂಬುದನ್ನು ತಿಳಿಸಿ.