Advertisements

ಪ್ರೀತಿಯ ಬಲೆಗೆ ಬಿದ್ದು ಮದವೆಯಾದಳು.. ಆದರೆ ಈತ ಹೆಂಡತಿಗೆ ಎಂತಹ ಕೆಲಸ ಕೊಡ್ತಿದ್ದಾ ಗೊತ್ತಾ?

Kannada Mahiti

ಪ್ರೀತಿ ಪ್ರೇಮ ಇವುಗಳ ಪರಿಧಿಯಲ್ಲಿ ಸಿಲುಕಿಕೊಳ್ಳೋದು ವಯೋಸಹಜವಾಗಿ ಸಾಮಾನ್ಯವೇ, ಆದರೆ ಆಕರ್ಷಣೆಯನ್ನೇ ಪ್ರೀತಿ ಅಂದುಕೊಂಡು ಸುಂದರ ಬದುಕನ್ನು ಫಜೀತಿಗೆ ಸಿಲುಕಿಸಿಕೊಳ್ಳೋದು, ಮಾಡಿದ ತಪ್ಪಿಗೆ ಆಮೇಲೆ ಪಶ್ಚಾತಾಪ ಪಟ್ಟರು ಕಾಲ ಚಕ್ರ ಉ’ರು’ಳಿ ಹೋಗಿರುತ್ತೆ ಅಷ್ಟೇ, ಇವತ್ತು ಇಂತಹದ್ದೇ ಒಂದು ಪ್ರೀತಿಗೆ ಬಿ’ದ್ದು ಮೂರೇ ವರ್ಷದಲ್ಲಿ ಬೇರಾದ ಪ್ರಣಯ ಪಕ್ಷಿಗಳ ಮನಕಲುಕುವ ಕಥೆಯನ್ನು ಹೇಳ್ತೀವಿ ಕೇಳಿ.
ಈ ಘ’ಟ’ನೆ ನಡೆದದ್ದು ಹೈದರಾಬಾದ್‌ನಲ್ಲಿ. ಅಂದಹಾಗೇ ಈ ಜೋಡಿಯ ಹೆಸರು ಜಿಹೆಚ್ ಪ್ರಸಾದ್ ಹಾಗೂ ದಿವ್ಯ. ಪ್ರಸಾದ್ ಓರ್ವ ಬಾಣಸಿಗನಾಗಿದ್ದ, ಅಡುಗೆ ಮಾಡೋದ್ರಲ್ಲಿ ನಿಸ್ಸೀಮನಾಗಿದ್ದ, ಅದನ್ನೇ ತನ್ನ ವೃತ್ತಿಯಾಗಿರಿಸಿಕೊಂಡಿದ್ದ, ಒಂದು ದಿನ ಈತನಿಗೆ ದಿವ್ಯಾಳ ಪರಿಚಯವಾಗುತ್ತೆ..

[widget id=”custom_html-3″]

Advertisements

ದಿವ್ಯ ಇನ್ನು ಹದಿನೆಂಟರ ಆಸುಪಾಸಿನಲ್ಲಿದ್ದ ಹುಡುಗಿ, ಆಕೆಯ ಮನಸ್ಸು ವಿಚಲಿತವಾಗಿ ಪ್ರಸಾದ್‌ನತ್ತ ವಾಲುತ್ತದೆ. ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು, ಸ್ನೇಹ ಪ್ರೀತಿಗೆ ತಿರುಗಲು ಜಾಸ್ತಿದಿನವೇನು ಬೇಕಾಗಿರಲಿಲ್ಲ . ಇವರಿಬ್ಬರ ಮಧ್ಯೆ ಕಾಲ ಕಳೀತ ಕ್ಷಣ ಹೋಗ್ತಾ ಇದ್ದ ಹಾಗೇ ಅಗಾಧವಾದ ಪ್ರೇಮ ಬೇರೋರಿದೆ ಅಂತ ಇವರಿಬ್ಬರೇ ಭಾವಿಸಿದ್ದರು, ಸರಿಯಾವುದು ತಪ್ಪು ಯಾವುದು ಅಂತ ಸರಿಯಾಗಿ ಆಲೋಚಿಸದ ವಯಸ್ಸಿನಲ್ಲಿದ್ದ ದಿವ್ಯ ಮದುವೆ ಮಾಡಿಕೊಳ್ಳುತ್ತೇನೆ ಅಂತ ಮನೆಯಲ್ಲಿ ಪಟ್ಟು ಹಿಡಿದು ಕುಳಿತಳು, ಎಷ್ಟು ಹೇಳಿದರೂ ಕೇಳದ ಸ್ಥಿತಿಯಲ್ಲಿದ್ದ ಮಗಳ ಕಂಡು ಹೆತ್ತವರು ಜಾಸ್ತಿ ಏನು ಹೇಳದೇ ಮದುವೆಗೆ ಸಮ್ಮತಿಸಿದರು, ಹೀಗೆ ಪ್ರಸಾದ್ ದಿವ್ಯ ಎಂಬ ಜೋಡಿಹಕ್ಕಿಗಳು ಅಗ್ನಿಸಾಕ್ಷಿಯಾಗಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಬಹಳ ಖುಷಿಯಿಂದ ಹೆಜ್ಜೆ ಇಟ್ಟರು.

[widget id=”custom_html-3″]

ಹೊಸ ಹುಮ್ಮಸ್ಸು, ಹೊಸ ಜೀವನ ಎಲ್ಲವೂ ನವನವೀನವಾಗಿ ಕಾಣುವಾಗ ಆರಂಭದಲ್ಲಿ ಜೀವನ ಸ್ವರ್ಗ ಎಂಬಂತೆ ಭಾಸವಾಗುತ್ತೆ, ಆದರೆ ಹೋಗ್ತಾ ಹೋಗ್ತಾನೇ ಅಸಲಿಯತ್ತು ಗೊತ್ತಾಗೋದು, ಈ ಇಬ್ಬರು ಜೋಡಿಗಳ ಬದುಕಲ್ಲಿಯೂ ಆ ಲೋಕಾರೂಢಿ ಮಾತೇ ಸತ್ಯವಾಯಿತು, ಮದುವೆಯಾಗಿ ಮೂರೇ ಮೂರು ವರ್ಷಗಳಲ್ಲಿ ಈ ಇಬ್ಬರು ಸಿಕ್ಕಾಪಟ್ಟೆ ಜ’ಗ’ಳ ಆಡಲು ಶುರು ಮಾಡಿದ್ರು. ಏನೇ ಮಾಡಿದ್ರು ಇಬ್ಬರ ಮಧ್ಯೆ ಹೊಂದಾಣಿಕೆ ಆಗ್ತಾನೇ ಇರಲಿಲ್ಲ, ಪ್ರಸಾದ್ ದಿನಕ್ಕೊಂದು ಚಿತ್ರ’ಹಿಂ’ಸೆಯನ್ನು ದಿವ್ಯಾಳಿಗೆ ಕೊಡಲು ಶುರು ಮಾಡಿದ, ಆಕೆ ಎಷ್ಟೇ ಸಹಿಸಿಕೊಂಡಿದ್ರೂ ಒಂದಿಲ್ಲೊಂದು ರೀತಿಯಲ್ಲಿ ದಿವ್ಯಾಳನ್ನು ಹಿಂ’ಸಿ’ಸತೊಡಗಿದ. ಇದರಿಂದ ಬೇಸತ್ತ ದಿವ್ಯಾ ಹೇಳದೇ ಕೇಳದೇ ಮನೆ ಬಿಟ್ಟು ಹೊ’ರ’ಟೇ ಹೋದಳು..

[widget id=”custom_html-3″]

ಇಲ್ಲೇ ಎಲ್ಲೋ ಹೊರಟು ಹೋಗಿರಬೇಕು ಅಂತ ಅಂದುಕೊಂಡು ಪ್ರಸಾದ್ ಸಹ ಆಕೆಗಾಗಿ ಸಾಕಷ್ಟು ಹುಡುಕಾಡುತ್ತಾನೆ, ಆದರೆ ದಿವ್ಯಾಳ ಸುಳಿವು ಸಿಕ್ಕೇ ಇಲ್ಲ, ಕೊನೆಪಕ್ಷ ತಾಯಿ ಮನೆಗೆ ಹೋಗಿರಬೇಕು ಅಂದುಕೊಂಡರೇ ಅಲ್ಲಿಯೂ ಆಕೆ ಪತ್ತೆಯಾಗಿಲ್ಲ, ಇದರಿಂದ ಗಾ’ಬ’ರಿಯಾಗಿ ತಕ್ಷಣ ಪೊಲೀಸ್ ಸ್ಟೇಷನ್‌ಗೆ ಸಹ ದೂ’ರು ಕೊಡ್ತಾನೆ, ಆದರೆ ಏನು ಪ್ರಯೋಜನವಾಗಲಿಲ್ಲ, ಆಕೆಯನ್ನು ಹುಡುಕುವಲ್ಲಿ ಪೊಲೀಸರು ಸಹ ವಿಫಲವಾಗಿದ್ದಾರೆ, ಕಳೆದ ಏಪ್ರೀಲ್‌ನಲ್ಲಿಮನೆ ಬಿಟ್ಟು ಹೋದ ದಿವ್ಯಾ ಇನ್ನು ಮನೆ ಸೇರಿಲ್ಲ, ಎಲ್ಲಿದಾಳೆ? ಏನು ಮಾಡ್ತಾಯಿದ್ದಾಳೆ? ಯಾರಿಗೂ ಸಹ ಗೊತ್ತಿಲ್ಲ..

ಓದಿದ್ರಲ್ಲ ಇದು ವಯೋಸಹಜವಾದ ಆಕರ್ಷಣೆಗೆ ಒಳಗಾಗಿ ಪ್ರೀತಿ ಪ್ರೇಮ ಅಂತ ಕುರುಡು ಭಾವದೊಳಗೆ ಸಿಕ್ಕಿ ನೈಜ ಪ್ರೀತಿಯೇ ಅಂತ ತಿಳಿಯದ ವಯಸ್ಸಲ್ಲಿ ಮಾಡಿಕೊಳ್ಳುವ ಎಡವಟ್ಟು, ಈ ಎಡವಟ್ಟಿನಿಂದ ಕೆಲವರು ಬದುಕು ಕಳೆದುಕೊಂಡರೇ, ಇನ್ನು ಕೆಲವರ ಬದುಕು ಈ ರೀತಿಯಾಗುತ್ತದೆ, ಬೆರಳಣಿಕೆಯಷ್ಟು ಮಂದಿಯ ಬದುಕು ಮಾತ್ರ ಸುಂದರವಾಗುತ್ತದೆ.
ಪ್ರಿಯ ಓದುಗರೇ ಪ್ರೀತಿಸೋದು ತಪ್ಪಲ್ಲ, ಆದರೆ ಪ್ರೀತಿ ಎಂದರೆ ಏನು ಅಂತ ತಿಳಿಯದೇ ಇದೇ ಪ್ರೀತಿ ಅಂತ ಭಾವಿಸಿ ಅಮೂಲ್ಯ ಬದುಕನ್ನು ನಾವೇ ನಮ್ಮ ಕೈಯಾರೇ ಪ್ರೀತಿಯನ್ನ ಅವನತಿಯತ್ತ ತೆಗೆದುಕೊಂಡು ಹೋಗುವುದು ತಪ್ಪು, ಸೋ ಮನಸ್ಸುಗಳೇ ಬೀ ಕೇರ್‌ಫುಲ್..