Advertisements

ಸಮಂತಾ ನಾಗಚೈತನ್ಯ ಡೈವೋರ್ಸ್ ನಂತರ ಪ್ರಿಯಾಂಕ ಚೋಪ್ರಾ ವೈವಾಹಿಕ ಜೀವನದಲ್ಲಿ ಬಿರುಗಾಳಿ! ಏನಾಗಿದೆ ಗೊತ್ತೇ..

Cinema Uncategorized

ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾ ಈಗ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಿಗ್ಗಿ ಒಂದು ನಡೆ, ಈಗ ಅಭಿಮಾನಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಏನಾ ಸಂಗತಿ? ಯಾಕೀಗೆ ಅಭಿಮಾನಿಗಳು ಭಯ ಪಡ್ತಿದ್ದಾರೆ? ಪಿಗ್ಗಿ ಮಾಡಿದ್ದಾದರೂ ಏನು ಇಲ್ಲಿದೆ ನೋಡಿ ಡಿಟೇಲ್ಸ್. ಹೌದು ಪ್ರಿಯಾಂಕ ವೈವಾಹಿಕ ಜೀವನದಲ್ಲಿ ಬಿರುಗಾಳಿ ಬೀಸಿದೆ ಎನ್ನುವಂತಹ ಟ್ರೋಲ್​ಗಳು ವಿಮರ್ಶೆಗಳು ಈಗ ಸಖತ್ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಈ ಚರ್ಚೆ ಶುರುವಾಗಿದ್ದು ಅಂತೆ ಕಂತೆ ಮಾತುಗಳಿಂದಲ್ಲ , ಬದಲಾಗಿ ಪ್ರಿಯಾಂಕ ಅವರ ನಡೆಯಿಂದಲೇ ಅಷ್ಟಕ್ಕೂ ಅವರು ಏನು ಮಾಡಿದ್ರು ಹೇಳ್ತೀವಿ ನೋಡಿ. ಸಾಮಾಜಿಕ ಜಾ’ಲ’ತಾಣದಲ್ಲಿ ಪಿಗ್ಗಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ನಿಕ್ ಜೊತೆಗಿನ ಫೋಟೊ ಹಾಕ್ತಾ ಸುದ್ದಿಯಾಗ್ತಾ ಇರುತ್ತಾರೆ. ಕ್ಯೂಟ್ ಕಪಲ್ಸ್ ಅಂತ ಅಭಿಮಾನಿಗಳ ಬಳಿ ಸಹ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಪಿಗ್ಗಿ ನಿಕ್ ಲವ್ ಸ್ಟೋರಿಯೂ ಸಹ ಸಾಕಷ್ಟು ಟೀಕೆಗೆ ಕಾರಣವಾಗಿತ್ತು.

[widget id=”custom_html-3″]

Advertisements

ಇವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವಿಚಾರ ಬಾಲಿವುಡ್ ಅಂಗಳದಲ್ಲಿ ಹಾಗೂ ಹಾಲಿವುಡ್ ಅಲ್ಲಿ ಸಖತ್ ಚರ್ಚೆಗೆ ಕಾರಣವಾಗಿತ್ತು. ಇವರಿಬ್ಬರ ಲವ್ ಸ್ಟೋರಿ ಟೀಕೆಗೆ ಗುರಿಯಾಗಲು ಕಾರಣ ಇವರ ನಡುವಣ ಇರುವಂತಹ ವಯಸ್ಸಿನ ಅಂತರ. ಪಿಗ್ಗಿ ನಿಕ್​​ಗಿಂತ 11 ವರ್ಷ ಚಿಕ್ಕವರಾಗಿದ್ದರು, ಇದೇ ಸದ್ಯ ಈ ಜೋಡಿಯ ಟ್ರೋಲಿಗೆ ಕಾರಣವಾಗಿರೋದು. ಆದ್ರೆ ಇವರಿಬ್ಬರು ಅನ್ಯೋನ್ಯವಾಗಿ ಬದುಕೋ ಮುಖೇನ ವೈವಾಹಿಕ ಬದುಕನ್ನು ಸೂಪರ್ ಆಗಿ ನಡೆಸ್ತಾ ಇರೋ ಕಾರಣ, ಟ್ರೋಲಿಗರ ಬಾಯನ್ನು ಮುಚ್ಚಿಸಿದ್ದಾರೆ. ಆದ್ರೆ ಈಗ ಮತ್ತೆ ಪಿಗ್ಗಿ ಆ ಒಂದು ನಡೆಯಿಂದ ಈ ಕಪಲ್ಸ್ ಮತ್ತೆ ಟ್ರೋಲಿಗರ ಬಾಯಿಗೆ ಆಹಾರ ಆಗಿದ್ದಾರೆ. ಅಭಿಮಾನಿಗಳ ಮನದಲ್ಲಿ ಕೂಡ ಗೊಂದಲ ಸೃಷ್ಟಿಸಿದ್ದಾರೆ. ಹೌದು ಪ್ರೀಯಾಂಕ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಬಳಿಕ ತನ್ನ ಹೆಸರ ಜೊತೆಗೆ ಜೋನಸ್ ಸರ್​​ನೇಮ್​ನ್ನು ಹಾಕಿಕೊಂಡಿದ್ರು. ಆದ್ರೆ ಈಗ ಅದೇನಾಯ್ತೋ ಗೊತ್ತಿಲ್ಲ ತನ್ನ ಸರ್​​ನೇಮ್ ಅಲ್ಲಿ ಕೊಂಚ ಬದಲಾವಣೆ ಮಾಡಿದ್ದಾರೆ.

[widget id=”custom_html-3″]

ಹೌದು ತನ್ನ ಹೆಸರ ಜೊತೆಯಿದ್ದ ಜೊನಸ್ ಹೆಸರಿಗೆ ಪಿಗ್ಗಿ ಗುಡ್ ಬೈ ಹೇಳಿದ್ದಾರೆ. ಪಿಗ್ಗಿ ಹೀಗೆ ಜೋನಸ್ ಹೆಸರನ್ನು ಕೈ ಬಿಟ್ಟಿರೋದೆ ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಿಯಾಂಕ ಮತ್ತೆ ನಿಕ್ ಮಧ್ಯೆ ಏನೋ ಸರಿಯಲ್ಲ. ಅದಕ್ಕೆ ಪ್ರಿಯಾಂಕ ಹೀಗೆ ಮಾಡಿದ್ದಾರೆ. ಅವರಿಬ್ಬರು ಡೈವೋರ್ಸ್ ತಗೋತಾರೆ ಅನ್ನುವಂತಹ ಸುದ್ದಿಗಳು ಹರಿದಾಡುತ್ತಿವೆ. ಅಷ್ಟಕ್ಕು ಹೆಸರು ಚೇಂಜ್ ಮಾಡಿದ್ರೆ ಏನಾಗುತ್ತೆ? ಅಷ್ಟಕ್ಕೆ ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಬೇಕಾ? ಅಂತೆಲ್ಲ ನೀವು ಕೇಳಬಹುದು. ಆದ್ರೆ ವಿಚಾರ ಇದೆ. ಈ ಹಿಂದೆ ಸಮಂತಾ ಕೂಡ ನಾಗಚೈತನ್ಯ ಜೊತೆ ಡೈವೋರ್ಸ್​ ಮಾಡಿಕೊಳ್ಳುವಾಗ ಸಾಮಾಜಿಕ ಜಾಲತಾಣಗಳ ಮುಖೇನವೇ ಸೂಚನೆ ಕೊಟ್ಟರು. ಸಮಂತಾ ತನ್ನ ಸರ್​​ನೇಮ್ ಅನ್ನು ಕೈಬಿಟ್ಟಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು. ಸುದ್ದಿಯಾಗಿ ಕೆಲವೇ ದಿನಗಳಲ್ಲಿ ಸಮಂತಾ- ನಾಗಚೈತನ್ಯ ದಾಂಪತ್ಯ ಜೀವನದ ಬಿರುಕಿನ ಮಧ್ಯೆ ಎಲ್ಲಡೆ ಗೊತ್ತಾಗಿದ್ದು..

[widget id=”custom_html-3″]