Advertisements

ಪಬ್ಲೀಕ್ ಟಿವಿ ರಂಗನಾಥ್ ರವರ ಪತ್ನಿ ಮತ್ತು ಮಗಳು ಹೇಗಿದ್ದಾರೆ ನೋಡಿದ್ದೀರಾ? ಫೇಮಸ್..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ವೀಕ್ಷಕರಿಗೆ ಸರಿಯಾದ ಮಾಹಿತಿ ನೀಡುತ್ತಿರುವ ಮಾಹಿತಿಯಲ್ಲಿ ಮುಖ್ಯಾವದದ್ದು ಪಬ್ಲಿಕ್ ಟೀವಿ.. ಎಚ್ ಆರ್ ರಂಗನಾಥ್ ಅವರು ಪಬ್ಲೀಕ್ ಟೀವಿಯನ್ನು ಆರಂಭ ಮಾಡಿದ್ದೇ ಒಂದು ರೋಚಕ ಕಥೆ. ರಂಗನಾಥ್ ಅವರು ಮೂಲತಃ ಮೈಸೂರಿನವರು.. ಮಾಧ್ಯಮದಲ್ಲಿ ಕೆಲಸ ಮಾಡುವ ಆಸಕ್ತಿಯಿಂದ ಬೆಂಗಳೂರಿಗೆ ಬಂದು ಹಲವಾರು ದೈನಂದಿ‌ನ ಪತ್ರಿಕೆಗಳಿಗೆ ವರದಿಗಾರರಾಗಿ, ಚೀಪ್ ಎಡಿಟರ್ ಆಗಿ ಕೆಲಸ ಮಾಡಿದರು ರಂಗನಾಥ್ ಅಲಿಯಾಸ್ ರಂಗಣ್ಣ.. ನಿಜ ಜೀವನದಲ್ಲಿ ರಂಗನಾಥ್ ಅವರ ಲೈಪ್ ಸ್ಟೈಲ್ ಏಗಿದೆ ಗೊತ್ತಾ? ಎಚ್ ಆರ್ ರಂಗನಾಥ್ ಅವರ ಪೂರ್ತಿ ಹೆಸರು ಹೆಬ್ಬಾಳೆ ರಾಮಕೃಷ್ಣಯ್ಯ ರಂಗನಾಥ್..

Advertisements

ಇವರ ನಿಕ್ ನೇಮ್ ಕ್ಯಾಪ್ಟನ್ ರಂಗಣ್ಣ. ಇವರು ಹುಟ್ಟಿದ್ದು ಮೇ 12, 1966 ಮೈಸೂರಿನಲ್ಲಿ. ಇವರಿಗೆ ಈಗ 54 ವರ್ಷ ವಯಸ್ಸು. ಮೊದಲಿಗೆ ಜನರ್ಲಿಸ್ಟ್ ಆಗಿ ವೃತ್ತಿ ಜೀವನ ಶುರು ಮಾಡಿದ ಇವರು ಹಲವಾರು ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ.. ಪಬ್ಲಿಕ್ ಟೀವಿ ಸಂಸ್ಥೆಯ ಒಬ್ಬರೇ ಸಂಸ್ಥಾಪಕ ರಂಗನಾಥ್ ಅವರು. ಪ್ರಸ್ತುತ ರಂಗನಾಥ್ ಅವರು ಬೆಂಗಳೂರಿನಲ್ಲೇ ನೆಲೆಸಿದ್ದಾರೆ.. ರಂಗನಾಥ್ ಅವರ ಕುಟುಂಬದ ವಿಚಾರಕ್ಕೆ ಬಂದರೆ ಇವರ ತಂದೆ ರಾಮಕೃಷ್ಣಯ್ಯ ಮತ್ತು ತಾಯಿ ಲೀಲ.

ಇವರಿಗೆ ಕಾತ್ಯಾಯಿನಿ, ಮಣಿಕರ್ಣಿಕ, ಸರ್ವಮಂಗಳ, ವೈದ್ಯೇಹಿ ಹೆಸರಿನ ನಾಲ್ವರು ಸಹೋದರಿಯರು.. ವೆಂಕಟೇಶ್ ಮತ್ತು ಕೇಶವ ಎಂಬ ಇಬ್ಬರು ಸಹೋದರರು ಇದ್ದಾರೆ. ರಂಗನಾಥ್ ಅವರ ಪತ್ನಿಯ ಹೆಸರು ಶಾರದಾ, ಇವರ ಮಗಳ ಹೆಸರು ತೇಜಸ್ವಿನಿ. ರಂಗನಾಥ್ ಅವರು ನೇರ ನುಡಿ ಮಾತನಾಡುವ ಶೈಲಿ ಮತ್ತು ಸತ್ಯವನ್ನು ಇದ್ದಾಗೆ ಹೇಳುವ ಇವರ ಮಾತಿಗೆ ಬಹು ದೊಡ್ಡ ಅಭಿಮಾನಿಗಳ ಬಳಗವೇ ಇದೆ. 2016 ರ ಜೀ ಕನ್ನಡ ವಾಹಿನಿ ದಶಕದ ಜರ್ನಲಿಸ್ಟ್ ಎನ್ನುವ ಅವಾರ್ಡನ್ನು ಇವರಿಗೆ ನೀಡಿ ಗೌರವಿಸಿತ್ತು.. ಇನ್ನೂ ರಂಗಣ್ಣ ಅವರ ಸಾಧನೆ ಅದೆಷ್ಟೋ ಯುವಕರಿಗೆ ಸ್ಪೂರ್ತಿ.