Advertisements

ಹುಟ್ಟಿದಾಗಿನಿಂದ ಶಾಲೆಗು ಹೋಗಿಲ್ಲ, ಕಾಲೇಜ್ ಗೂ ಹೋಗಿಲ್ಲ.. ಆದ್ರೆ 2 ಪಿಯುಸಿ ಪಾಸ್ ಆಗಿದ್ದಾಳೆ ಈ ಯುವತಿ! ಅದೇಗೆ ಗೊತ್ತಾ?

Kannada Mahiti

ನಮಸ್ಕಾರ ಬಂಧುಗಳೇ.. ಜೀವನದಲ್ಲಿ ನಾವು ಅನ್ಕೊಳ್ಳೊದೆ ಒಂದು, ಅದಾಗೋದು ಇನ್ನೊಂದು, ನಾವ್ ಅನ್ಕೊಂಡಿದ್ ಆಗಿದ್ರು ನಾವು ಸಾಗುವ ದಾರಿ ಬೆರೊಂದು.. ಜೀವನದಲ್ಲಿ ಸಣ್ಣ ಸಮಸ್ಯೆ ಬಂದ್ರು ನಾವು ಸೈಡ್ ಸರಿದು ನಿಲ್ತಿವಿ… ಅದೇ ಸಮಸ್ಯೆಗೆ ಸವಾಲಾಗಿ ನಿಲ್ಲೋದು ಬೆರಳೆಸಿಕೆ ಜನ ಮಾತ್ರ. ಲೈಫ್ ನಲ್ಲಿ ಬರುವ ಸಣ್ಪುಟ್ಟ ಸ’ಮ’ಸ್ಯೆಗೆ ತಲೆ ಕೆಡಿಸಿಕೊಳ್ಳುವವರು ಒಂದಿಷ್ಟ್ ಜನ ಆದ್ರೆ, ಸಮಸ್ಯೆ ಜೊತೆ ಸವಾಲು ಹಾಕಿ ಜೀವನ ಎದುರಿಸುವವರು ಇನ್ನೊಂದಿಷ್ಟು ಜನ.. ಯಾಕಿಷ್ಟೂ ಸಮಸ್ಯೆ ಸವಾಲುಗಳ ಬಗ್ಗೆ ಹೇಳ್ತಿದ್ದಿನಿ ಅನ್ಕೊತಿದ್ದಿರ…. ಈ ಸ್ಟೋರಿ ನೋಡಿ ನಿನಗೆ ಎಲ್ಲವೂ ತಿಳಿಯುತ್ತೆ.. ಕೋಟಿ ಜನರಲ್ಲಿ ಒಬ್ಬರಿಗೆ ಬರುವ ಕಾ’ಯಿ’ಲೆಯಿಂದ ಬಳಲುತ್ತಿರುವ ಯುವತಿ ಎಲ್ಲರಿಗೂ ಮಾದರಿಯಾಗಿ ನಿಂತಳು. ಎಸ್ ಚಿಕ್ಕಮಗಳೂರಿನ ಯುವತಿ ಹುಟ್ಟಿದಾಗಿನಿಂದ ಶಾಲಾ ಕಾಲೇಜು ಮೆಟ್ಟಿಲು ಹತ್ತದ, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಯುವತಿ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಪಾಸ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ.

Advertisements

ಕಲಿಯುವ ಛಲ ಅಚಲವಾದಾಗ ಮಾತ್ರ ಇಂತಹ ಪ್ರತಿಭೆಗಳು ಪುಟಿದೆಳುತ್ವೆ.. ಶಾಲಾ ಕಾಲೇಜಿಗೆ ಹೋಗದೆ, ಪುಸ್ತಕ ಕ್ಲಾಸ್ ರೂಂ ಇಲ್ಲದೆ.. ನೋಟ್ಸ್ ಫ್ರೇಂಡ್ಸ ಎನ್ನದ ಯುವತಿ ಮನೆಯಲ್ಲೇ ಓದಿ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪಾಸ್ ಮಾಡಿದ್ದಾಳೆ. ದೀಪಿಕಾ ಎಂಬ ಯುವತಿ ಕೋಟಿ ಜನರಲ್ಲಿ ಒಬ್ಬರಿಗೆ ಬರುವ ಕಾ’ಯಿ’ಲೆಯಿಂದ ಹುಟ್ಟಿನಿಂದ ಈಕೆ ಬಳಲುತ್ತಿದ್ದಾಳೆ. ಶಾಲಾ-ಕಾಲೇಜು ಸೇರಿದಂತೆ ಮನೆಯಿಂದ ಹೊರ ಹೋಗುವಂತಿಲ್ಲ. ಆ’ರೋ’ಗ್ಯ ಸಮಸ್ಯೆ ದೀಪಿಕಾಳನ್ನ ಕಾಡ್ತಿರುತ್ತದೆ.. ಆದರೆ ಈಕೆಯದ್ದು ಮನೆಯೊಳಗಿನ ಜೀವನ. ಶಾಲೆ ಕಾಲೇಜು ಎನ್ನದ ವಿದ್ಯಾರ್ಥಿನಿ ಓದಿಗೆ ಶರಣಾಗಿದ್ದಳು.. ಇಂತಹ ಅಚ್ಚರಿ ಘ.ಟ.ನೆ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಸುಧಾಕರ್ ಪ್ರತಿಮಾ ದಂಪತಿಯ ಪುತ್ರಿ ದೀಪಕಾ ಮೊದಲ ಸಲವೇ ಪಿಯುಸಿ ಪಾಸ್ ಮಾಡಿ ಎಲ್ಲರಲ್ಲೂ ಆಶ್ಚರ್ಯ ಮೂಡಿ ಬೆರಗುಗಣ್ಣಿನಿಂದ ನೋಡು ಹಾಗೆ ಮಾಡಿದ್ದಾಳೆ.

ದೀಪಿಕಾ ಹುಟ್ಟಿದಾಗಿನಿಂದ ಯಾವುದೇ ಶಾಲಾ ಕಾಲೇಜಿಗೆ ಹೋಗಿಲ್ಲ.. ಕೊಠಡಿಯಲ್ಲಿ ಕುಳಿತು ಯಾವ ಶಿಕ್ಷಕರ ಕ್ಲಾಸ್ ಸಹ ಕೇಳಿಲ್ಲ. ಯಾವ ಟ್ಯೂಷನ್‍ಗೂ ಹೋಗಿಲ್ಲ. ಸರ್ ಹತ್ರ ನೋಟ್ಸ್ ಕಲೆಕ್ಟ್ ಮಾಡಿಲ್ಲ ತಾನೇ ಓದಿ, ತನ್ನ ಗ್ರಹಿಕಾ ಶಕ್ತಿಯಿಂದ ಮೊದಲ ಸಲ ಪರೀಕ್ಷೆ ಎದುರಿಸಿ ಪಿಯುಸಿ ಪಾಸ್ ಮಾಡಿದ್ದಾಳೆ. ಕಳೆದ ಎರಡು ವರ್ಷದ ಹಿಂದೆ ಸರ್ಕಾರ ಖಾಸಗಿಯಾಗಿ ನಡೆಸಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನೂ ಕೂಡ ದೀಪಿಕಾ ಪಾಸ್ ಮಾಡಿದ್ದಳು. ಓದಿನ ಜೊತೆಗೆ ಚಿತ್ರಕಲೆ, ಎಂಬ್ರಾಯ್ಡಿಂಗ್, ಕಂಪ್ಯೂಟರ್, ಟೈಲರಿಂಗ್ ಕೂಡ ಮಾಡಿದ್ದಾಳೆ. ಆರೋಗ್ಯ ಅವಳಿಗೆ ಕೈ ಕೊಟ್ಟರು, ಓದು ಮತ್ತಿತ್ತರ ಕಲೆಗಳು ದೀಪಿಕಾಳ ಕೈ ಹಿಡಿದಿದದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.. ತನ್ನಂತೆ ಅಪರೂಪದ ಕಾ’ಯಿ’ಲೆಯಿಂದ ಬ’ಳ’ಲುತ್ತಿರುವ ತನ್ನ ತಂಗಿಗೂ ತಾನೇ ಪಾಠ ಮಾಡಿ, ಗುರುವಾಗಿದ್ದಾಳೆ..

ಹೆತ್ತವರು ಕೂಡ ಕಳೆದ 20 ವರ್ಷಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರು, ಅವಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡಿಲ್ಲ.. ಆದರೆ ತಮ್ಮ ಮಕ್ಕಳನ್ನು ಯಾವುದೇ ಕೀಳಿರಿಮೆ ಬಾರದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡು. ಮಕ್ಕಳ ಕನಸಿಗೆ ಪೋಷಕರು ಕಣ್ಣಾಗಿದ್ದಾರೆ. ಓದಿ ದೊಡ್ಡವಳಾಗಿ ತನ್ನಂತೆ ಅಪರೂಪದ ಕಾ’ಯಿ’ಲೆಯಿಂದ ಬಳಲುವವರ ಸೇವೆ ಮಾಡಬೇಕೆಂಬ ಮಹದಾಸೆ ದೀಪಿಕಾಳದ್ದಾಗಿದೆ. ಹೆತ್ತವರು ಕೂಡ ಮಗಳಿಗೆ ಯಾವುದಾದರೂ ಒಂದು ಕೆಲಸ ಸಿಕ್ಕರೆ ಅವಳ ಜೀವನಕ್ಕೂ ಸಹಕಾರಿಯಾಗಲಿದೆ. ಜೊತೆಗೆ ನಮಗೂ ತುಸು ನೆಮ್ಮದಿ ಸಿಗಲಿದೆ ಎಂದು ಮಗಳ ಸಾಧನೆಗೆ ಶಹಬ್ಬಾಶ್ ಎಂದಿದ್ದಾರೆ.. ದೀಪಿಕಾಳ ಓದುವ ಛಲಕ್ಕೆ ಪೋಷಕರು ಬ’ಲ ತುಂಬಿದ್ದಾರೆ..